ತಣ್ಣೀರುಪಂತ ಗ್ರಾಮವೊಂದರಲ್ಲೇ 15 ಮನೆ ಶೌಚಾಲಯ ರಹಿತ !
Team Udayavani, Aug 28, 2017, 7:35 AM IST
ಉಪ್ಪಿನಂಗಡಿ: ದ.ಕ.ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವಂತೆಯೇ ಸರಕಾರ ನಡೆಸುತ್ತಿರುವ ಶೌಚಾಲಯಗಳ ಗಣತಿ ವೇಳೆ ಭಿನ್ನ ನೈಜಾಂಶಗಳು ಅನಾವರಣಗೊಳ್ಳಲಾರಂಭಿಸಿವೆ. ಬೆಳ್ತಂಗಡಿ ತಾ|ನ ತಣ್ಣೀರು ಪಂತ ಗ್ರಾಮವೊಂದರಲ್ಲೇ 15 ಮನೆಗಳು ಶೌಚಾಲಯ ರಹಿತ ಎಂದು ಪತ್ತೆಯಾಗಿ ಪಂಚಾಯತ್ ಆಡಳಿತವನ್ನು ಕಂಗೆಡಿಸಿದೆ.
ಸ್ವತ್ಛ ಭಾರತ ಮಿಷನ್ ಕಾರ್ಯಕ್ರಮದಡಿ ದ.ಕ. ಜಿಲ್ಲೆಯನ್ನು ಬಯಲುಶೌಚ ಮುಕ್ತ ಜಿಲ್ಲೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾ.ಪಂ. ವ್ಯಾಪ್ತಿಯ ಎಲ್ಲ ಮನೆಗಳಲ್ಲಿ ಶೌಚಾಲಯವನ್ನು ಹೊಂದಿಕೊಂಡು ಬಳಕೆ ಮತ್ತು ನಿರ್ವಹಣೆ ಮಾಡುತ್ತಿರುವ ಬಗ್ಗೆ ಸಾಮಾಜಿಕ ಪರಿಶೋಧನಾ ಕಾರ್ಯ ಆಗಸ್ಟ್ 16ರಿಂದ ಸೆಪ್ಟಂಬರ್ 2ರ ವರೆಗೆ ಜಿಲ್ಲೆಯಾದ್ಯಂತ ನಡೆಯುತ್ತಿದೆ.
ತಣ್ಣೀರುಪಂತ ಗ್ರಾಮದ ಸಾಮಾನ್ಯ ಸಭೆಯಲ್ಲಿ ಪಿಡಿಒ ಈ ವಿಚಾರವನ್ನು ಪ್ರಸ್ತಾವಿಸುತ್ತಿದ್ದಂತೆಯೇ ಸದಸ್ಯರಿಂದ ಕಳವಳ ವ್ಯಕ್ತವಾಯಿತು. ಶೌಚಾಲಯ ರಹಿತ ಮನೆಗಳ ಪೈಕಿ ಓರ್ವ ನಿವೃತ್ತ ಸರಕಾರಿ ನೌಕರನ ಮನೆಯೂ ಸೇರಿದೆ. ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಠೇವಣಿಯಿರಿಸಿದ್ದರೂ ಈ ನಿವೃತ್ತ ಸರಕಾರಿ ನೌಕರ ಇನ್ನೂ ಬಯಲು ಶೌಚಾಲಯದಲ್ಲಿ ಪರಮ ಸುಖ ಕಾಣುತ್ತಿರುವುದು ವಿಪರ್ಯಾಸ ಎಂದರು.
ಸಿಬಂದಿ ಜತೆ ಗಣತಿ ಕಾರ್ಯಕ್ಕೆ ಹೋಗಿದ್ದ ಪಿಡಿಒ ಪೂರ್ಣಿಮಾ ಅವರು ತನ್ನ ಅನುಭವಗಳನ್ನು ವಿವರಿಸಿದ್ದು ಹೀಗೆ….
