ಅಪಾಯಕ್ಕೆ ಸಿಲುಕಿದ ಮೀನುಗಾರಿಕಾ ದೋಣಿಯಿಂದ 10 ಮಂದಿ ರಕ್ಷಣೆ
Team Udayavani, May 27, 2021, 6:46 PM IST
ಪಣಂಬೂರು : ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ವೇಳೆ ತಾಂತ್ರಿಕ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ತಮಿಳುನಾಡು ನೋಂದಣಿ ಹೊಂದಿದ್ದ ಲಾರ್ಡ್ ಆಫ್ ಓಷಿಯನ್ ಮೀನುಗಾರಿಕಾ ದೋಣಿಯಿಂದ 10 ಮಂದಿ ಮೀನುಗಾರರನ್ನು ಕರ್ನಾಟಕ ಕೋಸ್ಟ್ಗಾರ್ಡ್ ರಕ್ಷಿಸಿ ಸುರಕ್ಷಿತವಾಗಿ ಕರೆತಂದಿದೆ.
7 ಮಂದಿ ತ.ನಾ ಹಾಗೂ ೩ ಮಂದಿ ಕೇರಳದ ಮೀನುಗಾರರಾಗಿದ್ದಾರೆ.ಸ್ಟೀಫನ್ (45), ನೆಪೋಲಿಯನ್ ( 60) ಪ್ರಭು (38), ಸಾಜಿ (41), ರಾಜಿ (38), ಸಾಗರಾಜಿ (50) ಜಾರ್ಜ್ ಬುಷ್(50), ಕ್ರಿಸ್ಪಿನ್( 38), ಸಜನ್ (26), ಡೊನಿಯೊ( 38)ರಕ್ಷಿತ ಮೀನುಗಾರರಾಗಿದ್ದಾರೆ.
ಮಂಗಳೂರು ಬಂದರಿನಿಂದ 20 ನಾ.ಮೈ (37 ಕಿ.ಮೀ)ದೂರದಲ್ಲಿ ಮೀನುಗಾರಿಕೆಯಲ್ಲಿ ನಿರತವಾಗಿದ್ದಾಗ ದೋಣಿಯ ಎಂಜಿನಿ ವೈಫಲ್ಯಕ್ಕೀಡಾಯಿತು. ಮೀನುಗಾರರು ಕಳಿಸಿದ ಅಪಾಯದ ಸಂದೇಶವನ್ನು ಪಡೆದ ಕೋಸ್ಟ್ಗಾರ್ಡ್ನ ರಾಜ್‌ದೂತ್ ಕಣ್ಗಾವಲು ಹಡಗು ಎನ್‌ಎಂಪಿಟಿಯಿಂದ ಕಾರ್ಯಾಚರಣೆ ನಡೆಸಿತಲ್ಲದೆ ದೋಣಿ ಸಹಿತ ೧೦ ಮಂದಿಯನ್ನು ಹಳೆ ಬಂದರಿಗೆ ತಲುಪಿಸಿತು.ಕಳೆದ ತೌಖ್ತೆ ಚಂಡಮಾರುತದ ಸಂದರ್ಭ ಈ ದೋಣಿ ಪೋರ್‌ಬಂದರಿನಲ್ಲಿ ಲಂಗರು ಹಾಕಿತ್ತು.
ಬಳಿಕ ಮತ್ತೆ ಮೀನುಗಾರಿಕೆಗೆ ತೆರಳಿತ್ತು. ಸ್ಥಳೀಯ ಆಲ್ ಬದ್ರಿಯಾ ಮೀನುಗಾರಿಕಾ ದೋಣಿ ಕೆಟ್ಟು ಹೋದ ದೋಣಿಯನ್ನು ಎಳೆದು ತರುವಲ್ಲಿ ನೆರವು ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.