110 ಕೆ.ವಿ.ಸಬ್‌ಸ್ಟೇಶನ್ ಅಡ್ಡಿ ತೆರವು;ಡಿಸಿಯಿಂದ 30 ಆಕ್ಷೇಪಣೆ ವಜಾ
Team Udayavani, Jul 2, 2017, 3:45 AM IST
ಸುಳ್ಯ : ಸುಮಾರು 7 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸುಳ್ಯದ 110 ಕೆ.ವಿ. ವಿದ್ಯುತ್ ಸಂಪರ್ಕ ಯೋಜನೆಗೆ ಇದ್ದ ಆಕ್ಷೇಪಣೆಗಳನ್ನು ದ.ಕ. ಜಿಲ್ಲಾಧಿಕಾರಿ ಅವರು ತೆರವುಗೊಳಿಸಿದ್ದು, ಯೋಜನೆ ಅನುಷ್ಠಾನದ ಹಾದಿ ಸುಗಮವಾಗಿದೆ. ಆದರೆ ಸಿವಿಲ್ ನ್ಯಾಯಾಲಯದಲ್ಲಿ 2 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದೆಯೆನ್ನಲಾಗಿದೆ.
110ಕೆ.ವಿ ವಿದ್ಯುತ್ ಲೈನ್ ಹಾದು ಹೋಗುವುದರಿಂದ ತಮ್ಮ ಕೃಷಿಗೆ ಹಾನಿ ಯಾಗುತ್ತದೆ ಹಾಗೂ ಮನೆ, ಕಟ್ಟಡಗಳಿಗೂ ತೊಂದರೆಯಾಗುತ್ತದೆ ಎಂದು ಸುಮಾರು 30 ಮಂದಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 2015ರಲ್ಲಿ ದಾವೆ ಹೂಡಿದ್ದರು. ಈ ಪೈಕಿ ಸುಳ್ಯ ತಾ|ನ ಭರತ್‌ಕುಮಾರ್ ಪುತ್ತಿಲ, ಲಿಂಗಪ್ಪ ಗೌಡ ಕೋನಡ್ಕಪದವು, ಮೋಹನ ಅಡಾRರು, ಪುರುಷೋತ್ತಮ ಗೌಡ ಅಡಾRರು, ಮುರಳೀ ಧರ ಅಡಾRರು, ಭಾರತಿ ಮತ್ತಿತರರು, ಗಣೇಶ್ ಬೈತಡ್ಕ, ಕೃಷ್ಣ ಸೋಮಯಾಜಿ ಮುಳ್ಯ ಮಠ, ಕೆ.ಆರ್. ಜಗದೀಶ್ ರಾವ್ ಕಾಂತಮಂಗಲ, ಗಂಗಾಧರ ಗೌಡ ಅಜ್ಜಾವರ, ಸಂದೀಪ್ ಕಾಂತ ಮಂಗಲ, ವಿಶ್ವನಾಥ ರಾವ್, ಯೋಗಾನಂದ ಕಾಂತಮಂಗಲ, ಜಿ.ಕೆ. ತಿಲೋತ್ತಮ, ಐ.ಕೆ. ಹೇಮಚಂದ್ರ, ಕುಸುಮಾ ಜಾಲೂÕರು, ದಿವಾಕರ ರೈ, ನಾರಾ ಯಣ ಮಡಿವಾಳ, ಬಾಲಣ್ಣ ಗೌಡ, ದೇವಕಿ ದಾವೆ ಹೂಡಿ ತಮ್ಮ ಪಟ್ಟ ಸ್ಥಳದಲ್ಲಿ ಈ ಲೈನು ಹಾದು ಹೋಗುವುದರಿಂದ ಕೃಷಿ, ಕಟ್ಟಡ ಗಳಿಗೆ ತೊಂದರೆಯಾಗು ವುದರಿಂದ ಮಾರ್ಗ ಬದಲಾಯಿ ಸಬೇಕು ಎಂದು ಡಿಸಿಗೆ ಅರ್ಜಿ ಸಲ್ಲಿಸಿದ್ದರು.
