“17 ಸ್ಮಾರ್ಟ್‌ ಬಸ್‌ ನಿಲ್ದಾಣಗಳ ಕಾಮಗಾರಿ ಪೂರ್ಣ’


Team Udayavani, Oct 20, 2019, 5:00 AM IST

c-23

ಮಹಾನಗರ: ಮಂಗಳೂರು ಮಹಾನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಯಲ್ಲಿ ಕೈಗೆತ್ತಿಕೊಂಡಿರುವ 20 ಸ್ಮಾರ್ಟ್‌ ಬಸ್‌ ನಿಲ್ದಾಣಗಳಲ್ಲಿ 17 ನಿಲ್ದಾಣಗಳ ಭೌತಿಕ ನಿರ್ಮಾಣ ಕಾಮಗಾರಿ ಪೂರ್ಣ ಗೊಂಡಿದೆ ಎಂದು ಮಂಗಳೂರು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್‌ ನಜೀರ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿ ಕಾರಿ ಸಿಂಧೂ ಬಿ. ರೂಪೇಶ್‌ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಲಹಾ ಸಮಿತಿ ಸಭೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿದ ಮಹಮ್ಮದ್‌ ನಜೀರ್‌ ಅವರು ಒಟ್ಟು 20 ಬಸ್‌ ನಿಲ್ದಾಣಗಳನ್ನು ಎ, ಬಿ, ಸಿ ಶ್ರೇಣಿಗಳೆಂದು ವಿಂಗಡಿಸಲಾಗಿದೆ. “ಎ’ ಶ್ರೇಣಿಯ ಬಸ್‌ ನಿಲ್ದಾಣಗಳನ್ನು ಒಟ್ಟು 21 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ 12 ಲಕ್ಷ ರೂ. ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿಗೆ, 6 ಲಕ್ಷ ರೂ. ವೆಚ್ಚದಲ್ಲಿ ಇ-ಶೌಚಾಲಯ ಹಾಗೂ 3 ಲಕ್ಷ ರೂ. ವೆಚ್ಚದಲ್ಲಿ ಎಲ್‌ಇಡಿ ಡಿಸ್‌ಪ್ಲೆ ಸಹಿತ ಐಸಿಟಿ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. “ಬಿ’ ಶ್ರೇಣಿ ಬಸ್‌ ನಿಲ್ದಾಣಗಳನ್ನು 15 ಲಕ್ಷ ರೂ. ಹಾಗೂ ಸಿ. ಶ್ರೇಣಿಯ ಬಸ್‌ ನಿಲ್ದಾಣಗಳನ್ನು 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಹಿಂದಿನ ಬಸ್‌ನಿಲ್ದಾಣಗಳ ವಿನ್ಯಾಸದಲ್ಲಿ ಕೆಲವು ಲೋಪಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ವಿನ್ಯಾಸವನ್ನು ಪರಿಷ್ಕರಿಸ ಲಾಗಿದೆ. ಸರ್ಕ್ನೂಟ್‌ ಹೌಸ್‌, ಪಚ್ಚನಾಡಿ ಹಾಗೂ ಶಕ್ತಿನಗರದಲ್ಲಿ ಇ-ಶೌಚಾ ಲಯ ಇರುವ ಬಸ್‌ ನಿಲ್ದಾಣ ನಿರ್ಮಾಣ ಗೊಳ್ಳುತ್ತಿದೆ ಎಂದರು.

ಸ್ಮಾರ್ಟ್‌ ರೋಡ್‌ ಕಾಮಗಾರಿ
ಹಂಪನಕಟ್ಟೆಯಲ್ಲಿ ಎ.ಬಿ. ಶೆಟ್ಟಿ ವೃತ್ತದಿಂದ ಕ್ಲಾಕ್‌ಟವರ್‌ವರೆಗೆ ಸ್ಮಾರ್ಟ್‌ ರೋಡ್‌ ಕಾಮಗಾರಿ ಚಾಲನೆಯಲ್ಲಿದೆ. ಇದನ್ನು ಏಕಮುಖ ರಸ್ತೆಯನ್ನಾಗಿ ಮಾಡುವ ಪ್ರಸ್ತಾವನೆಯನ್ನು ಸಿಟಿ ಬಸ್‌ ನಿಲ್ದಾಣ ಸ್ಥಳಾಂತರದ ಬಳಿಕ ಕಾರ್ಯ ಗತಗೊಳಿಸುವುದು ಉಚಿತ ಎಂಬ ಸಲಹೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ರಸ್ತೆ ಮಧ್ಯದಲ್ಲಿರುವ ವಿಭಾಜಕವನ್ನು ನೆಹರೂ ಮೈದಾನ್‌ ಕಡೆಗೆ 1.8 ಮೀಟರ್‌ನಷ್ಟು ವರ್ಗಾಯಿಸಿ ಬಸ್‌ ನಿಲ್ದಾಣಗಳು ಇರುವ ಕಡೆಯ ರಸ್ತೆಯನ್ನು ಹೆಚ್ಚು ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ಬಸ್‌ ನಿಲ್ದಾಣ ಇರುವ ಕಡೆ ಸುಮಾರು 3 ಮೀಟರ್‌ನಷ್ಟು ವ್ಯವಸ್ಥಿತ ಫುಟ್‌ಪಾತ್‌ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು.

