1923ರ ಮಾರಿ ಬೊಳ್ಳಕ್ಕೆ 100 ವರ್ಷ ಪೂರ್ಣ!
ಪಾಣೆಮಂಗಳೂರಿನ ಕಟ್ಟಡಗಳಲ್ಲಿ ಮುಳುಗಿದ ಗುರುತು
Team Udayavani, Jul 27, 2023, 7:36 AM IST
ಬಂಟ್ವಾಳ: ಇಡೀ ಬಂಟ್ವಾಳವನ್ನೇ ಮುಳುಗಿಸಿದ್ದ ಮಾರಿ ಬೊಳ್ಳ (ಭೀಕರ ಪ್ರವಾಹ)ಕ್ಕೆ 100 ವರ್ಷ ತುಂಬುತ್ತಿದೆ. ಆ ಪ್ರವಾಹದ ಭೀಕರತೆಯನ್ನು ಸ್ಥಳೀಯರು ಮರೆಯಬಾರದು ಎಂಬ ಕಾರಣಕ್ಕೆ ಬಂಟ್ವಾಳ-ಪಾಣೆಮಂಗಳೂರು ಭಾಗದ ಕೆಲವು ಪುರಾತನ ಕಟ್ಟಡಗಳಲ್ಲಿ ಪ್ರವಾಹ ಆವರಿಸಿದ್ದ ಜಾಗಕ್ಕೆ ಹಾಕಿರುವ ಗುರುತು ಇನ್ನೂ ಮಾಸಿಲ್ಲ !
1923ರ ಆಗಸ್ಟ್ 7ರಂದು ಭೀಕರ ಪ್ರವಾಹ ಬಂಟ್ವಾಳ, ಪಾಣೆಮಂಗಳೂರು ಪಟ್ಟಣ ಸೇರಿದಂತೆ ಸಾಕಷ್ಟು ಊರುಗಳನ್ನು ಮುಳುಗಿಸಿತ್ತು. ಮುಂದಿನ ಆಗಸ್ಟ್ 7ಕ್ಕೆ ಆ ಘಟನೆಗೆ ನೂರು ವರ್ಷ ತುಂಬುವುದರಿಂದ ಆ ದಿನವನ್ನು ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಅದೇ ಸಮಯದಲ್ಲಿ (1923ರಲ್ಲಿ) ಸದ್ಗುರು ನಿತ್ಯಾನಂದ ಸ್ವಾಮಿಗಳು ಬಂಟ್ವಾಳಕ್ಕೆ ಆಗಮಿಸಿದ್ದು, ಆ ಘಟನೆಯ ಶತಮಾನದ ನೆನಪು ಕೂಡ ನಡೆಯಲಿದೆ.
1974ರಲ್ಲಿ ಮತ್ತೂಮ್ಮೆ ಭೀಕರ ಪ್ರವಾಹ ಬಂದಿದ್ದರೂ 1923ರ ಪ್ರವಾಹಕ್ಕಿಂತ ತೀರಾ ಕೆಳಮಟ್ಟದಲ್ಲಿತ್ತು. ಅದರ ಗುರುತುಗಳನ್ನೂ ಕೆಲವು ಕಟ್ಟಡಗಳಲ್ಲಿ ಕಾಣಬಹುದು.
ಕಟ್ಟಡಗಳಲ್ಲಿ 23ರ ನೆನಪು!
ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ ಜಾಗವೊಂದರ ಕಟ್ಟಡದ ಮೇಲ್ಛಾವಣಿಯ ಪಕ್ಕ 7.8.1923 ಎಂದು ಬರೆದಿದ್ದು, ಅಲ್ಲಿಯವರೆಗೂ ನೀರು ಬಂದಿತ್ತು ಎನ್ನಲಾಗುತ್ತಿದೆ. ಈಗ ಆ ರೀತಿಯ ಪ್ರವಾಹ ಬಂದರೆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸುವುದೂ ಅಸಾಧ್ಯ. ಪಾಣೆಮಂಗಳೂರು ಪೇಟೆಯ ಮೂರುಮಾರ್ಗದ ಬಳಿ ಹಳೆಯ ಕಾಲದ ಹೊಟೇಲೊಂದರ ಪಕ್ಕದ ಕಟ್ಟಡದಲ್ಲಿ ಕಲ್ಲಿನಲ್ಲಿ “ತಾ. 7.8.1923 ಕುಜವಾರ ಇ ಕಲ್ಲಿನ ತನಕ ನೆರೆ ಬಂದಿದೆ’ ಎಂದು ಬರೆಯಲಾಗಿದ್ದು, ಪ್ರಸ್ತುತ ಅದಕ್ಕೆ ಬಿಳಿ ಬಣ್ಣ ಬಳಿಯಲಾಗಿದೆ.
ಅಂದು ಮುಳುಗಡೆಯಾಗಿದ್ದ ಬಹುತೇಕ ಕಟ್ಟಡಗಳಿದ್ದ ಜಾಗದಲ್ಲಿ ಪ್ರಸ್ತುತ ಹೊಸ ಕಟ್ಟಡಗಳು ನಿರ್ಮಾಣವಾಗಿವೆ. ಅಂದು ಅನುಭವಿಸಿದ ಯಾತನೆಯ ಅನುಭವವನ್ನು ಹೇಳಿಕೊಳ್ಳುವವರು ಯಾರೂ ಉಳಿದಿಲ್ಲ.
ಬಂಟ್ವಾಳದಲ್ಲಿ ಅಂದು ಜಲಮಾರ್ಗವೇ ಪ್ರಮುಖ ಸಾರಿಗೆಯಾಗಿತ್ತು. ಹೀಗಾಗಿ ನೇತ್ರಾವತಿ ಕಿನಾರೆಯಲ್ಲಿದ್ದ ಪಾಣೆಮಂಗಳೂರು ಬಂಟ್ವಾಳಕ್ಕಿಂತಲೂ ದೊಡ್ಡ
ವಾಣಿಜ್ಯ ಪಟ್ಟಣವಾಗಿತ್ತು. ಆದರೆ ಭೀಕರ ಪ್ರವಾಹದಲ್ಲಿ ಪೇಟೆಯಲ್ಲಿದ್ದ ಎಲ್ಲ ಸರಕು ಸರಂಜಾಮು ಕೊಚ್ಚಿ ಹೋಗಿತ್ತು; ಹಲವಾರು ಕುಟುಂಬಗಳನ್ನು ದೋಣಿಯ ಮೂಲಕ ರಕ್ಷಣೆ ಮಾಡಲಾಗಿತ್ತು ಎಂದು ಹಿರಿಯರು ಹೇಳುತ್ತಿದ್ದರು ಎಂದು ಪಾಣೆಮಂಗಳೂರಿನ ನಿವಾಸಿಗಳು ನೆನಪಿಸಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vitla: ಜಾತ್ರೆ ಸಂತೆ ಶುಲ್ಕ ಹರಾಜು ಮೊತ್ತ ಇಳಿಸಲು ಆಗ್ರಹ
ಜೀವ ರಕ್ಷಕ ಕ್ರಿಟಿಕಲ್ ಕೇರ್ ಚಿಕಿತ್ಸೆ-ಹೊಸ ಮೈಲಿಗಲ್ಲು; ಮಂಗಳೂರು ಕೆಎಂಸಿ: ಎಕ್ಮೋ ಸೇವೆ
Puttur: ಜಲಸಿರಿ ನಂಬಿದರೆ ಬೇಸಗೆಯಲ್ಲಿ ಟ್ಯಾಂಕರೇ ಗತಿ; ಸದಸ್ಯರ ಆತಂಕ
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.