2,217 ಕೋಟಿ ರೂ. ಸಂಗ್ರಹ; 681 ಕೋಟಿ. ರೂ. ವಿನಿಯೋಗ

Team Udayavani, Feb 15, 2021, 2:12 AM IST

2,217 ಕೋಟಿ ರೂ. ಸಂಗ್ರಹ; 681 ಕೋಟಿ. ರೂ. ವಿನಿಯೋಗ

ಮಂಗಳೂರು: ರಾಜ್ಯದಲ್ಲಿ ಗಣಿಗಾರಿಕೆ ಬಾಧಿತ ಪ್ರದೇಶಗಳ ಅಭಿವೃದ್ಧಿ, ಪರಿಸರ ಮತ್ತು ಜನರ ಆರೋಗ್ಯ ಸಂರಕ್ಷಣೆ ಉದ್ದೇಶಕ್ಕೆ ಪರವಾನಿಗೆದಾರರಿಂದ ಖನಿಜ ಪ್ರತಿಷ್ಠಾನದಲ್ಲಿ ಸಂಗ್ರಹಗೊಂಡಿರುವ ಸಾವಿರಾರು ಕೋಟಿ ರೂ. ವಿನಿಯೋಗ ವಾಗದೆ ಖಜಾನೆಯಲ್ಲಿಯೇ ಬಾಕಿಯುಳಿದಿದೆ!

ಗಣಿಗಾರಿಕೆ ಚಟುವಟಿಕೆಗಳು ನಡೆಯುವ ಎಲ್ಲ ಜಿಲ್ಲೆಗಳಿಂದ ಖನಿಜ ಪ್ರತಿಷ್ಠಾನದಲ್ಲಿ (2020ರ ನವೆಂಬರ್‌ 30ರ ವರೆಗೆ) ಬರೋಬರಿ 2,217.43 ಕೋಟಿ ರೂ. ಸಂಗ್ರಹವಾಗಿದೆ. ವಿಶೇಷವೆಂದರೆ ಇಷ್ಟೊಂದು ದೊಡ್ಡ ಮೊತ್ತದಲ್ಲಿ ಇಲ್ಲಿವರೆಗೆ ಖರ್ಚು ಮಾಡಿರುವುದು ಕೇವಲ 681.94 ಕೋ.ರೂ. ಮಾತ್ರ. ಉಳಿದಂತೆ 1,535 .61 ಕೋಟಿ ರೂ. ಹಣ ಇನ್ನೂ ಖಜಾನೆಯಲ್ಲೇ ವ್ಯರ್ಥ ಎನ್ನುವ ರೀತಿಯಲ್ಲಿ ಉಳಿದುಕೊಂಡಿದೆ.

ಬಳ್ಳಾರಿಯಲ್ಲಿ ಗರಿಷ್ಠ

ಗಣಿಗಾರಿಕೆಯಲ್ಲಿ ಮುಂಚೂಣಿ ಯಲ್ಲಿರುವ ಬಳ್ಳಾರಿ ಜಿಲ್ಲೆಯಲ್ಲಿ ಗರಿಷ್ಠ 1291.49 ಕೋ.ರೂ. ಸಂಗ್ರಹವಾಗಿದೆ. ಅದರಲ್ಲಿ 325.27 ಕೋ.ರೂ. ಮಾತ್ರ ವಿನಿಯೋಗವಾಗಿದ್ದು, 966.22 ಕೋ.ರೂ. ಉಳಿದುಕೊಂಡಿದೆ. ಕಲಬುರಗಿ ಜಿಲ್ಲೆಯಲ್ಲೂ 320.97 ಕೋ.ರೂ. ಸಂಗ್ರಹ ಆಗಿದ್ದು, ಕೇವಲ 54.86 ಕೋ.ರೂ. ಮಾತ್ರ ವಿ ನಿಯೋಗವಾಗಿ 266.10 ಕೋ.ರೂ. ಉಳಿಕೆ ಯಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಸುಮಾರು 67.12 ಕೋ.ರೂ.ನಲ್ಲಿ 24.24 ಕೋ.ರೂ. ವಿನಿಯೋಗವಾಗಿ 42.88 ಕೋ.ರೂ. ಉಳಿಕೆಯಾಗಿದೆ.

