ನೀತಿ ಸಂಹಿತೆ ಯಕ್ಷಗಾನ ಮೇಳಕ್ಕೆ ಕಂಟಕ

ಸುಮಾರು 48 ಮೇಳಗಳಿಗೆ ಲಕ್ಷಾಂತರ ರೂ. ಹಾನಿಕೆಲಸವಿಲ್ಲದೆ ಕಾಲ ಕಳೆಯಬೇಕಾದ ಪರಿಸ್ಥಿತಿ ಕಲಾವಿದರದ್ದು

Team Udayavani, Apr 6, 2019, 1:37 PM IST

06-April-18

ಹೊನ್ನಾವರ: ಯಕ್ಷಗಾನ ಮೇಳದ ಬಣ್ಣದ ಚೌಕಿಮನೆಯಲ್ಲಿ ವಿವಿಧ ಪಾತ್ರಗಳ ವೇಷ ಕಟ್ಟಿಕೊಳ್ಳಲು ಸಿದ್ಧರಾದ ಕಲಾವಿದರು.

ಹೊನ್ನಾವರ: ಪ್ರತಿ ಚುನಾವಣೆಯಲ್ಲೂ ಯಕ್ಷಗಾನ ಮೇಳಗಳ ಮೇಲೆ ಚುನಾವಣಾ ನೀತಿಸಂಹಿತೆಯ ವಕ್ರದೃಷ್ಟಿ ಬೀಳುತ್ತದೆ. ಸೀಜನ್‌ನಲ್ಲಿ ತಿಂಗಳು ಗಟ್ಟಲೆ ಯಕ್ಷಗಾನ ನಿಂತು ಹೋಗುತ್ತದೆ. ಯಕ್ಷಗಾನಕ್ಕೆ ಮಾತ್ರ ಯಾಕೆ ಈ ನೀತಿ ?

ಯಕ್ಷಗಾನ ಆಟ ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡದಲ್ಲಿ ಅತಿ ಹೆಚ್ಚು ಪ್ರದರ್ಶಿತವಾಗುತ್ತದೆ. ಚುನಾವಣಾ ನೀತಿಸಂಹಿತೆ ಜಾರಿಯಾದ ದಿನದಿಂದ ಫಲಿತಾಂಶ ಬರುವವರೆಗೆ ತಿಂಗಳ ಕಾಲ ಆಟ ಪ್ರದರ್ಶನಕ್ಕೆ ಪರವಾನಗಿ ಕೊಡುವುದಿಲ್ಲ. ಕಲಾಧರ ಯಕ್ಷಗಾನ ಮಂಡಳಿ ಕಳೆದವಾರ ಅರ್ಧಕ್ಕೆ ಆಟ ನಿಲ್ಲಿಸಬೇಕಾಗಿ ಬಂತು. ಯಕ್ಷಗಾನ ಪಾತ್ರಧಾರಿಯೊಬ್ಬ ದೇಶಭಕ್ತಿಯ ಮಾತನ್ನಾಡಿದ್ದಕ್ಕೆ ಆತನ ಮೇಲೆ ಮೊಕದ್ದಮೆ ದಾಖಲಾಯಿತು. ವೃತ್ತಿಮೇಳಗಳಾದ ಸಾಲಿಗ್ರಾಮ, ಪೆರ್ಡೂರು, ಕಲಾಧರ ಮೇಳಗಳು
ಆಟ ನಿಲ್ಲಿಸಿ ತಿಂಗಳಾಗುತ್ತ ಬಂತು. ವಾಹನ ಬಾಡಿಗೆ, ಕಾರ್ಮಿಕರ ಪಗಾರು, ಕೊಡಲೇ ಬೇಕು. ಕಲಾವಿದರಿಗೆ ಕೊಡುವುದು ಕಷ್ಟ.

