ಪದವಿ ತರಗತಿ ಆರಂಭಕ್ಕೆ ಇನ್ನೂ 3 ತಿಂಗಳು!
ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡರೂ ಕಾಯುವಿಕೆ ಅನಿವಾರ್ಯ
Team Udayavani, Jun 12, 2022, 7:25 AM IST
ಮಂಗಳೂರು: ಮಾಸಾಂತ್ಯಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡರೂ ಪದವಿ ತರಗತಿಗೆ ಸೇರಬೇಕಾದರೆ ವಿದ್ಯಾರ್ಥಿಗಳು ಕನಿಷ್ಠ 3 ತಿಂಗಳು ಕಾಯಬೇಕು. ಯಾಕೆಂದರೆ ಮಂಗಳೂರು ವಿಶ್ವ ವಿದ್ಯಾ ನಿಲಯ ವ್ಯಾಪ್ತಿಯಲ್ಲಿ 2022-23ರ ಶೈಕ್ಷಣಿಕ ವರ್ಷ ಆರಂಭವಾಗುವುದು ಅಕ್ಟೋಬರ್ ಒಂದರಿಂದ!
ವಿ.ವಿ.ಯ 2021-22ನೇ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ 2, 4 ಮತ್ತು 6ನೇ ಸೆಮಿಸ್ಟರ್‌ನ ತರಗತಿ ಗಳು ಆ. 30ಕ್ಕೆ ಕೊನೆಗೊಳ್ಳಲಿವೆ. ಸೆ. 2ರಿಂದ ಪರೀಕ್ಷೆ. ಹೀಗಾಗಿ ಅಷ್ಟು ಸಮಯ ಹೊಸ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ಸಿಗದು. ಒಂದು ವೇಳೆ ದಾಖಲಾತಿಯಾದರೂ 3 ತಿಂಗಳು ಕಲಿಕೆಯಿಂದ ದೂರ ವಿರಬೇಕಾಗುತ್ತದೆ.
ಆನ್‌ಲೈನ್ ಆರಂಭವಾಗಲಿ
ಪ್ರಸಕ್ತ ವರ್ಷ ಸಂಕ್ರ ಮಣದ ಕಾಲ. ಹೀಗಾಗಿ ದ್ವಿತೀಯ ಪಿಯು ಫಲಿತಾಂಶ ಬಂದ ತತ್‌ಕ್ಷಣವೇ ಕಾಲೇಜಿಗೆ ವಿದ್ಯಾರ್ಥಿಗಳ ದಾಖಲಾತಿ ಮಾಡಿ ಆನ್‌ಲೈನ್ ತರಗತಿ ಪ್ರಾರಂಭಿಸಲು ಅವಕಾಶ ಸಿಕ್ಕಿದರೆ ಉತ್ತಮ ಅಥವಾ ಕ್ರೀಡಾ ಚಟುವಟಿಕೆಗೆ ಆದ್ಯತೆ ನೀಡ ಬಹುದು. ಕೊರೊನಾ 4ನೇ ಅಲೆ ಬಾರದಿದ್ದರೆ ಮುಂದಿನ ಶೈಕ್ಷಣಿಕ ವರ್ಷ ಹಿಂದಿನಂತೆ ಹಳಿಗೆ ಬರಲಿದೆ ಎಂದು ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ ಹೆಬ್ಟಾರ್ ಸಿ. ಹೇಳಿದ್ದಾರೆ.
ಯಾಕೆ ಸಮಸ್ಯೆ?
ಸಾಮಾನ್ಯವಾಗಿ ಜೂನ್‌ನಲ್ಲಿ ಪದವಿ ತರಗತಿಗಳು ಆರಂಭ ವಾಗುತ್ತವೆ. ಆದರೆ ಕೊರೊನಾ ಕಾರಣ ಎರಡು ವರ್ಷಗಳಿಂದ ಶೈಕ್ಷಣಿಕ ವೇಳಾಪಟ್ಟಿಯೇ ಅದಲು ಬದಲಾಗಿದೆ. ಜೂನ್‌ನಲ್ಲಿ ಮುಗಿಯ ಬೇಕಿದ್ದ ಪದವಿ ತರಗತಿ ಗಳು ಈಗಲೂ ನಡೆಯುತ್ತಿವೆ. ಹೀಗಾಗಿ ಮುಂದಿನ 3 ತಿಂಗಳು ಕಾಲೇಜಿನಲ್ಲಿ ಹೊಸ ತರಗತಿಗೆ ಕೊಠಡಿ ಅಲಭ್ಯ ಮತ್ತು ಉಪನ್ಯಾಸಕರ ಕೊರತೆಯೂ ಆಗಲಿದೆ. ಇದರಿಂದಾಗಿ ಪದವಿ ಮೊದಲ ವರ್ಷದ ವಿದ್ಯಾರ್ಥಿಗಳು ಪಾಠಕ್ಕಾಗಿ ಕಾಯಲೇಬೇಕಾದ ಅನಿವಾರ್ಯ ಇದೆ. ಈ ಬಾರಿ ಅಕ್ಟೋಬರ್‌ನಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾದರೆ ಮುಂದಿನ ವರ್ಷಕ್ಕೆ ಎಲ್ಲವೂ ಹಿಂದಿನಂತೆಯೇ ಸಹಜ ಸ್ಥಿತಿಗೆ ಬರಲಿವೆ ಎಂಬುದು ಉಪನ್ಯಾಸಕರೊಬ್ಬರ ಅಭಿಪ್ರಾಯ.
