ವರ್ಷದೊಳಗೆ ಮಂಗಳೂರಿಗೆ ಪ್ರತಿದಿನ 24 ಗಂಟೆ ನೀರು: ವೇದವ್ಯಾಸ ಕಾಮತ್
Team Udayavani, May 9, 2018, 11:31 AM IST
ಮಹಾನಗರ: ಶಾಸಕನಾಗಿ ಆಯ್ಕೆಯಾದ ಒಂದು ವರ್ಷದೊಳಗೆ ನಗರಕ್ಕೆ ಕುಡಿಯುವ ನೀರಿನ ಪೂರೈಕೆಗೆ ಹೊಸ ನೀತಿಯನ್ನು ರೂಪಿಸಿ ದಿನದ 24 ಗಂಟೆಯೂ ನೀರು ಲಭಿಸುವಂತೆ ಮಾಡಲು ಮೊದಲ ಆದ್ಯತೆ ನೀಡುವುದಾಗಿ ಮಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಹೇಳಿದ್ದಾರೆ.
ನಗರದ ಟ್ಯಾಂಕ್ ಕಾಲೋನಿ, ನವಾಯತ್ ವಾರ್ಡ್, ಕಂದುಕ ಪ್ರದೇಶಗಳಲ್ಲಿ ಇಂದು ಮತಯಾಚನೆ ನಡೆಸಿದ ಅವರು ಎಡಿಬಿ ಸಾಲ ಯೋಜನೆಯಲ್ಲಿ ಅಗಿರುವ ನ್ಯೂನತೆಗಳನ್ನು ಸರಿಪಡಿಸಿ ಕುಡಿಯುವ ನೀರಿನ ಪೂರೈಕೆ ನಿರಂತರವಾಗಿರಲು ಗಮನ ನೀಡಲಾಗುವುದು ಎಂದರು. ನಗರದಲ್ಲಿ ಈಗ ಶೇ. 60ರಷ್ಟು ನೀರಿನ ಸೋರಿಕೆಯಾಗುತ್ತಿದೆ. ಅದನ್ನು ಶೇ.5ಕ್ಕೆ ಇಳಿಸಿದಾಗ ನಗರದ ಎಲ್ಲ ಜನತೆಗೆ ದಿನದ 24 ಗಂಟೆ ಕಾಲವೂ ನಿರಂತರ ನೀರು ಒದಗಿಸಲು ಸಾಧ್ಯವಾಗುವುದು. ಇದರಿಂದ ಪಾಲಿಕೆಯ ಅದಾಯವೂ ಹೆಚ್ಚಲಿದೆ ಎಂದು ತಿಳಿಸಿದರು.
ನಗರದಲ್ಲಿ ದಿನದಿಂದ ದಿನಕ್ಕೆ ಸಾರಿಗೆ, ಸಂಚಾರ ಸಮಸ್ಯೆ ಅಧಿಕವಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ. ಮುಖ್ಯ ರಸ್ತೆಗಳನ್ನು ವ್ಯವಸ್ಥಿತ ಡ್ರೈನೇಜ್‌ನೊಂದಿಗೆ ಕಾಂಕ್ರೀಟ್ ರಸ್ತೆ ಮಾಡಲಾಗುವುದು. ಪಾದಚಾರಿ ರಸ್ತೆಗಳು, ಸೈಕಲ್‌ಟ್ರಾಫಿಕ್ ಗಳನ್ನು ನಿರ್ಮಿಸಲಾಗುವುದು. ಉಪರಸ್ತೆಗಳನ್ನು ಕೂಡಾ ವಿಸ್ತ ರ ಣೆಗೊಳಿಸಿ ಅಭಿವೃದ್ಧಿ ಪಡಿಸಲಾಗುವುದು. ಅಗತ್ಯಕ್ಕೆ ತಕ್ಕಂತೆ ಬಸ್ ಬೇಗಳನ್ನು ನಿರ್ಮಿಸಲಾಗುವುದು. ಪ್ರಥಮ ಹಂತದಲ್ಲಿ ಪ್ರಮುಖ ಜಂಕ್ಷನ್‌ಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದು ವಿವರಿಸಿದರು.
ನಗರದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಎಲ್ಲೆಡೆ ಡ್ರೈನೇಜ್ ಸಮಸ್ಯೆ ಕಂಡು ಬರುತ್ತಿದೆ. ಇದರ ಜತೆಯಲ್ಲಿ ಮಳೆ ನೀರು ಹರಿಯುವ ತೋಡುಗಳನ್ನು ಕೂಡಾ ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ದಿಪಡಿಸುವ ಅಗತ್ಯವಿದೆ. ಒಳಚರಂಡಿ ಇಲ್ಲದ ಕಡೆಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸುವ ಜರೂರಿ ಇದೆ. ವರ್ಷದೊಳಗೆ ಈ ಕಾರ್ಯಗಳನ್ನು ನಿರ್ವಹಿಸಲು ಎಲ್ಲ ಕ್ರಮ ಜರಗಿಸಲಾಗುವುದು ಎಂದು ಹೇಳಿದರು.
ಮಂಗಳೂರು ನಗರವನ್ನು ಸ್ವಚ್ಛ ನಗರ ಮಾದರಿ ನಗರವನ್ನಾಗಿ ರೂಪಿಸುವುದು ಬಹು ಅಗತ್ಯ. ಮಂಗಳೂರು ನಗರವನ್ನು ಹಸಿರು ನಗರಿಯನ್ನಾಗಿಸುವ ಮೂಲಕ ಈ ಕಡಲತಡಿಯನ್ನು ಮತ್ತಷ್ಟು ಸುಂದರೀಕರಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ನುಡಿದರು.
ನಗರದಲ್ಲಿರುವ ಹಲವಾರು ಕರೆಗಳು ಪಾಳು ಬಿದ್ದಿವೆ. ಈ ಕರೆಗಳನ್ನು ಅಭಿವೃದ್ಧಿªಪಡಿಸಿದರೆ ನಗರಕ್ಕೆ ಪರ್ಯಾಯ ನೀರಿನ ಸೆಲೆ ದೊರೆತಂತಾಗುತ್ತದೆ. ನಗರದ ಪರಿಸರ ಹಾಗೂ ಸೌಂದರೀಕರಣಕ್ಕೂ ಈ ಕರೆಗಳ ಅಭಿವೃದ್ದಿ ಪೂರಕವಾಗಲಿವೆ ಎಂದು ಹೇಳಿದರು. ನೇತ್ರಾವತಿ ನದಿಗೆ ಬಂಟ್ವಾಳದಿಂದ ಹಿಡಿದು ಉಳ್ಳಾಲದವರೆಗೆ ಹಾಗೂ ಘಲ್ಗುಣಿ ನದಿಗೆ ಗುರುಪುರದಿಂದ ಹಿಡಿದು ಬಂದರುತನಕ ಕೊಳಚೆ ನೀರು ಸೇರುತ್ತಿದೆ.
ಇದು ಪರಿಸರದ ಮೇಲೆ ತೀವ್ರವಾದ ಪರಿಣಾಮ ಬೀರುವುದಲ್ಲದೆ ನಗರದ ಸ್ವಾಸ್ಥ್ಯವನ್ನು ಹಾಳುಗೆಡುತ್ತಿದೆ. ಇದನ್ನು ತಡೆಯುವುದು ಅತ್ಯಗತ್ಯವಾಗಿದೆ. ದೀರ್ಘಕಾಲಿನ ಯೋಜನೆಯೊಂದನ್ನು ಕೇಂದ್ರ ಸರಕಾರದ ನೆರವಿನಿಂದ ಜಾರಿಗೊಳಿಸಲು ಯೋಜನೆ ರೂಪಿಸುವುದಾಗಿ ಅವರು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.