ಉಡುಗೊರೆ ಆಮಿಷ: 1.35 ಲ.ರೂ. ವಂಚನೆ
Team Udayavani, Jan 28, 2021, 7:55 AM IST
ಮಂಗಳೂರು: ವ್ಯಕ್ತಿಯೋರ್ವರಿಗೆ ಚಿನ್ನ ಮತ್ತು ಡೈಮಂಡ್ ಉಡುಗೊರೆ ಕಳುಹಿಸಿ ಕೊಡುವುದಾಗಿ ಹೇಳಿ ಅನಂತರ ಅವರಿಂದ 1.35 ಲ.ರೂ.ಗಳನ್ನು ವರ್ಗಾವಣೆ ಮಾಡಿಸಿ ವಂಚಿಸಿದ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೋರ್ವರಿಗೆ ಜ. 3ರಂದು ಫೇಸ್ಬುಕ್ ಖಾತೆಯ ಮೂಲಕ ರೇನಾಲ್ಟ್ ಫ್ರೀನ್ಸ್ ಕ್ರಿಸ್ಟಫರ್ ಪರಿಚಯವಾಗಿದ್ದ. ಫೇಸ್ಬುಕ್ನಲ್ಲೇ ಚಾಟಿಂಗ್ ಮಾಡುತ್ತಿದ್ದ ರೇನಾಲ್ಟ್ 35 ಲ.ರೂ. ಮೊತ್ತದ ಚಿನ್ನ ಹಾಗೂ ಡೈಮಂಡ್ ಉಡುಗೊರೆಯಾಗಿ ನಿಮಗೆ ಕಳುಹಿಸಿಕೊಡುವುದಾಗಿ ವ್ಯಕ್ತಿಯನ್ನು ನಂಬಿಸಿದ್ದ. ಜ. 18ರಂದು ಆ ವ್ಯಕ್ತಿಗೆ 8754231656 ಈ ಸಂಖ್ಯೆಯಿಂದ ಓರ್ವ ಮಹಿಳೆ ಕರೆ ಮಾಡಿ ತನ್ನನ್ನು ಹೊಸದಿಲ್ಲಿಯ ಕಸ್ಟಮ್ ಆಫೀಸರ್ ಎಂದು ಪರಿಚಯಿಸಿಕೊಂಡಿದ್ದಾಳೆ. ದಿಲ್ಲಿ ಏರ್ಪೋರ್ಟ್ಗೆ ಒಂದು ಪಾರ್ಸೆಲ್ ಬಂದಿದ್ದು, ಅದರ ಡೆಲಿವರಿ ಚಾರ್ಜ್ ಆಗಿ 30,000 ರೂ.ಗಳನ್ನು ವರ್ಗಾವಣೆ ಮಾಡುವಂತೆ ಹೇಳಿದ್ದಳು. ಜ. 20ರಂದು ಮತ್ತೆ ಮಹಿಳೆ ಆ ವ್ಯಕ್ತಿಗೆ ಕರೆ ಮಾಡಿ 1.5 ಲ.ರೂ.ಗಳನ್ನು ವಿವಿಧ ಹಂತಗಳಲ್ಲಿ ವಿವಿಧ ಬ್ಯಾಂಕ್ಗಳ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾಳೆ. ಹೀಗೆ ಒಟ್ಟು 1.35 ಲ.ರೂ.ಗಳನ್ನು ಆಕೆಯ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾಳೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್ಮಸ್ ಸಂಭ್ರಮ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.