ಕರಾವಳಿಯಲ್ಲಿಯೂ 12 ಕೋಟಿ ರೂ. ಬಾಕಿ

ದ.ಕ. ಜಿಲ್ಲೆಯಲ್ಲಿ ಖನಿಜ ಪ್ರತಿಷ್ಠಾನಕ್ಕೆ 2020ರ ನವೆಂಬರ್‌ 30ರ ವರೆಗೆ 8.19 ಕೋಟಿ ರೂ. ಸಂಗ್ರಹವಾಗಿದ್ದು, ಇದರಲ್ಲಿ 1.18 ಕೋ.ರೂ. ವಿನಿಯೋಗವಾಗಿದ್ದು 7.01 ಕೋ.ರೂ. ಉಳಿದಿದೆ. ಹಾಗೆಯೇ ಉಡುಪಿ ಜಿಲ್ಲೆಯಲ್ಲಿಯೂ ಸಂಗ್ರಹವಾಗಿರುವ 6.86 ಕೋ.ರೂ.ನಲ್ಲಿ 97.27 ಲಕ್ಷ ರೂ. ವೆಚ್ಚವಾಗಿದ್ದು 5.88 ಕೋ.ರೂ. ಉಳಿದಿದೆ.

ಅನುದಾನ ಸಂಗ್ರಹ

ಗಣಿಗಾರಿಕೆ ಪರವಾನಿಗೆದಾರರಿಂದ ಜಿಲ್ಲಾಮಟ್ಟದಲ್ಲಿ ಸಂಗ್ರಹವಾಗುವ ರಾಜಸ್ವದಲ್ಲಿ ನಿರ್ದಿಷ್ಟ ಮೊತ್ತ ಆಯಾಯ ಜಿಲ್ಲಾ ಖನಿಜ ಪ್ರತಿಷ್ಠಾನಕ್ಕೆ ಹೋಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು ಇದರ ಅಧ್ಯಕ್ಷರಾಗಿರುತ್ತಾರೆ ಮತ್ತು ಜಿಲ್ಲಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರು ತ್ತಾರೆ. ಗಣಿಗಾರಿಕೆ ಬಾಧಿತ ಪ್ರದೇಶ ಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಗೆ ಸಂಬಂಧ ಪಟ್ಟ ಯೋಜನೆಗಳಿಗೆ ಆಯಾಯ ಇಲಾಖೆಗಳಿಂದ ಕ್ರಿಯಾ ಯೋಜನೆ ರೂಪಿಸಿ ಸಭೆಯಲ್ಲಿ ಜಿಲ್ಲಾ ಗಣಿ ಪ್ರತಿಷ್ಠಾನ ಸಭೆಯಲ್ಲಿ ಅಂಗೀಕರಿಸಿ ವಿನಿಯೋಗಿಸಬಹುದಾಗಿದೆ.

ಯಾವುದಕ್ಕೆಲ್ಲ ಬಳಕೆ

ಗಣಿಗಾರಿಕೆ ಬಾಧಿತ ಪ್ರದೇಶಗಳ ಅಭಿವೃದ್ಧಿ ಹಾಗೂ ಪರಿಸರ, ಆರೋಗ್ಯ ಉದ್ದೇಶಗಳಿಗೆ ಅನುದಾನ ವಿನಿಯೋಗಿಸಬೇಕಾಗಿದೆ. ಮುಖ್ಯ ವಾಗಿ ಆ ಪ್ರದೇಶದಲ್ಲಿ ಕುಡಿಯುವ ನೀರು, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಅಳತೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಬಂಧ ಕಾರ್ಯಕ್ರಮಗಳು, ವಯಸ್ಸಾದ ಮತ್ತು ಅಂಗವಿಕಲ ಕಲ್ಯಾಣ, ಕೌಶಲ ಅಭಿವೃದ್ಧಿ, ನೈರ್ಮಲ್ಯ, ಭೌತಿಕ ಮೂಲಸೌಕರ್ಯ, ಇಂಧನ‌ ಮತ್ತು ನೀರಿನ ಅಭಿವೃದ್ಧಿ, ಗಣಿಗಾರಿಕೆ ಜಿಲ್ಲೆಗಳಲ್ಲಿ ಪರಿಸರದ ಗುಣಮಟ್ಟ ಹೆಚ್ಚಿಸುವ ಉದ್ದೇಶಗಳಿಗೆ ವಿನಿಯೋಗಿಸಲಾಗುತ್ತಿದೆ.

