ಚಾರ್ಮಾಡಿ ಘಾಟಿಗೆ 250 ಕೋಟಿ ರೂ. ಪ್ರಸ್ತಾವನೆ
Team Udayavani, Jul 16, 2018, 9:40 AM IST
ಪುತ್ತೂರು: ಶಿರಾಡಿ ಘಾಟಿ ರಸ್ತೆ ಯಲ್ಲಿ ಗುಂಡ್ಯದಿಂದ ಕೆಂಪುಹೊಳೆ ತನಕ ದ್ವಿತೀಯ ಹಂತದಲ್ಲಿ ಕಾಂಕ್ರೀಟ್ ಹಾಸಲಾದ ರಸ್ತೆಯ ಉದ್ಘಾಟನೆ ರವಿವಾರ ನಡೆಯಿತು. ಕೆಂಪುಹೊಳೆಯಲ್ಲಿ ಘಾಟಿ ರಸ್ತೆಗೆ ವಿಧ್ಯುಕ್ತವಾಗಿ ಪೂಜೆ ಸಲ್ಲಿಸಿದ ಬಳಿಕ 12.38 ಕಿ. ಮೀ. ಉದ್ದ ಕಾಂಕ್ರೀಟ್ ರಸ್ತೆಯನ್ನು ಸಂಸದ ನಳಿನ್ ಕುಮಾರ್ ಕಟೀಲು ಕೆಂಪುಹೊಳೆಯಲ್ಲಿ ಉದ್ಘಾಟಿಸಿದರು.
ಸಾಂಕೇತಿಕವಾಗಿ ಉದ್ಘಾಟನೆ ಬಳಿಕ ಗುಂಡ್ಯದಲ್ಲಿ ಸಮಾರಂಭ ನಡೆಯಿತು. ಕರಾವಳಿಯನ್ನು ಬೆಂಗಳೂರಿನೊಂದಿಗೆ ಸಂಪರ್ಕಿಸುವ ಶಿರಾಡಿ, ಸಂಪಾಜೆ, ಚಾರ್ಮಾಡಿ, ಆಗುಂಬೆ ಘಾಟಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡ ಲಾಗುವುದು. ಮುಂದಿನ ಹಂತದಲ್ಲಿ ಚಾರ್ಮಾಡಿ ಘಾಟಿ ರಸ್ತೆ ಶಾಶ್ವತ ಅಭಿವೃದ್ಧಿಗೆ ಯೋಜನೆ ಹಮ್ಮಿಕೊಂಡಿದ್ದು, 250 ಕೋಟಿ ರೂ.ಗೆ ಪ್ರಸ್ತಾ ವನೆ ಕಳುಹಿಸಲಾಗಿದೆ ಎಂದು ಈ ಸಂದರ್ಭ ಲೋಕೋಪ ಯೋಗಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು. ಇದೇ ರೀತಿ ಆಗುಂಬೆ ರಸ್ತೆಯ ಅಭಿ ವೃದ್ಧಿ ಯೋಜನೆ ಇದೆ. ಮತ್ತೂಮ್ಮೆ ಡಿಪಿಆರ್ ಸಿದ್ಧ ಪಡಿಸಿ ನೀಡುವಂತೆ ಸೂಚಿಸಲಾಗಿದೆ ಎಂದರು. ಜತೆಗೆ ಗುಂಡ್ಯ-ಬಿ.ಸಿ.ರೋಡ್, ಹಾಸನ-ಮಾರ್ನಳ್ಳಿ ಚತುಷ್ಪಥ ಕಾಮಗಾರಿಗೆ ಇನ್ನಷ್ಟು ವೇಗ ನೀಡುವ ವಿಶ್ವಾಸ ಅವರು ವ್ಯಕ್ತಪಡಿಸಿದರು.
ವಿಶೇಷ ಪ್ಯಾಕೇಜ್
ತನಗೆ ಕರಾವಳಿ ಬೇರೆಯಲ್ಲ, ಹಾಸನ ಬೇರೆಯಲ್ಲ. ಹಾಸನ ಹಾಗೂ ಕರಾವಳಿ ಭಾಗದ ಎಲ್ಲ ಶಾಸಕರ ಸಭೆ ನಡೆಸಿದ್ದೇನೆ. ಅಗತ್ಯ ಕಾಮಗಾರಿ ನಡೆಯಬೇಕಾದ ರಸ್ತೆಗಳ ಪಟ್ಟಿ ನೀಡುವಂತೆ ಸೂಚಿಸಲಾಗಿದೆ. ಕರಾವಳಿ ಭಾಗದ ಜವಾಬ್ದಾರಿಯನ್ನು ಸಚಿವ ಖಾದರ್ ಅವರಿಗೆ ನೀಡಲಾಗಿದೆ. ಈ ಪಟ್ಟಿ ಸಿದ್ಧವಾದ ಬಳಿಕ ಮುಖ್ಯಮಂತ್ರಿಗಳ ಜತೆ ಮಾತನಾಡಿ, ಕರಾವಳಿ ಸೇರಿದಂತೆ 32 ತಾಲೂಕುಗಳಿಗೆ ವಿಶೇಷ ಪ್ಯಾಕೇಜ್ ನೀಡಲಾಗು ವುದು ಎಂದು ಭರವಸೆ ನೀಡಿದರು.
