ದ.ಕ.: 237 ಮಂದಿಗೆ ಪಾಸಿಟಿವ್‌; 2 ತಿಂಗಳ ಶಿಶು ಸಹಿತ ನಾಲ್ವರ ಸಾವು; 109 ಮಂದಿ ಗುಣಮುಖ


Team Udayavani, Jul 19, 2020, 6:05 AM IST

ದ.ಕ.: 237 ಮಂದಿಗೆ ಪಾಸಿಟಿವ್‌; 2 ತಿಂಗಳ ಶಿಶು ಸಹಿತ ನಾಲ್ವರ ಸಾವು; 109 ಮಂದಿ ಗುಣಮುಖ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 237 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಇದೇ ವೇಳೆ ಜಿಲ್ಲೆಯಲ್ಲಿ ನಾಲ್ವರು ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ.

ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಪುತ್ತೂರಿನ 80 ವರ್ಷದ ವೃದ್ಧೆ ಶುಕ್ರವಾರ ಹಾಗೂ ಮಂಗಳೂರಿನ 67 ವರ್ಷದ ವೃದ್ಧ, ಮಂಗಳೂರಿನ 49 ವರ್ಷದ ಮಹಿಳೆ, ಮಂಗಳೂರಿನ 61 ವರ್ಷದ ಮಹಿಳೆ ಶನಿವಾರ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 109 ಮಂದಿ ಕೋವಿಡ್ 19 ಸೋಂಕು ಮುಕ್ತರಾಗಿ ಶನಿವಾರ ಬಿಡುಗಡೆಗೊಂಡಿದ್ದಾರೆ.

ಸೋಂಕಿತರ ಕುಟುಂಬಕ್ಕೆ ಮಾತ್ರೆ
ಮುಂದಿನ ದಿನಗಳಲ್ಲಿ ಯಾವುದೇ ಆರೋಗ್ಯ ಸಂಸ್ಥೆಯಲ್ಲಿ ಕೋವಿಡ್‌ ಸಂಶಯಾಸ್ಪದ ವ್ಯಕ್ತಿಯ ಗಂಟಲ ದ್ರವ ಮಾದರಿಯನ್ನು ತೆಗೆದ ಸಂದರ್ಭ ಅಂತಹ ವ್ಯಕ್ತಿ ಹಾಗೂ ಆತನ ಮನೆಯಲ್ಲಿರುವ ಇತರರಿಗೆ ಪರೀಕ್ಷೆ ವರದಿ ಪ್ರಕಟವಾಗುವ ತನಕ ವಿಟಮಿನ್‌ 500 ಎಂಜಿ ಮಾತ್ರೆಗಳು ಬೆಳಗ್ಗೆ, ರಾತ್ರಿ ತಲಾ ಒಂದರಂತೆ ಹಾಗೂ ಝಿಂಕ್‌ 50ಎಂಜಿ ಮಾತ್ರೆ ಅಪರಾಹ್ನ 1 ಗಂಟೆಗೆ ತೆಗೆದುಕೊಳ್ಳಲು ಸೂಚಿಸಲಾಗುವುದು.

ಶಿಶು ಕೋವಿಡ್ 19 ಸೋಂಕಿಗೆ ಬಲಿ
ಪುತ್ತೂರಿನ ಎರಡು ತಿಂಗಳ ಶಿಶುವಿಗೆ ಕೋವಿಡ್ 19 ಸೋಂಕಿರುವುದು ದೃಢಪಟ್ಟಿದ್ದು, ಶನಿವಾರ ಬೆಳಗ್ಗೆ ಮಗು ಮೃತಪಟ್ಟಿದೆ. ಆದರೆ, ಈ ಮಗು ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿರುವುದನ್ನು ಜಿಲ್ಲಾಡಳಿತವು ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಏಕೆಂದರೆ, 2 ತಿಂಗಳ ಶಿಶು ಆಗಿದ್ದರಿಂದ ಅದರ ಸಾವಿನ ಕಾರಣನ್ನು ದೃಢೀಕರಿಸುವುದಕ್ಕೆ ನಿರ್ದಿಷ್ಟ ಸಮಿತಿಗೆ ನೀಡಲಾಗಿದ್ದು, ಅಲ್ಲಿಂದ ವರದಿ ಪಡೆದುಕೊಂಡ ಬಳಿಕವಷ್ಟೇ ಆ ಬಗ್ಗೆ ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಾಂತಿ ಹಾಗೂ ಕಫದಿಂದ ಬಳಲುತ್ತಿದ್ದ ಈ ಮಗುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿಶುವಿನ ಅಂತ್ಯಸಂಸ್ಕಾರವನ್ನು ಮಂಗಳೂರಿನ ನಂದಿಗುಡ್ಡೆ ಸ್ಮಶಾನದಲ್ಲಿ ಬಜರಂಗದಳದ ಕಾರ್ಯಕರ್ತರ ತಂಡ ನೆರವೇರಿಸಿದೆ.