ಇಲಾಖೆಯ ಕಾನೂನಿನಲ್ಲಿ ಭೂಮಿಯ ನಷ್ಟಕ್ಕೆ ಪರಿಹಾರ ನೀಡಲು ಅವಕಾಶ ಇಲ್ಲದಿರುವುದರಿಂದ ಕೃಷಿಕರು ಈ ಆಕ್ಷೇಪಣೆ ಸಲ್ಲಿಸಿದ್ದು, ಇಲಾಖೆ ಕಾನೂನು ಬದಲಾಯಿಸಿ ನಷ್ಟ ಪರಿಹಾರ ನೀಡಬೇಕೆಂದು ಅವರೆಲ್ಲರೂ ಹೇಳಿಕೊಂಡಿದ್ದಾರೆ.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ಅವರು 2012ರ ನಾಗಪ್ಪರ ಪ್ರಕರಣದ ಹೈಕೋರ್ಟ್‌ನ ಆದೇಶವನ್ನು ಉಲ್ಲೇಖೀಸಿ ಈ ಆಕ್ಷೇಪಣೆಗಳನ್ನು ಪರಿಗಣಿಸಿದರೆ ವಿದ್ಯುತ್ ವಿತರಣೆಯಂತಹ ಅಭಿ ವೃದ್ಧಿ ಕಾರ್ಯಗಳಿಗೆ ಶಾಶ್ವತ ತಡೆ ಉಂಟಾಗುವುದರಿಂದ ಮತ್ತು ಈ ಬಗ್ಗೆ ಯಾವುದೇ ಖಾಸಗಿ ವ್ಯಕ್ತಿಯ ಅನುಮತಿ ಪಡೆಯದೇ ವಿದ್ಯುತ್ ಪ್ರಸರಣ ಮಾರ್ಗವನ್ನು ಅಂತಿಮಗೊಳಿಸಲು ಸಂಪೂರ್ಣ ಅ ಧಿಕಾರವಿದೆ ಎಂದು ಅಭಿಪ್ರಾಯಕ್ಕೆ ಬಂದು ಈ 18 ಆಕ್ಷೇಪಣೆಗಳನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ. ಅದಲ್ಲದೆ ನಂಗಾರು ಚಿನ್ನಪ್ಪ ಗೌಡ, ನಂಗಾರು ರಾಮಣ್ಣ , ಎ. ದೇರಣ್ಣ ಗೌಡ, ಎ.ಡಿ. ಶ್ಯಾಮ್‌ಪ್ರಸಾದ್, ಮನೋಜ್ ಕುಮಾರ್, ಎ. ಭವಾನಿ ಜಾಲೂÕರು ಅವರು ಸಲ್ಲಿಸಿದ ಆಕ್ಷೇಪಣೆಯನ್ನು ಫೆ. 14ರಂದು ಮತ್ತು ಪುತ್ತೂರಿನ ಹರೀಶ್ ಮಾಡಾವು, ಸೀತಾರಾಮ ರೈ ಕಲಾಯಿ, ಗಿರಿಜಾ ಚಂದ್ರಕಲಾ ಶೆಣೈ, ಸುರೇಶ್ ಶೆಣೈ, ಶುಭಕರ ನಾಯಕ್ ಅವರು ಸಲ್ಲಿಸಿದ ಆಕ್ಷೇಪಣೆಯನ್ನು ಎ. 4ರಂದು ವಜಾಗೊಳಿಸಿ ಜಿಲ್ಲಾಧಿಕಾರಿ ಅವರು ಆದೇಶ ನೀಡಿದ್ದಾರೆ.
