Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

ಜೂನಿಯರ್‌, ಸೀನಿಯರ್‌ ಕೋಣಗಳಿಗೆ ಪ್ರತ್ಯೇಕ ದಿನ ನಿಗದಿಗೆ ಚಿಂತನೆ

Team Udayavani, Jan 9, 2025, 7:24 AM IST

Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!

ಮಂಗಳೂರು: ಕಂಬಳ ವನ್ನು 24 ಗಂಟೆಗಳೊಳಗೆ ಮುಗಿಸ ಬೇಕೆಂಬ ನಿಯಮವನ್ನು ಪಾಲಿಸಲು ಕಷ್ಟವಾಗುತ್ತಿರುವ ಕಾರಣ ಪರ್ಯಾಯ ವ್ಯವಸ್ಥೆ ಕುರಿತು ಚಿಂತಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಕಂಬಳ ವನ್ನು ವಿಭಾಗವಾರು ವಿಂಗಡಿಸಿ ಎರಡು ದಿನ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಿದರೆ ಸಮಯ ನಿರ್ವಹಣೆ ಸುಲಭ ಎಂಬ ಸಲಹೆ ಯೊಂದು ಮುನ್ನೆಲೆಗೆ ಬಂದಿದೆ.

ಉದಾಹರಣೆಗೆ, ಶನಿವಾರ “ಜೂನಿಯರ್‌’ ಕೋಣಗಳ ಸ್ಪರ್ಧೆಗಳನ್ನು ನಡೆಸಿದರೆ, ಮರುದಿನ “ಸೀನಿಯರ್‌’ ವಿಭಾಗದ ಕಂಬಳ ನಡೆಸಬಹುದು. ಇದು ಸಾಧ್ಯವಾದರೆ ಒಂದು ವಿಭಾಗವನ್ನು 12 ಗಂಟೆಯ ಒಳಗೆ ಮುಗಿಸಲು ಸಾಧ್ಯವಾಗಲಿದೆ. ಈ ಮೂಲಕ 2 ದಿನವೂ ಜನರು ಪಾಲ್ಗೊಳ್ಳಬಹುದು. ಶನಿವಾರದ ರಾತ್ರಿ ಕಂಬಳದಲ್ಲಿ ತೊಡಗಿಸಿದವರಿಗೆ ವಿಶ್ರಾಂತಿ ದೊರೆಯಲಿದೆ. ಜೂನಿಯರ್‌ ಕೋಣಗಳನ್ನು ತರುವ ದಿನ ಸೀನಿಯರ್‌ ಕೋಣಗಳನ್ನು ತರಬೇಕಾಗಿಲ್ಲ. ಇದರಿಂದ ಕೋಣಗಳ ಪರಿಚಾರಕರು ಹಾಗೂ ಕೋಣಗಳಿಗೂ ಅನುಕೂಲವಾಗಲಿದೆ.

“ಒಂದೊಂದು ಜತೆ ಕೋಣಗಳಿಗೆ ಸುಮಾರು 10 ನಿಮಿಷದಂತೆ ಸಮಯ ನೀಡಿದರೆ 185 ಕೋಣಗಳಿಗೆ 1,850 ನಿಮಿಷ ಬೇಕಾಗುತ್ತದೆ. ಅಂದರೆ ಕನಿಷ್ಠ 30 ಗಂಟೆ ಬೇಕಾಗುತ್ತದೆ. ಇದರಲ್ಲಿ ಕೋಣಗಳ ಒಟ್ಟು ರೇಸ್‌ ಸಮಯ ಕೇವಲ 45 ನಿಮಿಷ. ಉಳಿದ ಅಷ್ಟೂ ಗಂಟೆಗಳು ಕೋಣಗಳನ್ನು ತರುವುದು, ಗಂತಿನಲ್ಲಿ ನಿಲ್ಲಿಸುವುದಕ್ಕೆ ಬೇಕಾಗಿವೆ. ಇದಕ್ಕಾಗಿ ಆನಂದ ಆಳ್ವರು 1986ರಲ್ಲಿ 2 ದಿನಗಳ ಕಂಬಳ ಮಾಡಿದ ಸೂತ್ರದಂತೆ ಶನಿವಾರ ಜೂನಿಯರ್‌ ಹಾಗೂ ರವಿವಾರ ಸೀನಿಯರ್‌ ಎಂಬ ಪರಿಕಲ್ಪನೆಯಲ್ಲಿ 2 ದಿನದ ಕಂಬಳ ಮಾಡುವುದು ಅಗತ್ಯವಾಗಿದೆ. ಬಹುಮಾನ ವಿತರಣೆಯನ್ನು 2ನೇ ದಿನ ಮಾಡಬಹುದು’ ಎಂದು ಕಂಬಳ ತೀರ್ಪುಗಾರರ ಸಂಚಾಲಕ ವಿಜಯ್‌ಕುಮಾರ್‌ ಕಂಗಿನಮನೆ ಹೇಳುತ್ತಾರೆ.

