Fraud Case ಸುಳ್ಳು ಬಾಡಿಗೆ ಕರಾರು ಪತ್ರ ಮಾಡಿ 1.14 ಕೋ.ರೂ. ವಂಚನೆ
Team Udayavani, Nov 28, 2023, 11:26 PM IST
ಮಂಗಳೂರು: ಸುಳ್ಳು ಬಾಡಿಗೆ ಕರಾರು ಪತ್ರ ಮಾಡಿ 1,14,10,000 ರೂ. ಪಡೆದು ವಂಚಿಸಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರತೀಶ್ ಬಿ.ಎನ್. ವಂಚನೆಗೆ ಒಳಗಾದವರು. ರಾಮ್ ಮೋಹನ್ ರೈ ಆರೋಪಿ.
ರತೀಶ್ ಬಿ.ಎನ್ ರವರು 2020-21 ರಲ್ಲಿ ಮಹೇಶ್ ಫೌಂಡೇಶನ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು ಈ ಸಂಸ್ಥೆಯನ್ನು ಮಂಗಳೂರಿನ ಮಠದಕಣಿಯಲ್ಲಿರುವ ಗ್ಲೋಬಲ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಪ್ರ„.ಲಿ ಕಟ್ಟಡದಲ್ಲಿ ತಿಂಗಳಿಗೆ 10 ಲಕ್ಷ ಬಾಡಿಗೆ ಮತ್ತು 40 ಲಕ್ಷ ಮುಂಗಡ ಠೇವಣಿ ಇಟ್ಟು ಪ್ರಾರಂಭಿಸಿದ್ದರು.
ಈ ಕಟ್ಟಡವನ್ನು ರಾಮ್ ಮೋಹನ್ ರೈ 2021 ಸೆಪ್ಟೆಂಬರ್‌ನಲ್ಲಿ ಬಾಡಿಗೆ ಕರಾರಿನಂತೆ 30 ವರ್ಷಗಳಿಗೆ ಬಾಡಿಗೆಗೆ ಕೊಟ್ಟಿದ್ದರು. ರಾಮ್ ಮೋಹನ್ ರೈ ಯವರು ಗುರದೇವ ಎಜುಕೇಶನ್ ಫೌಂಡೇಶನ್ ಎಂಬ ಸಂಸ್ಥೆ ನಡೆಸುತ್ತಿದ್ದು ಕಟ್ಟಡದ ಮಾಲೀಕರು ತಾನೇ ಎಂದು ನಂಬಿಸಿ, ಮೋಸ ಮತ್ತು ವಂಚನೆಗೈಯುವ ಉದ್ದೇಶದಿಂದ ಸುಳ್ಳು ಬಾಡಿಗೆ ಕರಾರು ಪತ್ರವನ್ನು ಮಾಡಿದ್ದಾರೆ. ಬಾಡಿಗೆ ಕರಾರು ಪತ್ರದಂತೆ ರಾಮ್ ಮೋಹನ್ ರೈ ರವರಿಗೆ ತಿಂಗಳಿಗ 10 ಲಕ್ಷದಂತೆ ಒಟ್ಟು 70.16 ಲಕ್ಷ ರೂಪಾಯಿ ಬಾಡಿಗೆಯ ರೂಪದಲ್ಲಿ ರತೀಶ್ ನೀಡಿದ್ದಾರೆ.
ಕಟ್ಟಡದ ಮಾಲಿಕತ್ವ ಡಾ. ಸುಶೀಲ್ ಜತ್ತಣ್ಣ ಮತ್ತು ಸುದರಾಮ್ ರೈ ರವರ ಹೆಸರಿನಲ್ಲಿ ಇದ್ದು ರಾಮ್ ಮೋಹನ್ ರೈ ರವರು ನಿಜವಾದ ಮಾಲೀಕರಲ್ಲ ಎಂದು ಗೊತ್ತಿದ್ದರೂ ಮೋಸ ಮತ್ತು ವಂಚನೆ ಗೈದು ದುರ್ಲಾಭಗೊಳಿಸುವ ಉದ್ದೇಶದಿಂದ ಸುಳ್ಳು ಬಾಡಿಗೆ ಕರಾರು ಪತ್ರ ಮಾಡಿ 40 ಲಕ್ಷ ರೂಪಾಯಿ ಮುಂಗಡ ಠೇವಣಿ ಮತ್ತು ತಿಂಗಳಿಗೆ ರೂ. 10 ಲಕ್ಷದಂತೆ ಬಾಡಿಗೆ ಹಣ ಪಡೆದು 70.16 ಲಕ್ಷ ರೂಪಾಯಿಯನ್ನು ವಂಚಿಸಿರುತ್ತಾರೆ. ಈ ರೀತಿ ರಾಮ್ ಮೋಹನ್ ರೈ ಒಟ್ಟು ರೂ. 1,14,10,000 ರೂ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.