ಗುಜರಿ ಸಾಮಗ್ರಿಯಿಂದ ತಯಾರಾಯ್ತು ಗಡಿಯಾರ!
ಷರಿಪ್ ಗಲ್ಲಿಯ ವಿಜಯಕುಮಾರ್ ಸಾಧನೆ•ಏಳು ವರ್ಷದ ಪ್ರಯತ್ನಕ್ಕೆ ಸಿಕ್ತು ಫಲ
Team Udayavani, Apr 22, 2019, 12:12 PM IST
ಚಿಕ್ಕಮಗಳೂರು: ಹುಟ್ಟಿನಿಂದಲೇ ಈತ ಮೂಗ ಹಾಗೂ ಕಿವುಡ. ಆದರೂ ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕೆಂಬುದು ಈತನ ಗುರಿ. ಹೀಗಾಗಿ ಅವರು ಗುಜರಿ ಅಂಗಡಿಯ ಸಾಮಾಗ್ರಿಗಳನ್ನು ಬಳಸಿ ದೊಡ್ಡ ಗಡಿಯಾರ ತಯಾರಿಸಿ ಜನರು ಹುಬ್ಬೆರುವಂತೆ ಮಾಡಿದ್ದಾರೆ.
ನಗರದ ದಂಟರಮಕ್ಕಿ ನಿವಾಸಿಯಾಗಿರುವ ವಿಜಯಕುಮಾರ್ ಈ ಗಡಿಯಾರ ತಯಾರಿಸಿದ ವ್ಯಕ್ತಿ.ಇವರು ಪಟ್ಟಣದ ಷರೀಫ್ ಗಲ್ಲಿಯಲ್ಲಿ ತಮ್ಮದೇ ಆದ ವಿಜಯ ವಾಚ್ ವರ್ಕ್ಸ್ ಅಂಗಡಿಯನ್ನು 20 ವರ್ಷಗಳಿಂದ ನಡೆಸುತ್ತಿದ್ದಾರೆ.
ಗುರಿ ಸಾಧಿಸಲು ಇವರು ಅದಕ್ಕಾಗಿ ಕಳೆದ ಏಳು ವರ್ಷಗಳಿಂದ ಸತತ ಪ್ರಯತ್ನ ಮಾಡಿದ್ದಾರೆ. 25 ವರ್ಷಗಳಿಂದ ಗಡಿಯಾರ ರಿಪೇರಿ ಕೆಲಸ ಮಾಡುತ್ತಿರುವ ಇವರು, ನಗರದ ಹೃದಯ ಭಾಗದಲ್ಲಿ ದೊಡ್ಡದೊಂದು ಗಡಿಯಾರ ಹಾಕಬೇಕೆಂಬ ತೀರ್ಮಾನ ಮಾಡಿದ್ದಾರೆ.
ಏಳು ವರ್ಷಗಳ ಪ್ರಯತ್ನದ ನಂತರ ಇವರು ದೊಡ್ಡ ಗಡಿಯಾರದ ಮಾದರಿ ಸಿದ್ಧಪಡಿಸಿದ್ದಾರೆ. ಈ ಗಡಿಯಾರವು ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಈ ಗಡಿಯಾರಕ್ಕೆ ಸೈಕಲ್, ಬೈಕ್, ಕಾರು, ಲಾರಿ ಸೇರಿದಂತೆ ವಿವಿಧ ವಾಹನಗಳ ಬಿಡಿಭಾಗಗಳು ಮತ್ತು ಬೋರ್‌ವೆಲ್ನ ಪೈಪ್‌ನ್ನು ಗುಜರಿ ಅಂಗಡಿಗಳಿಂದ ಖರೀದಿಸಿ ತಂದು ಬಳಸಿಕೊಂಡಿದ್ದಾರೆ.
ತಮ್ಮ ಪ್ರಯತ್ನದ ಬಗ್ಗೆ ಸಂತಸ ವ್ಯಕ್ತಪಡಿಸುವ ವಿಜಯಕುಮಾರ್, ಯಾರಾದರೂ ದಾನಿಗಳು ಗಡಿಯಾರದ ಕಂಬ ನಿರ್ಮಿಸಿಕೊಟ್ಟಲ್ಲಿ ಕಂಬದ ನಾಲ್ಕು ಬದಿಯಲ್ಲಿ ಗೋಚರವಾಗುವ ದೊಡ್ಡ ಗಡಿಯಾರವನ್ನು ತನ್ನ ಸ್ವಂತ ಖರ್ಚಿನಲ್ಲಿ ಮಾಡಿಕೊಡುವುದಾಗಿ ಪುತ್ರಿ ಪೂಜಾ ಮೂಲಕ ಹೇಳಿಸಿದರು.