ವಿಸ್ತರಣೆ ಅನಿವಾರ್ಯ!
ಒಂದು ವೇಳೆ ಈಗ ಇರುವ ಪ್ರಕಾರವೇ ಕಂಬಳ ನಡೆಸುವುದಾದರೆ ಬಹುತೇಕ ಕಂಬಳಗಳಿಗೆ 24 ಗಂಟೆ ಸಮಯ ಸಾಕಾಗುವುದಿಲ್ಲ. ಆದ್ದರಿಂದ ಸಮಯದ ಮಿತಿಯನ್ನು 30 ಗಂಟೆಗಳಿಗೆ ಹೆಚ್ಚಿಸಿದರೆ ಹೆಚ್ಚು ಅನುಕೂಲ ಎಂಬ ಆಗ್ರಹವೂ ಇದೆ.

ಕಂಬಳಕ್ಕೂ ಮುನ್ನ “ಟೀಮ್‌ ಲೀಡರ್‌’ ನಿಗಾ
ಕಂಬಳದಲ್ಲಿ ನಿಯಮಾವಳಿ ಪಾಲನೆಗೆ ನಿಗಾ ವಹಿಸಲು “ಟೀಮ್‌ ಲೀಡರ್‌’ ನೇಮಿಸಲಾಗಿದೆ. ಕೋಣ ಗಳನ್ನು ಬಿಡುವುದು, ಓಟಗಾ ರರು, ತೀರ್ಪುಗಾರರು, ಕಂಬಳ ಯಜ ಮಾನರು ಸಹಿತ ವಿವಿಧ ವಿಭಾಗಗಳಿಗೆ ಟೀಮ್‌ ಲೀಡರ್‌ ನೇಮಿಸಲಾಗಿದೆ. ಕಂಬಳ ಆರಂಭವಾಗುವ ಮುನ್ನ ಈ ನಾಯಕರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗುತ್ತದೆ.

ನಿಯಮ ಮೀರಿದರೆ “ಕಂಬಳ’ಕ್ಕೆ ಅಪಾಯ!
ಕಂಬಳದಲ್ಲಿ ನಿಯಮಾವಳಿ ಪಾಲನೆಯಾಗದೆ ಇದ್ದರೆ ಕರಾವಳಿಯ ಈ ಜಾನಪದ ಕ್ರೀಡೆಗೆ ಮತ್ತೆ ಅಪಾಯ ಎದುರಾಗುವ ಸಾಧ್ಯತೆಯಿದೆ. ನ್ಯಾಯಾಲಯ ತಿಳಿಸಿದ ನಿಯಮಾವಳಿಗಳನ್ನು ಪಾಲಿಸುವಂತೆ ಜಿಲ್ಲಾಡಳಿತ, ಕಂಬಳ ಸಮಿತಿ ಈಗಾಗಲೇ ವಿವರವಾಗಿ ಚರ್ಚಿಸಿದೆ. ಕಂಬಳಕ್ಕೆ ಸಂಬಂಧಿಸಿದ ಎಲ್ಲರೂ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚನೆ ರವಾನಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ತಹಶೀಲ್ದಾರ್‌-ಪೊಲೀಸ್‌ ಇಲಾಖೆ ನಿಗಾದೊಂದಿಗೆ ಕಂಬಳ ನಡೆಸುವ ಪರಿಸ್ಥಿತಿ ಎದುರಾಗಬಾರದು ಎಂಬ ಮಾತೂ ಕೇಳಿಬರುತ್ತಿದೆ.

