ಮಸ್ಕಿಗೆ ನ್ಯಾಯಾಲಯ ಮಂಜೂರು
ತಾತ್ಕಾಲಿಕ ನ್ಯಾಯಾಲಯ ಸ್ಥಾಪನೆಗೆ ಎಪಿಎಂಸಿ ಕಟ್ಟಡ ಪರಿಶೀಲಿಸಿದ ನ್ಯಾ| ಶಂಕರರಾಮ
Team Udayavani, Apr 10, 2019, 3:54 PM IST
ಮಸ್ಕಿ: ನ್ಯಾಯಾಲಯ ಸ್ಥಾಪನೆಗಾಗಿ ಎಪಿಎಂಸಿ ಕಟ್ಟಡವನ್ನು ಪರಿಶೀಲಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರರಾಮ.
ಮಸ್ಕಿ: ಕಕ್ಷಿದಾರರ ಅನುಕೂಲಕ್ಕಾಗಿ ನೂತನ ತಾಲೂಕು ಮಸ್ಕಿ ಪಟ್ಟಣಕ್ಕೆ ನ್ಯಾಯಾಲಯ ಮಂಜೂರಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರರಾಮ್ ಹೇಳಿದರು.
ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನೂತನ ತಾಲೂಕಿನ ಭೌಗೋಳಿಕ ಗಡಿಗಳನ್ನು ಗುರುತಿಸಿದ್ದು, ನೂತನ ನ್ಯಾಯಾಲಯ ಸ್ಥಾಪನೆಗೆ ಮಂಜೂರಾತಿ ದೊರೆತಿದೆ
ಎಂದರು.
ಲಿಂಗಸಗೂರು, ಮಾನ್ವಿ, ಸಿಂಧನೂರು ತಾಲೂಕಿನ ಕೆಲ ಗ್ರಾಮಗಳನ್ನು ಒಳಗೊಂಡ ನೂತನ ಮಸ್ಕಿ ತಾಲೂಕಿನ ಜನತೆಗೆ
ಅನುಕೂಲಕ್ಕಾಗಿ ಶೀಘ್ರ ನ್ಯಾಯಾಲಯ ಸ್ಥಾಪನೆಗೆ ಹೈಕೋರ್ಟ್‌ಗೆ ಮಾಹಿತಿ ಕಳುಹಿಸಲಾಗುವುದು. ಪಟ್ಟಣದ ಸಿಂಧನೂರು ರಸ್ತೆಯಲ್ಲಿನ ಎಪಿಎಂಸಿ ಕಟ್ಟಡವನ್ನು ತಾತ್ಕಾಲಿಕ ನ್ಯಾಯಾಲಯ
ಸ್ಥಾಪನೆಗಾಗಿ ಗುರುತಿಸಲಾಗಿದೆ. ಈ ಸಂಬಂಧ ಎಪಿಎಂಸಿ ಆಡಳಿತ ಮಂಡಳಿಯಿಂದ ಪರವಾನಗಿಗೆ ಸಂಬಂಧಿಸಿದಂತೆ ಠರಾವು ಪತ್ರ ಪಡೆದು ಹೈಕೋರ್ಟ್‌ಗೆ ಕಳುಹಿಸಿಕೊಡಲಾಗುವುದು ಎಂದರು.
ನ್ಯಾಯಾಲಯ ಸ್ಥಾಪನೆಗಾಗಿ ಸರಕಾರ ಹಾಗೂ ಹೈಕೋರ್ಟ್‌ನಲ್ಲಿ
ಹಲವಾರು ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯಬೇಕಾಗಿದ್ದು ಕೊಂಚಮಟ್ಟಿನ ವಿಳಂಬವಾಗಬಹುದು. ಅದಾಗ್ಯೂ ತ್ವರಿತವಾಗಿ ನ್ಯಾಯಾಲಯ ಸ್ಥಾಪನೆಗಾಗಿ ಸ್ಥಳೀಯ ಮುಖಂಡರು ಸೇರಿದಂತೆ ಎಲ್ಲರಸಹಕಾರ ಪಡೆಯಲಾಗುವುದು ಎಂದು ಹೇಳಿದರು.
ಲಿಂಗಸುಗೂರು ಹಿರಿಯ ಶ್ರೇಣಿ ನ್ಯಾಯಾಧೀಶ ಲಕ್ಷ್ಮೀ ಕಾಂತ್ ಮಿಸ್ಕಿನ್, ನ್ಯಾಯವಾದಿ ನಾಗರಾಜ ಮಸ್ಕಿ, ಲಿಂಗಸುಗೂರು
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಂಬಣ್ಣ ಮಂಚಾಲಿ, ಮಸ್ಕಿ ಸಿಪಿಐ ಚನ್ನಯ್ಯ ಹಿರೇಮಠ, ತಹಶೀಲ್ದಾರ್ ಬಲರಾಮ
ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ದುರುಗಣ್ಣ, ಎ.ಇ.ಇ ಸಿ.ಎಸ್. ಪಾಟೀಲ, ಎಪಿಎಂಸಿ ಕಾರ್ಯದರ್ಶಿ ರಂಗನಾಥ, ಪಿಎಸ್‌ಐ ಶಶಿಧರ, ವಕೀಲರಾದ ರುದ್ರಪ್ಪ ಎಲಿಗಾರ, ಮಹಾಲಿಂಗಪ್ಪ ಪಾಟೀಲ,
ಆಶಿಕ್ ಅಹಮದ್, ಸೋಮಶೇಖರ, ಮಲ್ಲಿಕಾರ್ಜುನ, ಪ್ರಹ್ಲಾದ್ ಡಿಗ್ಗಾವಿ, ವೀರೇಶ ಸ್ಥಾವರಮಠ, ಬಸವರಾಜ ಹೊಸೂರು, ನಬಿ ಶೇಡ್ಮಿ, ಕೆ.ಎಲ್.ನಾಯಕ ಇತರರು ಇದ್ದರು.
ಶಾಸನಕ್ಕೆ ಭೇಟಿ: ಇದೇ ವೇಳೆ ನ್ಯಾಯಾಧೀಶರು ಮಸ್ಕಿಯ ಇತಿಹಾಸ ಪ್ರಸಿದ್ದ ಅಶೋಕ ಶಿಲಾಶಾಸನಕ್ಕೆ ಭೇಟಿ ನೀಡಿ ಶಾಸನ ಕುರಿತು ಸಮಗ್ರ ಮಾಹಿತಿ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.