ರಕ್ತ ಸಂಬಂಧಗಳಲ್ಲಿ ಮದುವೆ ಬೇಡ
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲು ಸಲಹೆ
Team Udayavani, Dec 4, 2019, 4:47 PM IST
ಚಿತ್ರದುರ್ಗ: ರಕ್ತ ಸಂಬಂಧಗಳಲ್ಲಿ ಮದುವೆಯಾಗುವುದರಿಂದ ಜನಿಸುವ ಮಕ್ಕಳಿಗೆ ಅಂಗವೈಕಲ್ಯತೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ತರಾಸು ರಂಗಮಂದಿರದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಂಬಂಧಗಳಿಗೆ ಜೋತು ಬೀಳದೆ, ಸಂಬಂಧಗಳಿಂದ ಹೊರಗೆ ಮದುವೆಯಾಗುವ ಮೂಲಕ ಅಂಗವೈಕಲ್ಯ ತಡೆಯಬಹುದು ಎಂದರು. ಗರ್ಭಿಣಿಯರ ಮನಸ್ಸಿಗೆ ಘಾಸಿಯಾಗುವಂತೆ ಯಾರೂ ವರ್ತಿಸಬಾರದು. ಗರ್ಭಿಣಿಯರು ಆಹ್ಲಾದಕರ ವಾತಾವರಣದಲ್ಲಿರುವಂತೆ ನೋಡಿಕೊಳ್ಳಬೇಕು. ನವಮಾಸ ಮುಗಿಯುವವರೆಗೆ ಖಷಿಯಾಗಿದ್ದರೆ ತಾಯಿ ಹಾಗೂ ಮಗುವಿನ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.