ಬಂಟ್ವಾಳ: 19 ಪ್ರಕರಣ
ತಾಲೂಕಿನಲ್ಲಿ ಶನಿವಾರ 18 ಕೋವಿಡ್ 19 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಕೆಲವರಿಗೆ ಸೋಂಕು ದೃಢಪಟ್ಟಿದೆ.

ಬಿ.ಸಿ.ರೋಡಿನ ಖಾಸಗಿ ಲಾಡ್ಜೊಂದರಲ್ಲಿದ್ದ 34 ವರ್ಷದ ಪುರುಷ, ಬಂಟ್ವಾಳದ 72, 55, 30 ವರ್ಷದ ಪುರುಷರು, ಕರಿಂಗಳದ 39 ವರ್ಷದ ಪುರುಷ, ಅರಳದ 38 ವರ್ಷದ ಪುರುಷ, ಬಾರೆಬೆಟ್ಟಿನ 19 ವರ್ಷದ ಮಹಿಳೆ, ಮೇರಮಜಲಿನ 67 ವರ್ಷದ ಮಹಿಳೆ, ಫರಂಗಿಪೇಟೆ ವಳಚ್ಚಿಲ್‌ಪದವಿನ 30 ವರ್ಷದ ಮಹಿಳೆ, ಬೋಳಂತೂರಿನ 42 ವರ್ಷದ ಪುರುಷ, ಪಾಣೆಮಂಗಳೂರಿನ 83 ವರ್ಷದ ಮಹಿಳೆ, 61 ವರ್ಷದ ಪುರುಷ, ಕನ್ಯಾನದ 59 ವರ್ಷ ಪುರುಷ, ಕೈರಂಗಳದ 29 ವರ್ಷದ ಮಹಿಳೆ, ಪಜೀರಿನ 40 ವರ್ಷದ ಮಹಿಳೆ, ರಾಮಲಕಟ್ಟೆಯ 49 ವರ್ಷದ ಪುರುಷನಲ್ಲಿ ಸೋಂಕು ಕಂಡುಬಂದಿದೆ.

ಪುತ್ತೂರು: ಸೋಂಕಿನಿಂದ ಮಹಿಳೆ ಸಾವು : ಪೊಲೀಸ್‌, ವೈದ್ಯರ ಸಹಿತ 9 ಮಂದಿಗೆ ಸೋಂಕು
ತಾಲೂಕಿನಲ್ಲಿ ಶನಿವಾರ ಪುತ್ತೂರು ವಿಭಾಗದ ಪೊಲೀಸ್‌ ಅಧಿಕಾರಿ, ಪುತ್ತೂರಿನ ವೈದ್ಯರು ಸೇರಿದಂತೆ ಒಟ್ಟು 9 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದೇ ವೇಳೆ ನೆಹರೂ ನಗರದಲ್ಲಿ ಮಗನೊಂದಿಗೆ ವಾಸಿಸುತ್ತಿದ್ದ 74 ವರ್ಷ ಪ್ರಾಯದ ವೃದ್ಧೆ ಕೋವಿಡ್ 19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಅವರ ಗಂಟಲ ದ್ರವ ಪರೀಕ್ಷೆ ಮಾಡಿದ ಸಂದರ್ಭ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಜು. 17ರಂದು ಸಂಜೆ ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂಲತಃ ಅವರು ಬಂಟ್ವಾಳ ತಾಲೂಕಿನ ಪುಣಚದ ಅಜ್ಜಿನಡ್ಕ ನಿವಾಸಿಯಾಗಿದ್ದಾರೆ. ಪುಣಚ ಪೆರಿಯಲತಡ್ಕದ ಜಮಾಅತ್‌ಗೆ ಸಂಬಂಧಪಟ್ಟ ಜಮೀನಿನಲ್ಲಿ ಅವರ ದಫನ ಕಾರ್ಯ ನಡೆದಿದೆ.

