ಪೋಷಣ್‌ ಅಭಿಯಾನದಡಿ 2,186 ಸಿಮ್‌ ವಿತರಣೆಗೆ ಸಿದ್ಧ

ಸ್ಮಾರ್ಟ್‌ ಫೋನ್‌ ಈಗಾಗಲೆ ವಿತರಣೆ ,ಕೋವಿಡ್‌ನಿಂದ ತಂತ್ರಾಂಶ ಬಳಕೆ ತರಬೇತಿ ವಿಳಂಬ

Team Udayavani, Oct 12, 2020, 11:48 AM IST

ಪೋಷಣ್‌ ಅಭಿಯಾನದಡಿ 2,186 ಸಿಮ್‌ ವಿತರಣೆಗೆ ಸಿದ್ಧ

ವಿತರಣೆಗೆ ಸಿದ್ಧವಾಗಿರುವ ಮೊಬೈಲ್‌.

ಬೆಳ್ತಂಗಡಿ,ಅ. 11: ಕೇಂದ್ರ ಸರಕಾರದ ಪೋಷಣ್‌ ಅಭಿಯಾನದಡಿ ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳು, ಗರ್ಭಿಣಿ, ಬಾಣಂತಿಯರ ಸಂಪೂರ್ಣ ಮಾಹಿತಿ ಡಿಜಿಟಲೈಜ್‌ ದಾಖಲೀಕರಣ ಮಾಡುವ ನೆಲೆಯಲ್ಲಿ ಜಿಲ್ಲೆಯ 2,108 ಅಂಗನವಾಡಿಗಳ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕರಿಗೆ ಈಗಾಗಲೇ ಮೊಬೈಲ್‌ ವಿತರಣೆಯಾಗಿದ್ದು, ಪ್ರಸಕ್ತ 2,186 ಸಿಮ್‌ ಕಾರ್ಡ್‌ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕೈಸೇರಿದೆ.

ಜಿಲ್ಲೆಯಲ್ಲಿ ಒಟ್ಟು 2,018 ಅಂಗನವಾಡಿ ಕೇಂದ್ರಗಳಲ್ಲಿದ್ದು 82 ಮೇಲ್ವಿಚಾರಕರಿದ್ದಾರೆ. ಈಗಾಗಲೆ ಅವಶ್ಯವಿರುವಷ್ಟು ಮೊಬೈಲ್‌ಗ‌ಳನ್ನು ಸಿಡಿಪಿಒ ಕಚೇರಿಗೆ ವರ್ಗಾಯಿಸಿ ಒಂದು ತಿಂಗಳು ಕಳೆದಿದೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಅಂಗನವಾಡಿ ವ್ಯಾಪ್ತಿಯಲ್ಲಿ ಲಭ್ಯವಿರುವ ನೆಟ್‌ವರ್ಕ್‌ ಆಧರಿಸಿ ಬೇರೆ ಬೇರೆ ಕಂಪೆನಿ ಸಿಮ್‌ಗಳ ಮಾಹಿತಿ ಪಡೆಯಲಾಗಿತ್ತು. ಈ ನೆಲೆಯಲ್ಲಿ ಒಟ್ಟು ಹೆಚ್ಚುವರಿ ಸಿಮ್‌ ಸೇರಿ 2,186 ಸಿಮ್‌ ಕಾರ್ಡ್‌ ಜಿಲ್ಲಾ ಕಚೇರಿಗೆ ಪೂರೈಕೆಯಾಗಿದೆ.

ತರಬೇತಿ ವಿಳಂಬ :  ವಿತರಣೆಗೆ ಲಭ್ಯವಿದ್ದರೂ ಸಿಮ್‌ ಕಾರ್ಡ್‌ ನೀಡುವ ಮುನ್ನ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಸ್ನೇಹ ಆ್ಯಪ್‌ ಇನ್‌ಸ್ಟಾಲ್‌ ಮಾಡಿ ನೀಡಬೇಕಿದೆ. ತರಬೇತಿ ವಿಳಂಬವಾಗುತ್ತಿರುವುದರಿಂದ ಸಿಮ್‌ ಕಾರ್ಡ್‌ ವಿತರಣೆ ನಡೆದಿಲ್ಲ.

