ತೋಟಗಾರಿಕೆ ಬೆಳೆಗೆ ಸಿದ್ಧಗೊಂಡಿವೆ 3.08 ಲಕ್ಷ ಸಸಿಗಳು
Team Udayavani, May 7, 2021, 4:20 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಸಲು ಬಯಸುವ ಕೃಷಿ ಆಸಕ್ತರ ಬಯಕೆಯನ್ನು ಈಡೇರಿಸಲು ಎಂಟು ತೋಟಗಾರಿಕೆ ಕ್ಷೇತ್ರದ ನರ್ಸರಿಗಳಲ್ಲಿ 3,08,400 ವಿವಿಧ ಬೆಳೆಗಳ ವಿವಿಧ ತಳಿಗಳ ಸಸಿಗಳು ಸಿದ್ಧವಾಗಿವೆ.
ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ 39,050 ಅಡಿಕೆ ಸಸಿಗಳು, 1,51,300 ಕಾಳುಮೆಣಸು, 92,900 ಗೇರು, 8,800 ಕೊಕ್ಕೋ, 1,000 ಮಲ್ಲಿಗೆ, 2,700 ಮಾವು, 1,950 ತೆಂಗು, 2,000 ನುಗ್ಗೆ , 1,900 ಪಪ್ಪಾಯ, 6,800 ಕಸಿ ಕಾಳುಮೆಣಸು, ಸಸಿಗಳು ಬೆಳಸಲಾಗಿದೆ. ಅಡಿಕೆಯಲ್ಲಿ ಮಂಗಳಾ, ಸ್ಥಳೀಯ, ಇಂಟರ್ ಮಂಗಳಾ, ಮೋಹಿತ್ ನಗರ, ಮಾವಿನಲ್ಲಿ ಮಲ್ಲಿಕಾ, ಬಾದಾಮಿ , ಗೇರುವಿನಲ್ಲಿ ಉಳ್ಳಾಲ-1,3, ವಿ-4, ಭಾಸ್ಕರ, ಕಾಳು ಮೆಣಸಿನಲ್ಲಿ ಕಸಿ, ಪಣಿಯೂರು, ಕೊಕ್ಕೋದಲ್ಲಿ ಎಫ್ ಹೈಬ್ರಿಡ್, ಮಲ್ಲಿಗೆಯಲ್ಲಿ ಉಡುಪಿ ಮಲ್ಲಿಗೆ, ಪಪ್ಪಾಯದಲ್ಲಿ ತೈವನ್ ರೆಡ್‌ಲೇಡಿ ಸಹಿತ ವಿವಿಧ ಜಾತಿಗಳ ಗಿಡಗಳಲ್ಲಿ ವಿವಿಧ ತಳಿಗಳನ್ನು ರೈತರಿಗೆ ತೋಟಗಾರಿಕೆ ಇಲಾಖೆ ದರದಂತೆ ನೀಡಲಾಗುತ್ತಿದೆ.
ಗಿಡಗಳು ಲಭ್ಯವಿರುವ ಸ್ಥಳಗಳು :
ಮಂಗಳೂರಿನ ಪಡೀಲ್ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ, 5,000., ಕೊಕ್ಕೋ 3,000, ಉಡುಪಿ ಮಲ್ಲಿಗೆ 1,000, ದ್ವಿಕಾಂಡ ಕಾಳುಮೆಣಸು 6, 000 ಸಸಿಗಳು ಲಭ್ಯವಿವೆ. ಪುತ್ತೂರಿನ ಕಬಕ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು 6,000, ಕಾಳು ಮೆಣಸು 10,200, ಅಡಿಕೆ 5,200, ನುಗ್ಗೆ, 1,000, ಸುಳ್ಯದ ಹೊಸಗದ್ದೆ ತೋಟಗಾರಿಕೆ ಕ್ಷೇತ್ರದಲ್ಲಿ ಕಾಳು ಮೆಣಸು 52,000, ಮಾವು 450, ಕಸಿ ಕಾಳುಮೆಣಸು 2, 000, ತೆಂಗು 980, ಗೇರು 15,800, ಬೆಳ್ತಂಗಡಿಯ ಮದ್ದಡ್ಕ ತೋಟಗಾರಿಕೆ ಕ್ಷೇತ್ರದಲ್ಲಿ ಅಡಿಕೆ 9,850, ಗೇರು 59,000,ಕಾಳುಮೆಣಸು ಪಣಿಯೂರು 40,700, ಕಸಿ ಕಾಳುಮೆಣಸು 4,600, ಕೊಕ್ಕೋ 1,800, ತೆಂಗು 970, ಮಾವು 1,500, ಪಪ್ಪಾಯ 1,900 ,ಬೆಳ್ತಂಗಡಿ ಕಚೇರಿ ನರ್ಸರಿಯಲ್ಲಿ ಕಾಳು ಮೆಣಸು 10,000, ಅಡಿಕೆ 5,000, ಚಾರ್ಮಾಡಿ ತೋಟಗಾರಿಕೆ ಕ್ಷೇತ್ರದಲ್ಲಿ ಕಾಳು ಮೆಣಸು 5,000, ವಿಟ್ಲ ತೋಟಗಾರಿಕೆ ಕ್ಷೇತ್ರದಲ್ಲಿ ಮಾವು 750, ಕಾಳುಮೆಣಸು 15,000, ಅಡಿಕೆ 5,000, ನುಗ್ಗೆ 1,000 ಹಾಗೂ ತುಂಬೆ ತೋಟಗಾರಿಕೆ ಕ್ಷೇತ್ರದಲ್ಲಿ ಗೇರು 9,100, ಕೋಕ್ಕೊ 2,000, ಕಾಳು ಮೆಣಸು 12,600, ಅಡಿಕೆ 10,000 ಸಹಿತ ಒಟ್ಟು 3,06,400 ವಿವಿಧ ಜಾತಿಯ ತಳಿಗಳು ಸಿದ್ಧವಾಗಿವೆ.
ದಕ್ಷಿಣ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯ ನರ್ಸರಿಗಳಲ್ಲಿ ರೈತರ ಬೇಡಿಕೆಗಳನ್ನು ಪೂರೈಸಲು ಈಗಾಗಲೇ ಅಡಿಕೆ, ತೆಂಗು, ಕಾಳುಮೆಣಸು ಸಹಿತ ವಿವಿಧ ಬೆಳೆಗಳ ವಿವಿಧ ತಳಿಗಳನ್ನು ಬೆಳೆಸಲಾಗಿದೆ. ರೈತರು ತಮ್ಮ ಆವಶ್ಯಕತೆಗಳಿಗೆ ಅನುಗುಣವಾಗಿ ಇಲಾಖೆ ನಿಗದಿಪಡಿಸಿದ ರಿಯಾಯತಿ ದರದಲ್ಲಿ ಇವುಗಳನ್ನು ಪಡೆದುಕೊಳ್ಳಬಹುದಾಗಿದೆ. -ಜಾನಕಿ, ತೋಟಗಾರಿಕೆ ಇಲಾಖಾ ಹಿರಿಯ ಸಹಾಯಕ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.