ಮೂರು ಜಿಲ್ಲೆಗಳಲ್ಲಿ ಒಟ್ಟಿಗೆ 48 ಮೇಳಗಳಿವೆ. ಕೆಲವು ಬಯಲಾಟದ ಮೇಳಗಳು, ಕೆಲವು ದೇವಸ್ಥಾನದ ಸೇವೆಯ ಆಟದ ಮೇಳಗಳು. ಸರ್ಕಾರದ ಆಡಳಿತದಲ್ಲಿರುವ ಕೆಲವು ಸೇವೆಯ ಆಟದ ಮೇಳಗಳಿಗೆ ರಿಯಾಯತಿ ಕೊಡಲಾಗಿದೆ. ಎಲ್ಲ ಮೇಳಗಳು ಹಣ ಪಡೆದು ಆಟ ಪ್ರದರ್ಶಿಸುವಾಗ ಕೆಲವು ಮೇಳಗಳಿಗೆ ರಿಯಾಯತಿ ಏಕೆ ? ಇದು ಮೂರು ಜಿಲ್ಲೆಯ ಸಮಸ್ಯೆ ಆಗಿರುವುದರಿಂದ
ಕೇಳುವವರಿಲ್ಲ. ಯಕ್ಷಗಾನ ಮೇಳಗಳು ಪೌರಾಣಿಕ ಪ್ರಸಂಗ ಪ್ರದರ್ಶಿಸುತ್ತವೆ. ಅವಿದ್ಯಾವಂತರಾದರೂ ಪ್ರಜ್ಞಾವಂತರೇ ಆಟ ನೋಡುತ್ತಾರೆ. ಕ್ರಿಮಿನಲ್‌ಗ‌ಳು ಆಟಕ್ಕೆ ಬರುವುದಿಲ್ಲ. ಅದಲ್ಲದೆ ಯಕ್ಷಗಾನ ಈ ರಾಜ್ಯದ ಸಾಂಸ್ಕೃತಿಕ ಪ್ರಾತಿನಿಧಿ ಕ ಕಲೆ. ಆಟ ನಿಂತರೆ ಮೇಳಕ್ಕೆ ನಿತ್ಯ ಕನಿಷ್ಠ 25ಸಾವಿರ ರೂ. ಖರ್ಚಿದೆ ಎಂದು ವಿದ್ಯಾಧರ ಜಲವಳ್ಳಿ, ಕಿಶನ್‌ಕುಮಾರ್‌ ಹೆಗಡೆ, ನೀಲ್ಕೋಡ ಶಂಕರ
ಹೆಗಡೆ, ಮೊದಲಾದವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಂಸ್ಕಾರ ನೀಡುವ ಯಕ್ಷಗಾನ ಬಂದ್‌ ಮಾಡುವ ಚುನಾವಣಾ ಆಯೋಗ ಹೊಡೆದಾಟಕ್ಕೆ ಕಾರಣವಾಗುವ ವೈನ್‌ ಶಾಪ್‌ ಗಳನ್ನು ಯಾಕೆ ನೀತಿ ಸಂಹಿತೆ ದಿನದಿಂದ ಬಂದ್‌ ಮಾಡುವುದಿಲ್ಲ. ಮತದಾರರನ್ನು ಆಕರ್ಷಿಸಲು ನಾಚ್‌, ಕ್ಯಾಬರೆ ನಡೆಯುತ್ತದೆ. ಎಲ್ಲ ಥೇಟರ್‌ಗಳಲ್ಲಿ ಸಿನಿಮಾದ ಮೂರು ಪ್ರದರ್ಶನವಿರುತ್ತದೆ. ಸಿನಿಮಾ ಮತ್ತು ಖಾಸಗಿ ಚಾನೆಲ್‌ಗ‌ಳ ಧಾರವಾಹಿಗಳಲ್ಲಿ ಹಿಂಸೆ
ವಿಜೃಂಭಿಸುವ ಕಥೆಗಳಿರುತ್ತವೆ. ಇವೆಲ್ಲ ನಡೆಯುವಾಗ ನೀತಿಸಂಹಿತೆ ಅನ್ವಯಿಸಲು ಯಕ್ಷಗಾನ ಯಾವ ತಪ್ಪು ಮಾಡಿದೆ ಎಂದು ಕಲಾವಿದರು, ಸಂಘಟಕರು ಕೇಳುತ್ತಾರೆ. ಕಳೆದ ವರ್ಷ ವಿಧಾನಸಭಾ ಚುನಾವಣೆ. ಈ ಬಾರಿ ಲೋಕಸಭಾ ಚುನಾವಣೆ, ಮುಂದೆ ಬೇಸಿಗೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ.
ಬೇಸಿಗೆಯ 4ತಿಂಗಳು ಮಾತ್ರ ನಡೆಯುವ ಯಕ್ಷಗಾನ ಎರಡು ತಿಂಗಳು ನಿಂತರೆ ಈ ಕ್ಷೇತ್ರಕ್ಕೆ ತೊಡಗಿಸಿದ ಕೋಟ್ಯಾಂತರ ರೂಪಾಯಿಯಲ್ಲಿ ಬಡ್ಡೆ ಹುಟ್ಟುವುದಿಲ್ಲ.