ಹೊಕ್ಕಾಡಿಗೋಳಿಯಲ್ಲಿ ವಿಳಂಬ: ವರದಿ ಕೇಳಿದ ಕಂಬಳ ಸಮಿತಿ
ಹೊಕ್ಕಾಡಿಗೋಳಿ ಕಂಬಳವು ನಿಗದಿತ ಸಮಯಯಲ್ಲಿ ಮುಗಿದಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ದ.ಕ. ಜಿಲ್ಲಾ ಕಂಬಳ ಸಮಿತಿಯು “ಕಂಬಳ ತಡವಾಗಲು ಎದುರಾದ ಕಾರಣವೇನು?’ ಎಂಬುದರ ಬಗ್ಗೆ ವಿವರವಾದ ವರದಿ ನೀಡುವಂತೆ ಸೂಚಿಸಿದೆ.

ಚರ್ಚಿಸಿ ತೀರ್ಮಾನ
ತಿರುವೈಲುಗುತ್ತು, ಜಪ್ಪಿನಮೊಗರು ಸಹಿತ ಕೆಲವು ಕಂಬಳ ಕಳೆದ ವರ್ಷ 22 ಗಂಟೆಗಳೊಳಗೆ ಮುಗಿದಿತ್ತು. ಹಾಗಾಗಿ ಕಂಬಳವನ್ನು ನಿಗದಿತ ಸಮಯದೊಳಗೆ ಮುಗಿಸಲು ಸಾಧ್ಯವೂ ಇದೆ. ಆದರೂ ಕೆಲವು ಕಂಬಳ ತಡವಾಗುತ್ತಿದೆ. ಈ ಬಗ್ಗೆ ಗಂಭೀರವಾಗಿ ಚರ್ಚಿಸಲಾಗುತ್ತಿದೆ. ಇದರ ಜತೆಗೆ ಈಗಾಗಲೇ ಕೇಳಿ ಬಂದಿರುವ ಜೂನಿಯರ್‌ ಒಂದು ದಿನ ಹಾಗೂ ಸೀನಿಯರ್‌ ಮತ್ತೂಂದು ದಿನ ಎಂಬ ಸ್ವರೂಪದಲ್ಲಿ ಕಂಬಳ ನಡೆಸುವ ಚರ್ಚೆ ಬಗ್ಗೆ ಸಮಿತಿಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
– ದೇವೀಪ್ರಸಾದ್‌ ಶೆಟ್ಟಿ ಬೆಳಪು, ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ

ಟಾಪ್ ನ್ಯೂಸ್

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

parameshwara

Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್‌ ಶುರು?

MOsale

Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ

2

Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು

4-aryabhata

ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

ವಿದ್ಯುತ್‌ ದರ ಏರಿಕೆಯ ಸುಳಿವು ನೀಡಿದ ಮೆಸ್ಕಾಂ;ಯೂನಿಟ್‌ಗೆ 0.70 ರೂ. ದರ ಏರಿಕೆ ಪ್ರಸ್ತಾವನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

Mulki: Biker seriously injured after being hit by bus

Mulki: ಬಸ್‌ ಢಿಕ್ಕಿ ಹೊಡೆದು ಬೈಕ್‌ ಸವಾರ ಗಂಭೀರ

Sullia: Airavata bus stopped

Sullia: ಕೆಟ್ಟು ನಿಂತ ಐರಾವತ ಬಸ್‌

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Puttur: ಬೈಕ್‌-ಬಸ್‌ ಢಿಕ್ಕಿ:ವಿದ್ಯಾರ್ಥಿಗಳಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.