15 ದಿನದ ಗಡುವು
ಘಾಟಿ ಪ್ರದೇಶದಲ್ಲಿ ರಸ್ತೆಗೆ ಅಪಾಯಕಾರಿ ಮರ, ವಿದ್ಯುತ್ ಕಂಬ, ತಂತಿಗಳನ್ನು ತೆರವು ಮಾಡಲು 15 ದಿನಗಳ ಕಾಲಾವಕಾಶ ನೀಡ ಲಾಗಿದೆ. ಗುತ್ತಿಗೆದಾರರು ನೀಡಿದ ಪಟ್ಟಿಯನ್ನು ಆಧರಿಸಿ, ತತ್‌ಕ್ಷಣ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ತೆರವು ಮಾಡದೆ, ಮತ್ತೆ ಅಪಾಯವಾದರೆ ಸಂಬಂಧಪಟ್ಟ ಅಧಿಕಾರಿಯನ್ನೇ ಹೊಣೆಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಿಂಗಳಿಗೊಮ್ಮೆ ಪ್ರಗತಿ ಸಭೆ
ರಾಜ್ಯದ ವಿವಿಧ ರಸ್ತೆಗಳ ಅಭಿವೃದ್ಧಿಗೆ 27 ಸಾವಿರ ಕೋಟಿ ರೂ. ನೀಡಲಾಗಿದೆ. ಈ ರಸ್ತೆಗಳ ಕಾಮಗಾರಿಯ ವೇಗ ಹಾಗೂ ಗುಣಮಟ್ಟದ ಬಗ್ಗೆ ನಿಗಾ ವಹಿಸಲಾಗುವುದು. ಈ ಬಗ್ಗೆ ಪಾಕ್ಷಿಕವಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿ, ವರದಿ ತರಿಸಿಕೊಳ್ಳಲಿದ್ದಾರೆ ಎಂದರು.
ಸಾಲ ಮನ್ನಾ
ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದೆ. ಉಳಿಕೆ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಲು ಬಿಟ್ಟಿದ್ದೇವೆ. ಈ ನಿಟ್ಟಿನಲ್ಲಿ ನಳಿನ್ ಕುಮಾರ್ ಕಟೀಲು ಪ್ರಯತ್ನಿಸಬೇಕು ಎಂದರು.
ಸಮ್ಮಾನಿಸಲು ನಕಾರ
ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಓಶಿಯನ್ ಸಂಸ್ಥೆಯ ಗುತ್ತಿಗೆದಾರರನ್ನು ಸಮ್ಮಾನಿಸುವಂತೆ ಸಚಿವ ಎಚ್.ಡಿ. ರೇವಣ್ಣ ಅವರಲ್ಲಿ ವಿನಂತಿಸಿಕೊಂಡಾಗ, ಗುತ್ತಿಗೆದಾರರ ಕೆಲಸವನ್ನು ಅವರು ನಿರ್ವಹಿಸಿರೆ. ಇದಕ್ಕಾಗಿ ಸಮ್ಮಾನ ಮಾಡುವುದು ಸರಿಯಲ್ಲ. ತಾನು ಸಮ್ಮಾನ ಮಾಡುವುದು ಇಲ್ಲ ಎಂದರು. ಬಳಿಕ ಯು.ಟಿ. ಖಾದರ್ ಅವರು ಸಂಸ್ಥೆಯ ಸಫುದ್ದೀನ್ ಆಲಿ ಅವರನ್ನು ಸಮ್ಮಾನಿಸಿದರು.ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಶಾಸಕರಾದ ಸಂಜೀವ ಮಠಂದೂರು, ರಾಜೇಶ್ ನಾೖಕ್ ಉಳಿಪಾಡಿಗುತ್ತು, ಹರೀಶ್ ಪೂಂಜಾ, ಕುಮಾರಸ್ವಾಮಿ, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಭವಾನಿ ರೇವಣ್ಣ, ಮಾಜಿ ಸಚಿವ ರಮಾನಾಥ ರೈ, ಡಿಸಿ ಶಶಿಕಾಂತ್ ಸೆಂಥಿಲ್, ಎಸ್ಪಿ ರವಿಕಾಂತೇ ಗೌಡ ಉಪಸ್ಥಿತರಿದ್ದರು.