ಸ್ಮಾರ್ಟ್‌ ಸ್ತಂಭ
ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಯಲ್ಲಿ ಮೊದಲ ಹಂತವಾಗಿ ಸುಮಾರು 15 ಜಂಕ್ಷನ್‌ಗಳಲ್ಲಿ ಸ್ಮಾರ್ಟ್‌ ಸ್ತಂಭ ಗಳನ್ನು (ಸ್ಮಾರ್ಟ್‌ಪೋಲ್‌) ತಲಾ 5 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ.

ಪ್ರತಿಯೊಂದು ಸ್ತಂಭದಲ್ಲಿ 4 ಸ್ಥಿರ ಸಿಸಿ ಕೆಮರಾಗಳು ಹಾಗೂ 360 ಡಿಗ್ರಿ ಸುತ್ತುವ 1 ಕೆಮರಾ ಇರುತ್ತದೆ. ಇದನ್ನು ಮಹಾನಗರ ಪಾಲಿಕೆಯಲ್ಲಿರುವ ಸ್ಮಾರ್ಟ್‌ ಸಿಟಿಯ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ ವ್ಯವಸ್ಥೆಗೆ ಜೋಡಿಸಲಾಗುತ್ತದೆ. ಪೊಲೀಸ್‌ ಇಲಾಖೆಯಿಂದ ಒಟ್ಟು 66 ಜಂಕ್ಷನ್‌ಗಳಲ್ಲಿ ಸ್ಮಾರ್ಟ್‌ ಸ್ತಂಭ ಅಳವಡಿಸಬೇಕು ಎಂದು ಕೋರಿಕೆ ಬಂದಿದೆ ಎಂದವರು ವಿವರಿಸಿದರು.

ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿರುವ ಖಾಲಿ ಪ್ರದೇಶ ಅಭಿವೃದ್ಧಿ ಪರಿಕಲ್ಪನೆ ತಾಂತ್ರಿಕ ಸಮಿತಿಗೆ ಸಲ್ಲಿಸಲಾಗಿದೆ. ರಥಬೀದಿ ಹಾಗೂ ವೆಂಕಟರಮಣ ದೇವಾಲಯ ಪ್ರದೇಶವನ್ನು ಧಾರ್ಮಿಕ ವಲಯವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಸ್ಮಾರ್ಟ್‌ಸಿಟಿ ಮಂಡಳಿಗೆ ಸಲ್ಲಿಸಿದ್ದು ಅನುಮತಿ ಪಡೆಯಲಾಗಿದೆ. ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳ ನಿರ್ಮಾಣಕ್ಕೆ ಮರು ಟೆಂಡರ್‌ ಕರೆಯಲಾಗಿದೆ . ಕಾವೂರು ಕೆರೆ ಹಾಗೂ ಗುಜ್ಜರಕೆರೆ ಅಭಿವೃದ್ದಿ ಯೋಜನೆ ಕುರಿತ ಪ್ರಕ್ರಿಯೆಗಲು ಪ್ರಗತಿಯಲ್ಲಿವೆ ಎಂದವರು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ , ಕ್ರೆಡೈ ಚೇರ್‌ಮನ್‌ ಡಿ.ಬಿ. ಮೆಹ್ತಾ ಹಾಗೂ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಇ-ಸ್ಮಾರ್ಟ್‌ ಸ್ಕೂಲ್‌
ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ 13 ಸರಕಾರಿ ಶಾಲೆಗಳನ್ನು ಇ-ಸ್ಮಾರ್ಟ್‌ ಸ್ಕೂಲ್‌ ಆಗಿ ರೂಪಿಸುವ ಯೋಜನೆಯಲ್ಲಿ ಈಗಾಗಲೇ 2 ಶಾಲೆಗಳ ಕಾಮಗಾರಿ ಪೂರ್ಣಗೊಂಡಿದೆ. ಇನ್ನೆರಡು ಶಾಲೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಎಲ್‌ಇಡಿ ಬಲ್ಬ್ ಅಳವಡಿಸುವ ಯೋಜನೆಯಲ್ಲಿ 27 ಸರಕಾರಿ ಕಟ್ಟಡಗಳಲ್ಲಿ ಒಟ್ಟು 10,058 ಎಲ್‌ಇಡಿ ಬಲ್ಬ್ಗಳನ್ನು ಅಳವಡಿಸಲಾಗಿದೆ. ಅಳವಡಿಸಿರುವ ಕಡೆಗಳಲ್ಲಿ ಶೇ. 40 ರಷ್ಟು ವಿದ್ಯುತ್‌ ಉಳಿತಾಯ ಆಗುತ್ತಿರುವ ಬಗ್ಗೆ ವರದಿಗಳು ಬಂದಿವೆ. ಪುರಭವನದ ಮುಂಭಾಗದಲ್ಲಿ 6 ಕೋ.ರೂ. ವೆಚ್ಚದಲ್ಲಿ ಅಂಡರ್‌ಪಾಸ್‌ಗೆ ಈಗಾಗಲೇ ಟೆಂಡರ್‌ ಆಗಿದೆ. ಸರಕಾರಿ ಕಟ್ಟಡಗಳಿಗೆ ರೂಫ್‌ಟಾಪ್‌ ಸೋಲಾರ್‌ ವ್ಯವಸ್ಥೆ ಅಳವಡಿಸುವ ಯೋಜನೆಯಲ್ಲಿ ಮೀನುಗಾರಿಕಾ, ಇಎಸ್‌ಐ ಕಟ್ಟಡಗಳಲ್ಲಿ ಸೋಲಾರ್‌ ವ್ಯವಸ್ಥೆ ಅಳವಡಿಸಲಾಗಿದೆ. ಪುರಭವನದ ಕಟ್ಟಡದಲ್ಲಿನ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಹಮ್ಮದ್‌ ನಜೀರ್‌ ತಿಳಿಸಿದ್ದಾರೆ.