ಕ್ರಮಕ್ಕೆ ಆದೇಶ
ಈ ಯೋಜನೆ ಅನುಷ್ಠಾನದಲ್ಲಿ ಅಡ್ಡಿ ಮಾಡಿದಲ್ಲಿ ಸೂಕ್ತ ಪೊಲೀಸ್ ಭದ್ರತೆಯಲ್ಲಿ, ಕಂದಾಯ ಇಲಾ ಖೆಯ ಸಹ ಯೋಗದೊಂದಿಗೆ ಕ್ರಮ ಕೈಗೊಳ್ಳಬಹುದೆಂದು ಆದೇಶಿ ಸಿದ್ದಾರೆ. ಸಾಮಾಜಿಕ ಕಾರ್ಯ ಕರ್ತ ಸುಳ್ಯದ ಡಿ.ಎಂ. ಶಾರೀಕ್ ಮಾಹಿತಿ ಹಕ್ಕಿನಲ್ಲಿ ಇಲಾಖೆ ಯಿಂದ ವಿವರ ಪಡೆದುಕೊಂಡಿದ್ದು, ಇದರಿಂದ 110 ಕೆ.ವಿ. ಸಬ್‌ಸ್ಟೇಶನ್ ಸ್ಥಾಪನೆ ಸುಲಭ ವಾಗಲಿದೆ ಎಂದು ತಿಳಿಸಿದ್ದಾರೆ.
ಪರಿಹಾರಕ್ಕೆ ಆಗ್ರಹ
ಕೃಷಿಕರ ಜಮೀನನ್ನು ಕಾರಿಡಾರ್ ಹಾದು ಹೋಗುವ ಸ್ಥಳಗಳಲ್ಲಿ ಇಲಾಖೆಯು ವಶಪಡಿಸಿ ಕೊಂಡು ಅವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಡಿ.ಎಂ. ಶಾರೀಕ್ ಸರಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ. ಕಾನೂನು ತಿದ್ದುಪಡಿ ಮಾಡಿ ರೈತರ ಹಿತಾಸಕ್ತಿ ಕಾಪಾಡ ಬೇಕೆಂದು ಪ್ರಧಾನ ಮಂತ್ರಿ ಗಳಿಗೂ ಮನವಿ ಸಲ್ಲಿಸಿದ್ದಾರೆ.
ಹಂತ ಹಂತವಾಗಿ
ತಡೆ ನಿವಾರಣೆ
ಸುಳ್ಯ ಸಿವಿಲ್ ನ್ಯಾಯಾಲ ಯದಲ್ಲಿ 4 ಆಕ್ಷೇಪಣಾ ಅರ್ಜಿಗಳು, ಪುತ್ತೂರಿನಲ್ಲಿ ಮೂರು ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇವೆ. ಇವು ತೀರ್ಮಾಗೊಳ್ಳಬೇಕಾಗಿದೆ. ಅರಣ್ಯದಲ್ಲಿ ವಿದ್ಯುತ್ ಲೈನ್ ಹಾದು ಹೋಗುತ್ತಿದ್ದು, 10.14 ಹೆಕ್ಟೇರ್ ಜಾಗಕ್ಕೆ ಬದಲಾಗಿ 25 ಎಕ್ರೆ ಸ್ಥಳ ಕೊಡಬೇಕಾಗಿದ್ದು, ಅದನ್ನು ಕಂದಾಯ ಇಲಾಖೆ ಮಾಡಬೇಕಾಗಿದೆ. ಹೀಗೆ ಹಂತ ಹಂತವಾಗಿ ಇರುವ ತಡೆಗಳನ್ನು ನಿವಾರಿಸಿಕೊಂಡು 110 ಕೆವಿ ಸಬ್ ಸ್ಟೇಶನ್ ಅನುಷ್ಠಾನಗೊಳಿಸಲಾಗುವುದು.
– ಎಸ್. ಅಂಗಾರ,
ಶಾಸಕರು ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.