14 ಕೆ.ಜಿ. ಗಾಂಜಾ ಸಹಿತ ಇಬ್ಬರ ಬಂಧನ
Team Udayavani, May 28, 2017, 3:21 PM IST
ಮಂಗಳೂರು: ಮಂಗಳೂರಿನ ಸಿಸಿಬಿ ಘಟಕದ ಪೊಲೀಸರು ಶನಿವಾರ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ 14 ಕೆ.ಜಿ. ಗಾಂಜಾ ಸಹಿತ 3,35,400 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‌ನ ಅಬ್ದುಲ್ ಅಜೀಜ್ (35) ಮತ್ತು ಮೊಹಮ್ಮದ್ ಮುಸ್ತಾಫ ಯಾನೆ ಗಿಡಿ (44) ಬಂಧಿತ ಆರೋಪಿಗಳು. (ಆರೋಪಿ ಅಬ್ದುಲ್ ಅಜೀಜ್ ಪ್ರಸ್ತುತ ನರಿಂಗಾನ ಗ್ರಾಮದ ಕೆದಂಬಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ).
ಸಿಸಿಬಿ ಘಟಕದ ಎಸಿಪಿ ವೆಲೆಂಟೈನ್ ಡಿ’ಸೋಜಾ ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶ್ಯಾಮ್ ಸುಂದರ್ ಅವರು ಶನಿವಾರ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಿಲ್ವರ್ ಬಣ್ಣದ ಕೆ.ಎ.01,ಎಂಸಿ 52 ನಂಬ್ರದ ಮಾರುತಿ 800 ಕಾರಿನಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದಾರೆ ಎಂಬುದಾಗಿ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಮುಡಿಪು ಬಳಿಯ ಕಾಯರ್‌ಗೊàಳಿ ಕ್ರಾಸ್ ಬಳಿ ಅವರು ವಾಹನ ತಪಾಸಣೆ ಕಾರ್ಯ ನಡೆಸಿ ಆರೋಪಿಗಳನ್ನು ತಮ್ಮ ಬಲೆಗೆ ಕೆಡಹಿದರು.
ಆರೋಪಿಗಳಿಂದ 14 ಕೆ.ಜಿ ಗಾಂಜಾ ಮತ್ತು ಒಂದು ಮಾರುತಿ 800 ಕಾರು ಹಾಗೂ ಎರಡು ಮೊಬೈಲ್ ಪೋನ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 3,35,400 ರೂ. ಆರೋಪಿಗಳು ತಾವು ಆಂಧ್ರ ಪ್ರದೇಶದ ಪಳಮನೀರ್ ನಲ್ಲಿರುವ ಶೇಖ್ ಸಲೀಂ ಭಾಷಾ ಎಂಬಾತನಿಂದ 14 ಕೆ.ಜಿ ಗಾಂಜಾವನ್ನು ಪಡೆದುಕೊಂಡು ಬಂದಿದ್ದು, ಅದನ್ನು ಇಲ್ಲಿನ ಜನರಿಗೆ ಹಾಗೂ ಕೇರಳದ ಮಂಜೇಶ್ವರ, ಉಪ್ಪಳಕ್ಕೆ ಮಾರಾಟ ಮಾಡಲು ಹೊರಟಿದ್ದಾಗಿ ತಿಳಿಸಿದ್ದಾರೆ.
ಆರೋಪಿ ಅಬ್ದುಲ್ ಅಜೀಜ್ ಈ ಹಿಂದೆ 2016 ರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಉಳ್ಳಾಲ ಪೊಲೀಸರಿಂದ ಬಂಧಿತನಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಮಂಗಳೂರು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರ ಆದೇಶದಂತೆ ಡಿಸಿಪಿ ಡಾ | ಸಂಜೀವ ಎಂ.ಪಾಟೀಲ್ ಅವರ ನಿರ್ದೇಶನದಲ್ಲಿ ಈ ಕಾರ್ಯಾಚರಣೆ ನಡೆದಿದ್ದು ಸಿಸಿಬಿ ಘಟಕದ ಸಿಬಂದಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.