ಪುತ್ತೂರು ಉಪವಿಭಾಗದ 54 ವರ್ಷದ ಪೊಲೀಸ್‌ ಅಧಿಕಾರಿ, ಪುತ್ತೂರು ಖಾಸಗಿ ಆಸ್ಪತ್ರೆಯ 65 ವರ್ಷದ ವೈದ್ಯಾಧಿಕಾರಿ, ಅಬುಧಾಬಿಯಿಂದ ಸ್ವದೇಶಕ್ಕೆ ಮರಳಿ ಪುತ್ತೂರು ಖಾಸಗಿ ವಸತಿಗೃಹದಲ್ಲಿ ಕ್ವಾರಂಟೈನ್‌ನಲ್ಲಿರುವ ನರಿಮೊಗರು ಗ್ರಾಮದ 29ರ ಯುವಕನಿಗೆ ಕೋವಿಡ್ 19 ದೃಢಪಟ್ಟಿದೆ. ಯುವಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸ್‌ ಅಧಿಕಾರಿ ಸ್ವಯಂ ಐಸೋಲೇಶನ್‌ಗೆ ಒಳಗಾಗಿದ್ದಾರೆ.

ಪುತ್ತೂರು ನಗರಸಭೆ ವ್ಯಾಪ್ತಿಯ ಮೊಟ್ಟೆತ್ತಡ್ಕ ನಿವಾಸಿ 30ರ ಯುವಕ, ಕತಾರ್‌ನಿಂದ ಬಂದು ಬೆಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿರುವ ಸಂಪ್ಯ ಉದಯಗಿರಿಯ 37ರ ಯುವಕ, ನೆಹರುನಗರದ 25ರ ಯುವಕ, ಕೆಮ್ಮಿಂಜೆ ನಿವಾಸಿಯಾಗಿದ್ದು, ಅಮೆರಿಕದಿಂದ ಬಂದು ಪುತ್ತೂರು ಖಾಸಗಿ ಲಾಡ್ಜ್ ನಲ್ಲಿ ಕ್ವಾರಂಟೈನ್‌ನಲ್ಲಿರುವ 64 ವರ್ಷದ ಮಹಿಳೆ ಮತ್ತು ವೆನ್ಲಾಕ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಾಂತಿಗೋಡಿನ 55ರ ವ್ಯಕ್ತಿ ಮತ್ತು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಡಬ ತಾಲೂಕಿನ ಕೊçಲ ಕೊಣೆಮಜಲು ನಿವಾಸಿ 22ರ ಯುವತಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಬೆಳ್ತಂಗಡಿ: ಐದು ಪ್ರಕರಣ
ತಾಲೂಕಿನಲ್ಲಿ ಶನಿವಾರ ಐದು ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಅಳದಂಗಡಿಯ 40 ವರ್ಷದ ವ್ಯಕ್ತಿ, ಕಣಿಯೂರಿನ 57 ವರ್ಷದ ಮೃತಪಟ್ಟ ವ್ಯಕ್ತಿಗೂ ಸೋಂಕು ದೃಢವಾಗಿದೆ. ಗೇರುಕಟ್ಟೆಯ 25ರ ಯುವತಿ, ಮಡಂತ್ಯಾರು ಮಾಲಾಡಿಯ 23 ಮತ್ತು ಲಾೖಲದ 23ರ ಯುವತಿಯರಿಗೂ ಸೋಂಕು ದೃಢಪಟ್ಟಿದೆ.

ಸುಳ್ಯ ಪೊಲೀಸ್‌ ಠಾಣೆ ಸೀಲ್‌ಡೌನ್‌
ಪೊಲೀಸರು ವಶಕ್ಕೆ ಪಡೆದ ಆರೋಪಿಯೊಬ್ಬನಿಗೆ ಕೋವಿಡ್ 19 ಪಾಸಿಟಿವ್‌ ಬಂದಿದ್ದು, ಸುಳ್ಯ ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ, 2 ದಿನ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಕೆಲವು ದಿನಗಳ ಹಿಂದೆ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಕರಿಕೆಯ ಅಬ್ದುಲ್‌ ಫಾರೂಕ್‌ನನ್ನು ಬಜರಂಗ ದಳದ ಯುವಕರು ಬೆನ್ನಟ್ಟಿದ್ದು, ಸುಳ್ಯದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಸಂದರ್ಭ ಕೋವಿಡ್ 19 ಪರೀಕ್ಷೆಗೆ ಸೂಚಿಸಿದ್ದು, ಸೋಂಕು ದೃಢಪಟ್ಟಿದೆ.

ಉಳ್ಳಾಲ: 15 ಮಂದಿಗೆ ಪಾಸಿಟಿವ್‌
ಅಸೈಗೋಳಿಯ ಕೆಎಸ್‌ಆರ್‌ಪಿ ವಸತಿಗೃಹದಲ್ಲಿರುವ ಮಹಿಳೆ ಮತ್ತು ಇಬ್ಬರು ಮಕ್ಕಳ ಸಹಿತ ಉಳ್ಳಾಲ ವ್ಯಾಪ್ತಿಯಲ್ಲಿ 15 ಜನರಿಗೆ ಸೋಂಕು ದೃಢವಾಗಿದೆ.

ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ, ಕೆರೆಬೈಲು ಗುಡ್ಡೆ, ಅಕ್ಕರೆಕೆರೆ, ಭಟ್ನಗರ, ತೊಕ್ಕೊಟ್ಟು ಗಣೇಶ್‌ ನಗರ, ಕಲ್ಲಾಪು ಸೇವಂತಿಗುಡ್ಡೆ, ಉಳ್ಳಾಲ ಬಸ್ತಿಪಡು³ವಿನಲ್ಲಿ ಒಟ್ಟು 7 ಮಂದಿಗೆ ಸೋಂಕು ದೃಢವಾಗಿದ್ದು, ಕುತ್ತಾರು ವಸತಿ ಸಮುಚ್ಚಯದಲ್ಲಿ, ಬೆಳ್ಮ ಕಾನೆಕೆರೆ, ಇಲ್ಲಿನ ಖಾಸಗಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿ, ತಲಪಾಡಿ ಕೆ.ಸಿ.ರೋಡ್‌ನ‌ ನಿವಾಸಿಯೊಬ್ಬರಿಗೆ ಸೋಂಕು ದೃಢವಾಗಿದೆ. ಓರ್ವ ಬಾಲಕ, ಏಳು ಮಂದಿ ಮಹಿಳೆಯರು ಮತ್ತು ಏಳು ಮಂದಿ ಪುರುಷರಲ್ಲಿ ಸೋಂಕು ದೃಢವಾಗಿದೆ.

ಸುರತ್ಕಲ್‌: 12 ಮಂದಿಗೆ ಸೋಂಕು
ಸುರತ್ಕಲ್‌ ಸುತ್ತಮುತ್ತ 12 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಸುರತ್ಕಲ್‌ನಲ್ಲಿ ನಾಲ್ಕು ಮಂದಿಗೆ ಸೋಂಕು ದೃಢಪಟ್ಟರೆ, ಪಣಂಬೂರು ಮೂರು, ಹೊಸ ಬೆಟ್ಟುವಿನ ಎಸ್‌ಇಝಡ್‌ ನೌಕರನೋರ್ವರಿಗೆ, ಕೂಳೂರು, ಕೋಡಿಕಲ್‌, ಕೃಷ್ಣಾಪುರದಲ್ಲಿ ತಲಾ ಓರ್ವರಿಗೆ ಪಾಸಿಟಿವ್‌ ಪತ್ತೆಯಾಗಿದೆ.

ಟಾಪ್ ನ್ಯೂಸ್

IPL Mega Auction: 24th and 25th IPL auction in Jeddah

IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್‌ ಹರಾಜು

Did Adani try to meet Rahul during UPA?

Gautam Adani: ಯುಪಿಎ ಅವಧಿಯಲ್ಲಿ ರಾಹುಲ್‌ ಭೇಟಿಗೆ ಯತ್ನಿಸಿದ್ದರೇ ಅದಾನಿ?

NCP supremo Sharad hinted retirement from electoral politics

Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್‌

Salman Khan’s ex Somy Ali spoke about Sushant Singh Rajput’s demise

Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!

Not supporting Raj Thackeray’s son Amit Thackeray: BJP U Turn!

Maha Polls; ರಾಜ್‌ ಠಾಕ್ರೆ ಪುತ್ರ ಅಮಿತ್‌ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

MP: Flies helped the police to arrest the murder accused!

MP: ಕೊಲೆ ಆರೋಪಿ ಬಂಧನಕ್ಕೆ ಪೊಲೀಸರಿಗೆ ನೆರವಾದ ನೊಣಗಳು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ

Mangaluru: ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆಗೆ ಪ್ರಸ್ತಾವ

Mangaluru: ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆಗೆ ಪ್ರಸ್ತಾವ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

IPL Mega Auction: 24th and 25th IPL auction in Jeddah

IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್‌ ಹರಾಜು

Did Adani try to meet Rahul during UPA?

Gautam Adani: ಯುಪಿಎ ಅವಧಿಯಲ್ಲಿ ರಾಹುಲ್‌ ಭೇಟಿಗೆ ಯತ್ನಿಸಿದ್ದರೇ ಅದಾನಿ?

NCP supremo Sharad hinted retirement from electoral politics

Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್‌

Salman Khan’s ex Somy Ali spoke about Sushant Singh Rajput’s demise

Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!

Not supporting Raj Thackeray’s son Amit Thackeray: BJP U Turn!

Maha Polls; ರಾಜ್‌ ಠಾಕ್ರೆ ಪುತ್ರ ಅಮಿತ್‌ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.