ಇಲಾಖೆಗಳಿಂದ ಪ್ರಸ್ತಾವನೆ ಬರಬೇಕು

ಗಣಿಗಾರಿಕೆ ಬಾಧಿತ ಪ್ರದೇಶಗಳಲ್ಲಿ ಖನಿಜ ಪ್ರತಿಷ್ಠಾನಕ್ಕೆ ಇಲಾಖೆಗಳಿಂದ ಅನುದಾನ ಕೋರಿ ಪ್ರಸ್ತಾವನೆ ಬಂದರೆ ಮಾತ್ರ ಸಂಗ್ರಹದಲ್ಲಿರುವ ಮೊತ್ತವನ್ನು ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಲು ಅವಕಾಶವಿದೆ. ಪ್ರಸ್ತುತ ಆರೋಗ್ಯ ಶೀರ್ಷಿಕೆಯಡಿ ಕೊರೊನಾ ನಿರ್ವಹಣೆ ಉದ್ದೇಶಕ್ಕೆ ಅನುದಾನ ಒದಗಿಸಲಾಗಿದೆ. ಪ್ರಸ್ತಾವನೆ ಬಾರದೇ ಸ್ವಯಂ ಆಗಿ ವಿನಿಯೋಗಿಸಲು ಅವಕಾಶವಿರುವುದಿಲ್ಲ. ಇದರಿಂದಾಗಿ ಅನುದಾನ ಉಳಿಕೆಯಾಗಿದೆ ಎಂಬುದಾಗಿ ಗಣಿ ಇಲಾಖೆ ಹೇಳುತ್ತಿದೆ.

ಜಿಲ್ಲಾ ಖನಿಜ ಪ್ರತಿಷ್ಠಾನಕ್ಕೆ ಆಯಾಯ ಜಿಲ್ಲೆಗಳ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿರುತ್ತಾರೆ. ಹಣ ವಿನಿಯೋಗದ ಬಗ್ಗೆ ಶೀಘ್ರವೇ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸ‌ಲಾಗುವುದು. ಪ್ರತಿಷ್ಠಾನದಲ್ಲಿರುವ ಅನುದಾನವನ್ನು ಹೇಗೆ ವಿನಿಯೋಗಿಸಬಹುದು ಎಂಬುದನ್ನು ಉಸ್ತುವಾರಿ ಸಚಿವರು ಮತ್ತು ಶಾಸಕರ ಉಪಸ್ಥಿತಿಯ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. – ಮುರುಗೇಶ್‌ ನಿರಾಣಿ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರು

ಕೇಶವ ಕುಂದರ್‌

ಟಾಪ್ ನ್ಯೂಸ್

State records liquor sales worth Rs 408 crore in a single day

Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ

S.Korea: Plane skids on runway and hits wall: Watch video here

S.Korea: ರನ್‌ ವೇಯಲ್ಲಿ ಸ್ಕಿಡ್‌ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

saavu

ಮಂಜನಾಡಿ ಗ್ಯಾಸ್‌ ಸ್ಫೋ*ಟ ಪ್ರಕರಣ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

1-kambala

Mangaluru Kambala; ಬಂಗ್ರಕೂಳೂರಿನಲ್ಲಿ ಚಾಲನೆ, ನಾಳೆ ಸಮಾರೋಪ

12

Mangaluru: ಕಾಂಕ್ರೀಟ್‌ ರಸ್ತೆ ನಿರ್ಮಿಸಿದರೂ ಫುಟ್‌ಪಾತ್‌ ಇಲ್ಲ

11

Mangaluru: ಕರಾವಳಿ ಉತ್ಸವ; ಅರಣ್ಯ ಅನುಭವ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

State records liquor sales worth Rs 408 crore in a single day

Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ

S.Korea: Plane skids on runway and hits wall: Watch video here

S.Korea: ರನ್‌ ವೇಯಲ್ಲಿ ಸ್ಕಿಡ್‌ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್‌.. ಅರ್ಜುನ್‌ ಜಂಟಿ ಅಗ್ರಸ್ಥಾನ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.