ಸಿದ್ಧಹಸ್ತರು: ವಿಶೇಷ ಚೇತನ ವ್ಯಕ್ತಿಯಾದರೂ ಸಹ ಯಾರ ಮೇಲೂ ಅವಲಂಬಿತರಾಗದ ವಿಜಯಕುಮಾರ್, ವಾಚ್ ರಿಪೇರಿ ಮಾಡುವುದನ್ನು ಕಲಿತು ಅದರಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ಗಡಿಯಾರ ರಿಪೇರಿಯಲ್ಲಿ ಸಿದ್ಧಹಸ್ತರಾಗಿರುವ ಇವರು, ಯಾವುದೇ ರೀತಿಯ ವಾಚ್ ಮತ್ತು ಗಡಿಯಾರವನ್ನು ರಿಪೇರಿ ಮಾಡುತ್ತಾರೆ. ನಗರದ ಎಲ್ಲಿಯೂ ರಿಪೇರಿಯಾಗದೆ ಇರುವಂತಹ ವಾಚುಗಳನ್ನು ಸಹ ಇವರು ಸಿದ್ಧಪಡಿಸುತ್ತಾರೆ. ಕೇವಲ ಗಡಿಯಾರ ದುರಸ್ತಿ ಮಾಡುವುದಷ್ಟೇ ಅಲ್ಲದೆ, ವಿವಿಧ ಮಾದರಿಯ ಆಕರ್ಷಕ ಗಡಿಯಾರಗಳ ತಯಾರಿಕೆಯಲ್ಲಿಯೂ ಇವರು ಸಿದ್ಧಹಸ್ತರಾಗಿದ್ದಾರೆ. ಇವರು ಸಿದ್ಧಪಡಿಸಿದ ಗಡಿಯಾರಗಳು ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂಬ ಮಾತುಗಳು ಸಹ ಗ್ರಾಹಕರಿಂದ ಕೇಳಿ ಬರುತ್ತವೆ.
ಬಲ್ಬ್ ನಿಂದ ಗಡಿಯಾರ: ಹಿಂದಿನ ಕಾಲದಲ್ಲಿ ಸಮಯ ತಿಳಿಯಲು ಮರಳನ್ನು ಬಳಸುತ್ತಿದ್ದರು ಎಂಬುದನ್ನು ಕೇಳಿದ್ದೇವೆ. ಅದೇ ರೀತಿಯಲ್ಲಿ ವಿಜಯಕುಮಾರ್ ಬಲ್ಬ್ ಗಳನ್ನು ಬಳಸಿ ಗಡಿಯಾರ ಸಿದ್ಧಪಡಿಸಿದ್ದಾರೆ. ಎರಡು ಖಾಲಿ ಬಲ್ಬ್ಗಳನ್ನು ಒಂದರ ಕೆಳಗೊಂದು ಇಟ್ಟು ಒಂದು ಬಲ್ಬ್ನಲ್ಲಿ ಮರಳನ್ನು ತುಂಬಿಸಿದ್ದಾರೆ. ಮರಳು ಮತ್ತೂಂದು ಬಲ್ಬ್ಗೆ ಬೀಳುತ್ತಿರುತ್ತದೆ. ಮರಳು ಪ್ರತೀ ಗಂಟೆಗೊಮ್ಮೆ ಖಾಲಿಯಾಗುತ್ತದೆ. ವಿಜಯಕುಮಾರ್ ಸಿದ್ಧಪಡಿಸಿರುವ ಈ ಮಾದರಿಯ ಗಡಿಯಾರವನ್ನು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ದೇವಾಲಯದ ಆವರಣದಲ್ಲಿರುವ ವಸ್ತು ಪ್ರದರ್ಶನದಲ್ಲಿಯೂ ಇಡಲಾಗಿದೆ.
ಮಾತು ಬಾರದಿದ್ದರೂ ಸಹ ವಿಜಯಕುಮಾರ್ ಅಂಗಡಿಯಲ್ಲಿ ಸ್ವತಃ ವ್ಯವಹಾರ ಮಾಡುತ್ತಾರೆ. ಬರುವ ಗ್ರಾಹಕರೊಂದಿಗೆ ತಮ್ಮದೇ ಶೈಲಿಯಲ್ಲಿ ವ್ಯವಹರಿಸುವ ಅವರು, ಒಂದು ವೇಳೆ ಗ್ರಾಹಕರಿಗೆ ಅರ್ಥವಾಗದಿದ್ದಲ್ಲಿ ಬರೆದು ತೋರಿಸಿ ಸಂವಹನ ನಡೆಸುತ್ತಾರೆ.
ವಿಜಯಕುಮಾರ್ ಅವರಿಗೆ ಒಬ್ಬ ಮಗ ಹಾಗೂ ಮಗಳು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಮಗ ಪವನ್ ಸಹ ಅಂಗಡಿಯಲ್ಲಿಯೇ ಇದ್ದು ತಂದೆಗೆ ವ್ಯವಹಾರದಲ್ಲಿ ಸಹಕರಿಸುತ್ತಿದ್ದಾರೆ. ಕರಾಟೆಯಲ್ಲಿ ಸಾಧನೆ ಮಾಡಿರುವ ವಿಜಯಕುಮಾರ್ ಬ್ಲ್ಯಾಕ್ ಬೆಲ್ಟ್ ಪಟು. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಪಡೆದಿದದಾರೆ. ಅಲ್ಲದೇ ಕುಂಚದಲ್ಲಿ ಚಿತ್ರ ಕಲಾವಿದರೂ ಹೌದು.
ಸರ್ಕಾರದಿಂದ ನೆರವು ಪಡೆದಿಲ್ಲ: ವಿಶೇಷ ಚೇತನರಾಗಿರುವ ವಿಜಯಕುಮಾರ್ ಸರ್ಕಾರದಿಂದ ನೀಡುವ ಅಂಗವಿಕಲ ವೇತನವನ್ನು ಮಾತ್ರ ಪಡೆಯುತ್ತಿದ್ದಾರೆ. ಅದನ್ನು ಹೊರತುಪಡಿಸಿ ಬೇರಾವುದೇ ನೆರವನ್ನು ಸರ್ಕಾರದಿಂದ ಈವರೆಗೂ ಪಡೆದುಕೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.