ಸ್ನೇಹ ತಂತ್ರಾಂಶ ಆ್ಯಪ್‌ :  ರಾಜ್ಯದ ಅಂಗನವಾಡಿ ಕೇಂದ್ರಗಳ ಮಾಹಿತಿ ಸಂಗ್ರಹಕ್ಕಾಗಿ ಸ್ನೇಹ ತಂತ್ರಾಂಶ (ಆ್ಯಪ್‌) ರೂಪಿಸಲಾಗಿದೆ. ಈ ಆ್ಯಪ್‌ ಮೂಲಕ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೇಂದ್ರದ ವಿವರ ದಾಖಲಾತಿ ಮಾಡಬೇಕಿದೆ.

ಡಿಡಿ ಕಚೇರಿ  ಸಿಬಂದಿಗೆ ತರಬೇತಿ :  ದ.ಕ. ಜಿಲ್ಲೆಯಲ್ಲಿರುವ 2,108 ಅಂಗನವಾಡಿಗಳ ಕಾರ್ಯಕರ್ತೆಯರು, 82 ಮೇಲ್ವಿಚಾರಕರು ಸಹಿತ 2,190 ಮೊಬೈಲ್‌ ಜತೆಗೆ ಹೆಚ್ಚುವರಿಯಾಗಿ 116 ಸೇರಿ ಒಟ್ಟು 2,306 ಮೊಬೈಲ್‌ಗ‌ಳು ಪೂರೈಕೆಯಾಗಿವೆ. ಇನ್ನುಳಿದಂತೆ 1,949 ಏರ್‌ಟೆಲ್‌, 2 ವೊಡಾಫೋನ್‌, 130 ಬಿಎಸ್‌ಎನ್‌ಎಲ್‌, 105 ಜಿಯೋ ಸಿಮ್‌ ರಾಜ್ಯದಿಂದ ಜಿಲ್ಲಾ ಕಚೇರಿಗೆ ತಲುಪಿದೆ. ಮೊಬೈಲ್‌ ಸಿಮ್‌ ನೀಡುವ ಮುನ್ನ ಸ್ನೇಹ ಆ್ಯಪ್‌, ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ (ಐಸಿಡಿಎಸ್‌), ಹೆಚ್ಚುವರಿ ಕಲಿಕಾ ವಿಧಾನ ತಂತ್ರಾಂಶ ಅಳವಡಿಸಿ ನೀಡಬೇಕಿದೆ. ಈಗಾಗಲೆ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಯಡಿ 21 ವಿಷಯವಾರುಗಳ ಪೈಕಿ 3 ವಿಷಯವಾರು ತರಬೇತಿಯಷ್ಟೆ ಪೂರ್ಣ ಗೊಂಡಿದೆ. ತಂತ್ರಾಂಶದ ವಿಚಾರವಾಗಿ ದಿಲ್ಲಿಯಿಂದ ಡಿಡಿ ಕಚೇರಿ ಸಿಬಂದಿಗಷ್ಟೆ ತರಬೇತಿ ನೀಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಜತೆಗೆ ಇಲಾಖೆಯ ಮೇಲ್ವಿಚಾರಕರಿಗೂ ಸ್ಮಾರ್ಟ್‌ಫೋನ್‌ ವಿತರಣೆಯಾಗಲಿದೆ. ಮಕ್ಕಳ ವಿವರ, ಅವರ ತೂಕ, ಎತ್ತರ, ನೀಡಿದ ಆಹಾರದ ವಿವರಗಳನ್ನು ದಾಖಲಾತಿ ಮಾಡಬೇಕಾಗಿದೆ. ಜತೆಗೆ ಕೇಂದ್ರದ ವ್ಯಾಪ್ತಿಯಲ್ಲಿರುವ ಗರ್ಭಿಣಿಯರು, ಬಾಣಂತಿಯರ ವಿವರಗಳನ್ನು ದಾಖಲಾತಿ ಮಾಡುವ ಸಲುವಾಗಿ ಮೂರು ಆ್ಯಪ್‌ಗಳನ್ನು ಮೊಬೈಲ್‌ಗೆ ಅಳವಡಿಸಿ ಕೇಂದ್ರದ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ. ಪ್ರಸ್ತುತ ಕೋವಿಡ್‌ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳು ತೆರೆಯದಿದ್ದುದರಿಂದ ಪ್ರಕ್ರಿಯೆಗಳು ಮತ್ತಷ್ಟು ವಿಳಂಬವಾಗುತ್ತಿವೆ.