ದಾಖಲಾತಿಗೆ ಅನುಮತಿ: ವಿ.ವಿ. ಚಿಂತನೆ
ಕೆಲವು ಸ್ವಾಯತ್ತ ಕಾಲೇಜುಗಳು ಈಗಾಗಲೇ ಪದವಿ ದಾಖಲಾತಿ ಆರಂಭಿಸಿವೆ. ಸರಕಾರಿ, ಪದವಿ ಕಾಲೇಜುಗಳಲ್ಲಿ ದ್ವಿತೀಯ ಪಿಯು ಫಲಿತಾಂಶಕ್ಕೆ ಕಾಯಲಾಗುತ್ತಿದೆ. ಆ ವೇಳೆಗೆ ವಿ.ವಿ.ಯಿಂದ ಅನುಮತಿ ದೊರೆಯದಿದ್ದರೆ ವಿದ್ಯಾರ್ಥಿಗಳು, ಕಾಲೇಜುಗಳಿಗೆ ಸಮಸ್ಯೆ ಯಾಗಲಿದೆ. ಇದನ್ನು ಮನಗಂಡ ವಿ.ವಿ.ಯು ಪಿಯು ಫಲಿತಾಂಶ ಬಂದ ತತ್‌ಕ್ಷಣವೇ ವಿದ್ಯಾರ್ಥಿಗಳ ದಾಖಲಾತಿಗೆ ಅನುಮತಿ ನೀಡುವ ಮಹತ್ವದ ತೀರ್ಮಾನ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ಣ
ಗೊಳ್ಳುವ ಮುನ್ನ ದ್ವಿ. ಪಿಯು ಫಲಿತಾಂಶ ಬಂದರೆ ಕಾಲೇಜುಗಳಲ್ಲಿ ತರಗತಿ ಕೋಣೆ, ಉಪನ್ಯಾಸಕರ ಲಭ್ಯತೆ ಸಹಿತ ಕೆಲವು ಸವಾಲುಗಳು ಎದುರಾಗಲಿವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
– ಪ್ರೊ| ಪಿ.ಎಸ್. ಯಡಪಡಿತ್ತಾಯ, ಮಂಗಳೂರು ವಿ.ವಿ. ಕುಲಪತಿ
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ
Mangaluru ಮರವೂರು: ಆಕಸ್ಮಿಕವಾಗಿ ನದಿಗೆ ಬಿದ್ದು ಮಹಿಳೆ ಮೃತ್ಯು: ಪ್ರಕರಣ ದಾಖಲು
Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ
Mangaluru ಲಿಟ್ ಫೆಸ್ಟ್: ಸಾಹಿತ್ಯದ ಹಬ್ಬದಲ್ಲಿ ಬದುಕಿನ ನಾನಾ ಮುಖಗಳ ಅನಾವರಣ
Mangaluru: ನಾಗುರಿ ಬಳಿ ನೀರು ಪೂರೈಕೆ ಪೈಪ್‌ಲೈನ್ ಅಳವಡಿಕೆ ಪೂರ್ಣ
MUST WATCH
ಹೊಸ ಸೇರ್ಪಡೆ
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
SpaDeX Mission: ಎರಡು ಉಪಗ್ರಹ 3 ಮೀ. ಸನಿಹಕ್ಕೆ ತಂದ ಇಸ್ರೋ!
Cast Census: ಜಾತಿ ಗಣತಿ ವರದಿ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಸಿದ್ದರಾಮಯ್ಯ
Cast Census: ಮಕರ ಸಂಕ್ರಾಂತಿ ಬಳಿಕ ಒಕ್ಕಲಿಗರ ಸಭೆ; ಸಂಘ ಒಮ್ಮತದ ತೀರ್ಮಾನ
ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.