ಶೌಚಾಲಯ ನಿರ್ಮಾಣಕ್ಕೆ ಸರಕಾರದಿಂದ ಹಣಕಾಸಿನ ನೆರವು ಲಭಿಸುತ್ತದೆ ಎಂದು ಅರಿತಾಗ ಹಲವು ಮಂದಿ ತಮ್ಮ ಮನೆ ಯಲ್ಲಿ ಶೌಚಾಲಯ ಇದ್ದರೂ ಇಲ್ಲ ಎನ್ನುತ್ತಿದ್ದರು. ಎದು ರಲ್ಲಿ ಕಾಣಿಸುವಂತಿದ್ದರೆ ಅದು ಎಂದೋ ಕೆಟ್ಟು ಹೋಗಿ ಉಪ ಯೋಗಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಸುಳ್ಳು ಹೇಳುತ್ತಿದ್ದರು.”ಯಾವೆಲ್ಲ ಮನೆಗಳಲ್ಲಿ ಶೌಚಾಲಯ ಇಲ್ಲವೋ ಅಂತಹ ಮನೆಗಳಿಗೆ ಪಡಿತರ ಸಹಿತ ಎಲ್ಲ ಸೌಲಭ್ಯಗಳನ್ನು ರದ್ದುಪಡಿಸುವ ಸಲುವಾಗಿ ಗಣತಿ ನಡೆಯುತ್ತಿದೆ’ ಎಂದು ಹೇಳಿದಾಗ ಮಾತಿನ ವರಸೆ ಬದಲಾಯಿಸುತ್ತಾ “ಇಲ್ಲ ಇಲ್ಲ ನಮ್ಮ ಮನೆಯ ಶೌಚಾಲಯ ಸರಿಯಾಗಿ ಇದೆ. ಸ್ವಲ್ಪ ಸಮಸ್ಯೆ ಇದೆ. ಅದನ್ನು ನಾವೇ ಸರಿ ಪಡಿಸಿಕೊಳ್ಳುತ್ತೇವೆ. ನೀವು ಯಾವುದೇ ಸೌಲಭ್ಯವನ್ನು ಕಡಿತಗೊಳಿಸಬೇಡಿ’ ಎಂದು ಅಂಗಲಾಚುತ್ತಿದ್ದರು ಎಂದು ವಿವರಿಸಿದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತ್ತು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಇನ್ನೂ ಶೌಚಾಲಯ ಹೊಂದಿರದ 15 ಮನೆಗಳು ಪತ್ತೆಯಾದ ಬಗ್ಗೆ ಖೇದ ವ್ಯಕ್ತಪಡಿಸಿದ ಪಂಚಾಯತ್ ಅಧ್ಯಕ್ಷ ಜಯವಿಕ್ರಂ ಅವರು, ತನ್ನ ಮೂರು ತಿಂಗಳ ಗೌರವಧನವನ್ನು ಓರ್ವ ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಿಸಲು ವಿನಿಯೋಗಿಸುವುದಾಗಿ ತಿಳಿಸಿದರು. ಸಂಘ-ಸಂಸ್ಥೆಗಳೂ ಕೈ ಜೋಡಿಸುವಂತೆ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಟ್ವಾಳ: ಹೆಲ್ಮೆಟ್ ಇಲ್ಲದ ಸವಾರರಿಗೆ ಹೆಲ್ಮೆಟ್ ಜತೆ ಗುಲಾಬಿ ಸತ್ಕಾರ!
BBK11: ಹುಟ್ಟೂರಿಗೆ ಆಗಮಿಸಿದ ಬಿಗ್ ಬಾಸ್ ಸ್ಪರ್ಧಿ ಧನರಾಜ್ ಆಚಾರ್ಯ
Punjalakatte: ನಿಶ್ಚಿತಾರ್ಥಗೊಂಡ ಯುವತಿಯಿಂದ ಪ್ರಶ್ನೆ; ದೈವದ ಪಾತ್ರಿ ಆತ್ಮಹ*ತ್ಯೆ
Bantwala: ಪೊಲೀಸರ ಬಲೆಗೆ ಬೀಳದಿರಲು ಆರೋಪಿಗಳಲ್ಲೇ ಪರಸ್ಪರ ಸಂಪರ್ಕ ಕಡಿತ ತಂತ್ರಗಾರಿಕೆ
ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಡಾ.ಹೆಗ್ಗಡೆ ಸಹಮತ
MUST WATCH
ಹೊಸ ಸೇರ್ಪಡೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್
ಪೆರ್ಡೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ವಿಧಿವಶ
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