ಜಿಲ್ಲೆಯ 220 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರಿಲ್ಲ !
Team Udayavani, Apr 9, 2021, 2:50 AM IST
ಮಹಾನಗರ: ಶೈಕ್ಷಣಿಕವಾಗಿ ರಾಜ್ಯದಲ್ಲೇ ಮುಂಚೂಣಿಯಲ್ಲಿ ಗುರುತಿಸಿ ಕೊಂಡಿರುವ ದ.ಕ. ಜಿಲ್ಲೆಯಲ್ಲಿ ಬರೋಬ್ಬರಿ 220 ಅಂಗನವಾಡಿ ಕೇಂದ್ರಗಳಿಗೆ ಇನ್ನು ಕೂಡ ಸ್ವಂತ ಸೂರಿನ ಭಾಗ್ಯವಿಲ್ಲ!
ಈ ಹಿನ್ನೆಲೆಯಲ್ಲಿ ಅವುಗಳು ಬಾಡಿಗೆ ಆಧಾರಿತವಾಗಿ ಅಥವಾ ಸ್ವಯಂ ಸೇವಾ ಸಂಸ್ಥೆ-ದಾನಿಗಳ ಕಟ್ಟಡದಲ್ಲಿಯೇ ಅಂಗನ ವಾಡಿ ಕೇಂದ್ರವನ್ನು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ದ.ಕ. ಜಿಲ್ಲೆಯಲ್ಲಿ ಒಟ್ಟು 2,104 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 1,884 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡಗಳಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿವೆ. ಉಳಿದ 220 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ.
ಮಂಗಳೂರು ನಗರದಲ್ಲೇ ಅಧಿಕ ಕೊರತೆ! :
ಮಂಗಳೂರು ನಗರ ವ್ಯಾಪ್ತಿಯಲ್ಲಿ 225 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ ಕೇವಲ 99 ಅಂಗನವಾಡಿ ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡವಿದ್ದು, ಉಳಿದ 126 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರಿಲ್ಲ. ಶೈಕ್ಷಣಿಕ ಹಬ್ ಆಗಿರುವ ನಗರದಲ್ಲಿ ಶಿಕ್ಷಣದ ಪ್ರಾರಂಭಿಕ ಹೆಜ್ಜೆ ಆಗಿರುವ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ ಎಂಬುದು ಆಶ್ಚರ್ಯಕರ ಸಂಗತಿ. ಇದೇ ರೀತಿ ಮಂಗಳೂರು ಗ್ರಾಮಾಂತರ ಭಾಗದಲ್ಲಿ ಒಟ್ಟು 450 ಅಂಗನವಾಡಿಗಳ ಪೈಕಿ 389 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡವಿದ್ದು ಉಳಿದ 61 ಕೇಂದ್ರಗಳಿಗೆ ಸ್ವಂತ ಸೂರಿಲ್ಲ!
ಬೆಳ್ತಂಗಡಿ ವ್ಯಾಪ್ತಿಯ 324 ಅಂಗನವಾಡಿ ಕೇಂದ್ರಗಳ ಪೈಕಿ 317, ಪುತ್ತೂರಲ್ಲಿ 370ರ ಪೈಕಿ 368 ಸ್ವಂತ ಕಟ್ಟಡ, ವಿಟ್ಲದಲ್ಲಿ 229ರ ಪೈಕಿ 225 ಹಾಗೂ ಬಂಟ್ವಾಳದಲ್ಲಿ 341ರ ಪೈಕಿ 321 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. ವಿಶೇಷ ವೆಂದರೆ ಸುಳ್ಯದಲ್ಲಿರುವ ಎಲ್ಲ 165 ಅಂಗನವಾಡಿ ಕೇಂದ್ರಗಳು ಸಂತ ಕಟ್ಟಡ ಹೊಂದಿವೆ.
20 ಕಟ್ಟಡಕ್ಕೆ ಸ್ವಂತ ನಿವೇಶನ :
ಸ್ವಂತ ಕಟ್ಟಡ ಇಲ್ಲದ ಅಂಗನವಾಡಿ ಕೇಂದ್ರಗಳ ಪೈಕಿ 20 ಕಟ್ಟಡಗಳಿಗೆ ನಿವೇಶನ ಲಭ್ಯವಿವೆ. ಮಂಗಳೂರು ಗ್ರಾಮಾಂ ತರದಲ್ಲಿರುವ ಕೊಂಡಾಣ, ಗುಂಡೀರು, ಚೆಂಬುಗುಡ್ಡೆ, ಜ್ಯೋತಿನಗರ, ಮಂಗಳೂರು ನಗರದಲ್ಲಿ ಬೀಡು, ಶಿವನಗರ, ಕಾಟಿಪಳ್ಳ 3ನೇ ವಿಭಾಗ, ಜೋಡುಕಟ್ಟೆ ಮರೋಳಿ, ದಯಾಂಬು ಬೋರುಗುಡ್ಡೆ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಲಭ್ಯವಿವೆ. ಬೆಳ್ತಂಗಡಿಯ ಕೆಲ್ಲಗುತ್ತು, ಸುದೇಮುಗೇರು, ಬಂಟ್ವಾಳದ ಅಡ್ಕ, ಸಜೀಪಮೂಡದ ಕೊಲ್ಯ, ಸಜೀಪಮುನ್ನೂರಿನ ಮರ್ತಾಜೆ, ಪುತ್ತೂರಿನ ವಾಳ್ಯ, ಪಂಜಿಗುಡ್ಡೆ, ವಿಟ್ಲದ ಮಾಣಿಯ ಹಳೀರ, ಕರೋಪಾಡಿಯ ಪದ್ಯಾಣ, ವಿಟ್ಲ ಪಟ್ನೂರಿನ ಬೆದ್ರಕಾಡು, ಕರೋಪಾಡಿಯ ಪಳ್ಳದ ಕೋಡಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಲಭ್ಯವಿವೆ.
ಸೂರು ಇಲ್ಲದ ಅಂಗನವಾಡಿ ಕೇಂದ್ರಗಳ ಸಂಖ್ಯೆ :
ತಾಲೂಕು ಸಂಖ್ಯೆ
ಮಂಗಳೂರು ನಗರ 126
ಮಂಗಳೂರು ಗ್ರಾಮಾಂತರ 61
ಬಂಟ್ವಾಳ 20
ಬೆಳ್ತಂಗಡಿ 7
ವಿಟ್ಲ 4
ಪ್ರಸ್ತುತ 1,884 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ನಡೆಯುತ್ತಿದ್ದು, ಉಳಿದಂತೆ 24 ಹೊಸ ಕಟ್ಟಡಗಳ ಕಾಮಗಾರಿ ಸದ್ಯ ಪ್ರಗತಿಯಲ್ಲಿವೆ. ಆದರೂ ಎಲ್ಲ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಯಾವುದೇ ಸಮಸ್ಯೆ ಆಗದಂತೆ ಕುಡಿಯುವ ನೀರು, ಶೌಚಾಲಯ ಸಹಿತ ಮೂಲ ಸೌಕರ್ಯವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡ ಲಾಗಿದೆ. ನರೇಗಾ ಹಾಗೂ ಇತರ ಯೋಜನೆಯಡಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಾಣದ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ. –ಪಾಪಾ ಬೋವಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ-ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.