ಕರಾವಳಿಗೆ 2 ಸಚಿವ ಸ್ಥಾನ,ರಾಜ್ಯಾಧ್ಯಕ್ಷ ಪಟ್ಟ ?


Team Udayavani, Jul 30, 2019, 5:03 AM IST

BJP-545

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ವಿಶ್ವಾಸಮತ ಗೆದ್ದಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ರಚನೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಕರಾವಳಿಗೆ ಎರಡು ಸಚಿವ ಸ್ಥಾನ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಹುದ್ದೆ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ.

ಈಗಾಗಲೇ ಸಂಭಾವ್ಯ ಸಚಿವರ ಪಟ್ಟಿ ಸಿದ್ಧಗೊಳ್ಳುತ್ತಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಳಿ ಚರ್ಚಿಸಿದ ಬಳಿಕ ಅಂತಿಮಗೊಳಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಜೆಪಿಯ ಅಗ್ರಪಂಕ್ತಿಯ ನಾಯಕರಿಗೆ, ಪ್ರಾದೇಶಿಕ ಮತ್ತು ಜಾತಿವಾರು ಪ್ರಾತಿನಿಧ್ಯ ನೀಡಬೇಕಾದ ಸವಾಲು ಪಕ್ಷದ ಮುಂದಿದೆ. ಮುಖ್ಯಮಂತ್ರಿ ಸೇರಿದಂತೆ 34 ಸಂಖ್ಯಾ ಬಲದ ಸಚಿವ ಸಂಪುಟ ರಚನೆಗೆ ಅವಕಾಶವಿದ್ದು, ಇಷ್ಟರಲ್ಲೇ ಸಚಿವ ಸ್ಥಾನಗಳನ್ನು ಹೊಂದಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಎಷ್ಟು ಸ್ಥಾನಗಳು ದೊರೆಯಬಹುದು ಎಂಬುದು ಕುತೂಹಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದ ಹಿರಿಯ ಶಾಸಕ ಅಂಗಾರ ಹೆಸರು ಮುನ್ನೆಲೆಯಲ್ಲಿದೆ. ಜಿಲ್ಲೆಯ ಬಹುತೇಕ ಶಾಸಕರ ಒಲವು ಕೂಡ ಅವರ ಕಡೆಗಿದೆ ಎನ್ನಲಾಗಿದೆ. ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಸುನಿಲ್‌ ಕುಮಾರ್‌ ಅವರ ಹೆಸರು ಮುಂಚೂಣಿಯಲ್ಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಿರು ವುದರಿಂದ ಪಕ್ಷದ ರಾಜ್ಯಾ ಧ್ಯಕ್ಷ ಸ್ಥಾನಕ್ಕೆ ಹೊಸ ಆಯ್ಕೆ ನಡೆಯಬೇಕಾಗಿದೆ. ಸುನಿಲ್‌ ಕುಮಾರ್‌ ಅವರ ಹೆಸರಿನ ಜತೆಗೆ ಸಿ.ಟಿ. ರವಿ ಮತ್ತು ನಳಿನ್‌ ಕುಮಾರ್‌ ಕಟೀಲು ಅವರ ಹೆಸರುಗಳೂ ಕೇಳಿಬರುತ್ತಿವೆ.