ಸಲಕರಣೆ ಸಹಿತ ವಿತರಣೆ :  ಈಗಾಗಲೇ ದ.ಕ. ಜಿಲ್ಲಾ ವ್ಯಾಪ್ತಿಯ ಮಂಗಳೂರು ನಗರ, ಮಂಗಳೂರು ಗ್ರಾಮಾಂತರ, ಬಂಟ್ವಾಳ, ವಿಟ್ಲ, ಬೆಳ್ತಂಗಡಿ, ಪುತ್ತೂರು, ಸುಳ್ಯ ವ್ಯಾಪ್ತಿಯ 7 ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಕಚೇರಿಗಳಿಗೆ ಮೊಬೈಲ್‌ ವಿತರಣೆಯಾಗಿದೆ. ಮೊಬೈಲ್‌ ಜತೆಗೆ ಪವರ್‌ ಬ್ಯಾಂಕ್‌, ಇಯರ್‌ ಫೋನ್‌, ಚಾರ್ಜರ್‌, ಮೆಮರಿಕಾರ್ಡ್‌, ಸ್ಕ್ರೀನ್‌ ಗಾರ್ಡ್‌ ನೀಡಲಾಗಿದೆ. ಇದರೊಂದಿಗೆಪ್ರತಿ ಅಂಗನವಾಡಿಗೆ ಮಕ್ಕಳ ತೂಕ ಮತ್ತು ಎತ್ತರ ಪರಿಶೀಲಿಸಲು ಡಿಜಿಟಲ್‌ ಮಾಪನ ಯಂತ್ರವನ್ನು ಪೂರೈಸಲಾಗಿದೆ.

ಸ್ಮಾರ್ಟ್‌ ಫೋನ್‌ ವಿತರಣೆ : ಪೋಷಣ್‌ ಅಭಿಯಾನದಡಿ ಸ್ಮಾರ್ಟ್‌ ಫೋನ್‌ ಈಗಾಗಲೆ ವಿತರಿಸಲಾಗಿದೆ. ಸಿಮ್‌ ಕಾರ್ಡ್‌ ಕೈಸೇರಿದ್ದು, ಸ್ನೇಹ ತಂತ್ರಾಂಶವನ್ನು ಮೊಬೈಲ್‌ಗಳಿಗೆ ಅಳವಡಿಸಿ ಅದರ ಸಂಪೂರ್ಣ ತರಬೇತಿ ನೀಡಲಾಗುತ್ತದೆ. ಶ್ಯಾಮಲಾ, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

HDK–Siddu

Percentage War: ಮತ್ತೆ 60 ಪರ್ಸೆಂಟ್‌ ಕಮಿಷನ್‌ ಯುದ್ಧ ; ಆರೋಪ – ಪ್ರತ್ಯಾರೋಪ

DKS–Delhi

Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಬೋಳಂತೂರಿನಲ್ಲಿ ಮನೆ ದೋಚಿದ ಪ್ರಕರಣ: ಶೀಘ್ರದಲ್ಲೇ ಆರೋಪಿಗಳ ಬಂಧನ?

ಇಂದು ಉಪರಾಷ್ಟ್ರಪತಿ ಧನ್ಕರ್‌ ಧರ್ಮಸ್ಥಳಕ್ಕೆ

ಇಂದು ಉಪರಾಷ್ಟ್ರಪತಿ ಧನ್ಕರ್‌ ಧರ್ಮಸ್ಥಳಕ್ಕೆ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Belthangady ಶಾರ್ಟ್ ಸರ್ಕ್ಯೂಟ್: ಮನೆ ಬೆಂಕಿಗಾಹುತಿ

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Uppinangady: ಬಸ್‌ ನಿಲ್ದಾಣದಲ್ಲಿ ಕಳವು

Punjalkatte: ವಿದ್ಯುತ್‌ ಶಾಕ್‌ನಿಂದ ಕೂಲಿ ಕಾರ್ಮಿಕ ಸಾವು

Punjalkatte: ವಿದ್ಯುತ್‌ ಶಾಕ್‌ನಿಂದ ಕೂಲಿ ಕಾರ್ಮಿಕ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.