ಜಾನಪದ ಸಂಸ್ಕೃತಿ ತಾಯಿ ಬೇರು
ಜಾನಪದ ಸಾಹಿತ್ಯ ಮೂಲ ಹಳ್ಳಿ•ಜನಜೀವನದ ಸಂಕೇತ ಜಾನಪದ
Team Udayavani, Aug 25, 2019, 9:50 AM IST
ಚಿತ್ತಾಪುರ: ಕನ್ನಡ ಜಾನಪದ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಬುಡಕಟ್ಟು ಮತ್ತು ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಉದ್ಘಾಟಿಸಿದರು.
ಚಿತ್ತಾಪುರ: ಜಾನಪದ ಕ್ಷೇತ್ರವು ಎಲ್ಲ ಸಾಹಿತ್ಯ, ಸಂಸ್ಕೃತಿಗೂ ತಾಯಿ ಬೇರು ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ.ಬಿ. ನಿಂಗಪ್ಪ ಹೇಳಿದರು.
ಪಟ್ಟಣದ ಆರ್.ಕೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಬುಡಕಟ್ಟು ಮತ್ತು ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನ ಬುದ್ಧಿ, ಮನಸ್ಸು ವಿಕಾಸವಾದಂತೆಲ್ಲ ಜಾನಪದ ಕಲೆಗಳು ಹೊರಹೊಮ್ಮಿದವು. ಜಾನಪದವು ಜನ ಸಮುದಾಯದ ಸಾಮಾಜಿಕ ಜೀವನದ ಸಂಕೇತ. ರಾಷ್ಟ್ರೀಯ ಸಂಸ್ಕೃತಿಯ ತಾಯಿ ಬೇರು ಎಂದು ಹೇಳಿದರು.
ಜಾನಪದ ಕ್ಷೇತ್ರವು ಮನುಷ್ಯನ ಜೀವನ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಮನುಷ್ಯನ ವೈವಿಧ್ಯಮಯ ಬದುಕಿನ ಗುಣಲಕ್ಷಣಗಳನ್ನು ಪದಗಳ ಮೂಲಕ ಕಟ್ಟಿಕೊಡುತ್ತದೆ. ಮಾನವ ಸಂಸ್ಕೃತಿಯ ಆರಂಭದಿಂದಲೇ ಆರಂಭವಾದ ಜಾನಪದ ಮಾನವ ಕುಲ ಉಳಿದಿರುವವರೆಗೂ ಉಳಿಯುತ್ತದೆ ಎಂದರು. ಪ್ರಾಚಾರ್ಯ ಡಾ| ವಿಜಯಕುಮಾರ ಸಾಲಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಾಹಿತ್ಯದ ಮೂಲ ಹಳ್ಳಿಗಳಿಂದ ಕೂಡಿದ್ದು, ಇಂದಿಗೂ ಜಾನಪದ ಸೊಗಡು ಜೀವಂತಿಕೆ ಹಳ್ಳಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಹೇಳಿದರು.
ಪ್ರಾಧ್ಯಪಕ ಡಾ| ಬಿ.ಕೆ. ಪಂಡಿತ ವಿಶ್ವ ಜಾನಪದ ದಿನಾಚರಣೆ, ಪ್ರೊ| ಮಲ್ಲಪ್ಪ ಮಾನೇಗಾರ ವಿಶ್ವ ಬುಡಕಟ್ಟು ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಚನ್ನವೀರ ಕಣ್ಣಗಿ, ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ಪಾಟೀಲ, ಬುಡ್ಗ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಮಾರುತಿ ಎಂ. ಮಾತನಾಡಿದರು.
ಇದೇ ವೇಳೆ ಜಾನಪದ ಕಲಾವಿದರಾದ ಗುರುಲಿಂಗಯ್ಯಸ್ವಾಮಿ ಮುತ್ತಗಾ, ಶಂಕ್ರಮ್ಮ ರಾಮತೀರ್ಥ, ದುಂಡಪ್ಪ ಗುಡ್ಲಾ ಕೊಲ್ಲೂರ, ಬಸವರಾಜ ಅವಂಟಿ ದಿಗ್ಗಾಂವ ಅವರನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕರಾದ ಎ.ಜಿ. ಖಾನ್, ಡಾ| ಸಾವಿತ್ರಿ ಕುಲಕರ್ಣಿ, ಡಾ| ಸಾವಿತ್ರಿ ದೇಸಾಯಿ, ಡಾ| ನುಜಹತ್ ಪರವೀನ್, ಪೂಜಾ ಹೊನಗುಂಟಿ, ವಿನಯ ಕಣ್ಣೂರ್, ಕಜಾಪ ಪದಾಧಿಕಾರಿಗಳಾದ ಜಗದೇವ ಕುಂಬಾರ, ರಾಜೇಂದ್ರ ಕೊಲ್ಲೂರ, ಬಸವರಾಜ ಹೊಟ್ಟಿ ಇತರರು ಇದ್ದರು. ಮಲ್ಲಪ್ಪ ಪ್ರಾರ್ಥಿಸಿದರು, ಡಾ| ಅನೀಲ ಮಂಡೋಲಕರ್ ಸ್ವಾಗತಿಸಿದರು, ಡಾ| ಶರಣಪ್ಪ ದಿಗ್ಗಾಂವ ನಿರೂಪಿಸಿದರು, ಮರೇಪ್ಪ ಮೇತ್ರೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.