ಕೇಂದ್ರ ಮಾರುಕಟ್ಟೆ
ನಗರದ ಕೇಂದ್ರ ಮಾರುಕಟ್ಟೆಯನ್ನು 145 ಕೋ. ರೂ. ವೆಚ್ಚದಲ್ಲಿ ಪಿಪಿ ಸಹಭಾಗಿತ್ವದಲ್ಲಿ ಪುನರ್‌ ನಿರ್ಮಾಣ ಮಾಡುವ ಯೋಜನೆಗೆ ಖಾಸಗಿ ಸಹಭಾಗಿತ್ವಕ್ಕೆ ಯಾವುದೇ ಸ್ಪಂದನೆ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು 85 ಕೋ.ರೂ. ವೆಚ್ಚದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲೇ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಮತ್ತೆ ಪಿಪಿ ಸಹಭಾಗಿತ್ವದಲ್ಲೇ ಮಾಡಲು ತೀರ್ಮಾನಿಸಲಾಗಿದೆ. ಯೋಜನೆಯ ಹಿಂದಿನ ಷರತ್ತಿನಲ್ಲಿ ಕೆಲವು ಷರತ್ತುಗಳನ್ನು ಬದಲಾಯಿಸಿ ಮರು ಪ್ರಕಟನೆ ಹೊರಡಿಸಲಾಗುವುದು. ಇದರಲ್ಲಿ ಒಟ್ಟು 597 ಅಂಗಡಿ ಹಾಗೂ ಸ್ಟಾಲ್‌ಗ‌ಳಿರುತ್ತವೆ ಎಂದರು.

ಟಾಪ್ ನ್ಯೂಸ್

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Priyank-Kharghe

ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್‌

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vimana 2

Air India Express; ಮಂಗಳೂರು-ಪುಣೆ ನೇರ ವಿಮಾನ ಆರಂಭ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ

1-car

Mangaluru: ಚಲಿಸುತ್ತಿದ್ದ ಕಾರಿಗೆ ಹೊತ್ತಿಕೊಂಡ ಬೆಂಕಿ

Bajpe: ಮರವೂರು ನದಿಯಲ್ಲಿ ವ್ಯಕ್ತಿಯ ಶವ ಪತ್ತೆ

Bajpe: ಮರವೂರು ನದಿಯಲ್ಲಿ ವ್ಯಕ್ತಿಯ ಶವ ಪತ್ತೆ

14-aranthodu

Aranthodu: ವ್ಯಕ್ತಿಯ ಮೇಲೆ ಕಾಡಾನೆ ದಾಳಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kejiriwal

Delhi Election: ಆಪ್‌ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್‌ ಮೈತ್ರಿ: ಕೇಜ್ರಿವಾಲ್‌

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.