ಕಾಂಗ್ರೆಸ್‌ ಸರಕಾರದಲ್ಲಿ
ಸ್ಥಾನಕ್ಕನುಗುಣ ಪ್ರಾತಿನಿಧ್ಯ
2013ರಲ್ಲಿ ಕಾಂಗ್ರೆಸ್‌ ಸರಕಾರದ ಅವಧಿ ಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 13 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಕಾಂಗ್ರೆಸ್‌ ಪಡೆದುಕೊಂಡಿತ್ತು. ಆದಕ್ಕನುಗುಣವಾಗಿ ದಕ್ಷಿಣ ಕನ್ನಡಕ್ಕೆ ಮೂರು ಮತ್ತು ಉಡುಪಿಗೆ ಒಂದು ಸಚಿವ ಸ್ಥಾನ ನೀಡಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಒಂದೇ ಸ್ಥಾನವನ್ನು ಗೆದ್ದಿದ್ದರೂ ದೋಸ್ತಿ ಸರಕಾರದಲ್ಲಿ ಒಂದು ಸಚಿವ ಸ್ಥಾನವನ್ನು ನೀಡಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಭದ್ರ ಕೋಟೆ ಎಂಬುದು ಜನಜನಿತ. ಒಟ್ಟು 13 ಸ್ಥಾನಗಳಲ್ಲಿ 12 ಶಾಸಕರು ಬಿಜೆಪಿಯವರೇ. 2 ಲೋಕಸಭಾ ಸ್ಥಾನಗಳೂ ಬಿಜೆಪಿ ಪಾಲಾ ಗಿವೆ. 2013ರಲ್ಲಿ ಕಾಂಗ್ರೆಸ್‌ಗೆ ಸಿಕ್ಕಿದ್ದ ಜನಾ ದೇಶವೇ 2018ರ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿದೆ. ಈ ಪರಿಸ್ಥಿತಿಯಲ್ಲಿ ನೂತನ ಸರಕಾರದಲ್ಲಿ ಇಲ್ಲಿ ಪಕ್ಷ ಪಡೆದಿರುವ
ಸ್ಥಾನಗಳ ಆಧಾರದಲ್ಲಿ ಸಚಿವ ಸಂಪುಟ ಪ್ರಾತಿನಿಧ್ಯ ದೊರಕೀತೆ ಎಂಬುದೀಗ ಚರ್ಚೆಯ ವಸ್ತು

ಹಾಲಾಡಿಗೆ ಸ್ಥಾನ: ಜಾಲತಾಣದಲ್ಲಿ ಒತ್ತಡ
ಕುಂದಾಪುರ: ಸಚಿವ ಸಂಪುಟದಲ್ಲಿ ಕರಾವಳಿಗೆಷ್ಟು ಸ್ಥಾನ ಎಂಬ ಕುತೂಹಲದ ನಡುವೆ 5 ಬಾರಿ ಕುಂದಾಪುರ ಕ್ಷೇತ್ರವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ತೀವ್ರ ಒತ್ತಾಯ ಕೇಳಿಬರುತ್ತಿದೆ. ಜಾಲತಾಣದಲ್ಲಿ ಆಂದೋಲನ ಮಾದರಿಯಲ್ಲಿ ಒತ್ತಡ ರೂಪುಗೊಳ್ಳುತ್ತಿದೆ. ಉಡುಪಿ ಜಿಲ್ಲೆಯ ಅಷ್ಟೂ ಮಂದಿ ಶಾಸಕರು ಸಚಿವರಾಗಲು ಅರ್ಹರೇ ಆಗಿದ್ದರೂ ಹಾಲಾಡಿಯವರಿಗೇ ಏಕೆ ಕೊಡಬೇಕು ಎಂಬ ಕುರಿತು ಜಾಲತಾಣಿಗರು ಕಾರಣಗಳನ್ನು ನೀಡುತ್ತಿದ್ದಾರೆ.

ಮಾಹಿತಿಯಿಲ್ಲ
ಸಚಿವ ಸ್ಥಾನದ ಕುರಿತು ಯಾವುದೇ ಅಶರೀರವಾಣಿ ನನಗೆ ಬಂದಿಲ್ಲ. ನಾನೂ ಹುದ್ದೆ ಕೊಡಿ ಎಂದು ಕೇಳಿಲ್ಲ. ಪಕ್ಷೇತರನಾಗಿ ಇದ್ದಾಗಲೂ ಪಕ್ಷದಲ್ಲಿ ಇದ್ದಾಗಲೂ ಬಿಜೆಪಿಗೆ ದ್ರೋಹ ಬಗೆದಿಲ್ಲ. ಪಕ್ಷದ ಬೆಳವಣಿಗೆಗಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಅಷ್ಟೆ. ಬಿಜೆಪಿ ಸರಕಾರದಿಂದ ರಾಜ್ಯಕ್ಕೆ ಒಳ್ಳೆಯದಾಗಲಿ, ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಆಶಿಸುತ್ತೇನೆ.
 - ಹಾಲಾಡಿ ಶ್ರೀನಿವಾಸ ಶೆಟ್ಟಿ , ಕುಂದಾಪುರ ಶಾಸಕರು

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Mangaluru: ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆಗೆ ಪ್ರಸ್ತಾವ

Mangaluru: ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆಗೆ ಪ್ರಸ್ತಾವ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.