ರಾತ್ರಿ 10ರ ನಂತರ ಧ್ವನಿವರ್ಧಕಗಳನ್ನು ಥೇಟರ್‌ ಒಳಗೆ ಮಾತ್ರ ಕೇಳಿಸುವಂತೆ ಈಗ ಬದಲಾಯಿಸುತ್ತಾರೆ. ಯಾವ ಮೇಳವೂ ರಾಜಕೀಯವಾಗಿ ತಮ್ಮ ವೇದಿಕೆ ಒದಗಿಸುವುದಿಲ್ಲ. ಕಥೆಯಲ್ಲಿ ಸಮಕಾಲೀನ ರಾಜಕೀಯ ಹೋಲಿಕೆ ಯಾದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ. ಯಕ್ಷಗಾನ ಸ್ತ್ರೀ ಪಾತ್ರಧಾರಿಯೊಬ್ಬರು ಯುದ್ಧದಲ್ಲಿ
ತನ್ನ ಮೂವರು ಮಕ್ಕಳನ್ನು ಕಳೆದುಕೊಂಡೆ..ಮತ್ತೆ ಯುದ್ಧಕ್ಕೆ ಕಳಿಸಲು ಇನ್ನೊಬ್ಬ ಮಗನಿಲ್ಲ ಎಂದು ಅಳುತ್ತಾಳೆ. ಈ ಪಾತ್ರಧಾರಿ ಮೇಲೆ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

1957ರ ನಂತರ ವರ್ಷವೂ ಒಂದಲ್ಲ ಒಂದು ಚುನಾವಣೆ ಬರುತ್ತಲೇ ಇದೆ. ಕುಂಬ್ಳೆ ಸುಂದರರಾಯರು ಯಕ್ಷಗಾನ ವೇಷದಲ್ಲಿ ಪೌರಾಣಿಕ
ಕಥೆಯನ್ನು ಸಮಕಾಲೀನ ರಾಜಕೀಯಕ್ಕೆ ಹೋಲಿಸಿ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಎಲ್ಲ ಪಕ್ಷದ ಜನ ಖುಷಿ ಪಡುತ್ತಿದ್ದರು. ಸುಂದರರಾಯರು ಒಂದು ಅವಧಿಗೆ ಶಾಸಕರಾದರು. ಇಷ್ಟು ವರ್ಷ ಇಲ್ಲದ್ದು ಇತ್ತೀಚಿನ ವರ್ಷಗಳಲ್ಲಿ ನೀತಿಸಂಹಿತೆ ಹೆಸರಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ತಡೆ ಒಡ್ಡುತ್ತಿರುವುದು ನ್ಯಾಯವಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯದ, 48 ಮೇಳಗಳ ಮತ್ತು ನೂರಾರು ಹವ್ಯಾಸಿ ಕಲಾವಿದರ, ಅವರನ್ನು ಅವಲಂಭಿಸಿದವರ ಅನ್ನದ ಪ್ರಶ್ನೆಯೂ ಹೌದು. ಚುನಾವಣಾ ನೀತಿಸಂಹಿತೆ ಕಾನೂನಿನ ಹೆಸರಿನಲ್ಲಿ ನಾಡಿನ ಶ್ರೇಷ್ಠ ಕಲೆಗೆ ಕಂಟಕವಾಗುತ್ತಿದೆ. ಇದನ್ನು ಕಲಾವಿದರು, ಮೇಳಗಳು ಪ್ರಶ್ನಿಸಬೇಕು, ಮತ ಪಡೆಯಲು ಬಂದವರನ್ನು ಜನ
ಕೇಳಬೇಕು, ಚುನಾವಣಾ ಆಯೋಗ ಯಕ್ಷಗಾನ ಪ್ರದರ್ಶನಕ್ಕೆ ಪರವಾನಗಿ ಕೊಡಬೇಕು.

ಜೀಯು, ಹೊನ್ನಾವರ

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.