ಜಿಎಸ್‌ಟಿ ಶೇ. 10 ಕಡಿತ
ರಸ್ತೆ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಜಿಎಸ್‌ಟಿಯಲ್ಲಿ ಶೇ. 10ರಷ್ಟು ಕಡಿತ ಮಾಡ ಲಾಗಿದೆ ಎಂದು ರೇವಣ್ಣ ಹೇಳಿದರು. ಇದುವರೆಗೆ ಶೇ. 12.5ರಷ್ಟು ಜಿಎಸ್‌ಟಿ ಇತ್ತು. ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಕೇಂದ್ರ ಸರಕಾರ ಜಿಎಸ್‌ಟಿಯಿಂದ ರಿಯಾಯಿತಿ ನೀಡಿದೆ. ಮುಂದೆ ಶೇ. 2.5ರಷ್ಟು ಸರ್ವಿಸ್ ಟ್ಯಾಕ್ಸ್ ಪಾವತಿಸಿದರೆ ಸಾಕು. ಈ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂದರು.
ಮಂಗಳೂರು-ತಿರುಪತಿ ರೈಲು
ಹಾಸನದಿಂದ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ರೈಲು ಸಂಚಾರ ಈ ತಿಂಗಳಲ್ಲೇ ಆರಂಭ ಆಗಲಿದೆ. ಅಗತ್ಯವಾದರೆ ಇದನ್ನು ಮಂಗಳೂರಿನಿಂದ ಆರಂಭಿಸಿ ಹಾಸನ- ಬೆಂಗಳೂರು ಮಾರ್ಗವಾಗಿ ಚಲಿಸುವಂತೆ ಮಾಡಬಹುದು. ಆಗ ಕರಾವಳಿ ಜನರಿಗೂ ಅನುಕೂಲ ಆಗಲಿದೆ ಎಂದು ವೇದಿಕೆಯಲ್ಲಿದ್ದ ಜನಪ್ರತಿನಿಧಿಗಳಿಗೆ ಸಚಿವ ಎಚ್.ಡಿ. ರೇವಣ್ಣ ಸಲಹೆ ನೀಡಿದರು.
ಉದ್ಘಾಟನೆ ವಿಳಂಬ, ವಾಹನ ಸಾಲು!
ನೆಲ್ಯಾಡಿ: ಅಭಿವೃದ್ಧಿ ಕಾಮಗಾರಿಗಾಗಿ ಆರು ತಿಂಗಳುಗಳಿಂದ ಸಂಚಾರ ಸ್ಥಗಿತಗೊಂಡ ಶಿರಾಡಿ ಘಾಟಿ ರಸ್ತೆ ರವಿವಾರ ಉದ್ಘಾಟನೆ ಗೊಂಡಿದ್ದೇ ತಡ, ಹೆದ್ದಾರಿಯಲ್ಲಿ ಸಾಗಲು ಕಾದು ನಿಂತ ವಾಹನಗಳ ಸಾಲು ದೊಡ್ಡದೇ ಇತ್ತು. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಬಂದಿದ್ದ ಯಾತ್ರಾರ್ಥಿಗಳು, ಪ್ರವಾಸಿಗರು ಸಾಲಿನಲ್ಲಿದ್ದರು. ಉದ್ಘಾಟನ ಕಾರ್ಯಕ್ರಮ ಪೂರ್ವಾಹ್ನ 11 ಗಂಟೆಗೆ ನಿಗದಿಯಾಗಿತ್ತು. ಹಾಸನ ಕಡೆಯಿಂದ ಜನ ಪ್ರತಿನಿಧಿಗಳು ತಡವಾಗಿ ಬಂದು ಅಪರಾಹ್ನ 12.45ಕ್ಕೆ ಕೆಂಪು ಹೊಳೆ ಸೇತುವೆ ಬಳಿ ರಸ್ತೆ ಉದ್ಘಾಟನೆ ನೆರವೇರಿಸಲಾಯಿತು. ಗುಂಡ್ಯದಲ್ಲಿ ಸಭಾಕಾರ್ಯಕ್ರಮ ಅಪರಾಹ್ನ 1 ಗಂಟೆಗೆ ಆರಂಭವಾಗಿ 2.45ರ ವರೆಗೆ ನಡೆ ಯಿತು. ಮೂರು ಗಂಟೆಗೆ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. 3.45ರ ಹೊತ್ತಿಗೆ ಸಂಚಾರ ವ್ಯವಸ್ಥೆ ಸುಸ್ಥಿತಿಗೆ ಬಂದಿತು. ಒಟ್ಟು 26 ಕಿ.ಮೀ. ಉದ್ದದ ಶಿರಾಡಿ ರಸ್ತೆಯ ಕಾಂಕ್ರೀಟ್ ಕಾಮಗಾರಿ ಮುಗಿದಿದೆ. ಎರಡನೇ ಹಂತದಲ್ಲಿ ಕೆಂಪುಹೊಳೆಯಿಂದ ಗುಂಡ್ಯ ತನಕ 12.38 ಕಿ.ಮೀ. ಕಾಮಗಾರಿ ನಿರ್ವಹಿಸಲಾಗಿದೆ. ತಡೆ ಗೋಡೆ ಹಾಗೂ ಕಾಂಕ್ರೀಟ್ ರಸ್ತೆ ಅಂಚಿಗೆ ಮಣ್ಣು ಹಾಕುವ ಕೆಲಸ ಬಾಕಿ ಉಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.