ಸೂರ್ಯ ಘರ್ ಯೋಜನೆಯಿಂದ 30 ಗಿ.ವ್ಯಾ. ಗುರಿ: ಜೋಷಿ
Team Udayavani, Jan 3, 2025, 6:00 AM IST
ಮಂಗಳೂರು: ದೇಶದಲ್ಲಿ ಸೂರ್ಯ ಘರ್ ಯೋಜನೆ ಒಂದರಿಂದಲೇ ದೇಶದಲ್ಲಿ 30 ಗಿ.ವ್ಯಾ. ಶಕ್ತಿ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ವಿ. ಜೋಶಿ ಹೇಳಿದರು.
ಜಿಲ್ಲಾಡಳಿತ, ಜಿ.ಪಂ., ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಾವೂರಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಪ್ರಧಾನಮಂತ್ರಿ ಸೂರ್ಯ ಘರ್ ಮುಫ್¤ ಬಿಜಿÉ ಯೋಜನೆ ಮಾಹಿತಿ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪ್ರಸ್ತುತ 93.5 ಗಿಗಾ ವ್ಯಾಟ್ ಶಕ್ತಿಯ ಉತ್ಪಾದನೆ ಆಗುತ್ತಿದ್ದು, ಈ ಪೈಕಿ 2.5 ಗಿ.ವ್ಯಾ. ಸೌರಶಕ್ತಿ, 45 ಗಿ.ವ್ಯಾ. ಗಾಳಿಯಿಂದ ಶಕ್ತಿ ಉತ್ಪಾದನೆ ಆಗುತ್ತಿದೆ ಎಂದರು.
ಸೂರ್ಯಘರ್ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಯೋ ಜನೆ. ಶಕ್ತಿಯ ಉತ್ಪಾದನೆಯಲ್ಲಿ ದೊಡ್ಡ ಪರಿವರ್ತನೆ ಆರಂಭವಾಗಿದ್ದು, ವಿದ್ಯುತ್ ಕೊರತೆ ಅನುಭವಿಸುತ್ತಿದ್ದ ನಾವು ವಿದ್ಯುತ್ ರಫ್ತು ಮಾಡುವಷ್ಟು ಮುಂದುವರಿದಿದ್ದೇವೆ ಎಂದರು.
2024ರಲ್ಲಿ ಜಗತ್ತಿನಲ್ಲೇ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿದೆ. 2050ರ ವರೆಗೆ ಇದೇ ಪರಿಸ್ಥಿತಿ ಮುಂದುವರಿಯುವ ಬಗ್ಗೆ ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಜಾಗತಿಕ ತಾಪಮಾನದ ಪರಿಣಾಮಗಳ ಕುರಿತು ಚರ್ಚೆ ಶುರುವಾಗಿದೆ. ಆದ್ದರಿಂದ ನವೀಕರಿಸಬಹುದಾದ ಇಂಧನ ಉತ್ಪಾದನೆಯತ್ತ ಹೆಚ್ಚಿನ ಗಮನ ಹರಿಸಬೇಕು. ಸೋಲಾರ್‌ಗೆ ಸಂಬಂಧಿಸಿ ದೇಶದಲ್ಲಿ ಬ್ಯಾಟರಿ ಶಕ್ತಿ ಸಂಗ್ರಹಣೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ಇದು ಈ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಗೆ ಕಾರಣವಾಗಲಿದೆ ಎಂದರು.
ಭವಿಷ್ಯ ನಿರ್ಮಾಣದ ಯೋಜನೆ: ಕ್ಯಾ| ಚೌಟ
ಅಧ್ಯಕ್ಷತೆ ವಹಿಸಿದ್ದ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಮಾತನಾಡಿ,ವಿದ್ಯುತ್ ಬಳಕೆದಾರರನ್ನು ವಿದ್ಯುತ್ ಉತ್ಪಾದಕರನ್ನಾಗಿ ಮಾಡಿ, ಪ್ರತಿ ಮನೆಯೂ ಸೂರ್ಯ ಘರ್ ಆಗಬೇಕು ಎನ್ನುವ ಭವಿಷ್ಯದ ಭಾರತವನ್ನು ನಿರ್ಮಿಸುವ ಯೋಜನೆ.ಅಧಿಕಾರಿಗಳು ಜಿಲ್ಲೆಯಲ್ಲಿ ಗುರಿ ನಿಗದಿಪಡಿಸಿಕೊಡು ಯೋಜನೆಯನ್ನು ಜಾರಿಗೊಳಿಸಬೇಕು ಎಂದರು.
ಸೂರ್ಯ ಘರ್ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರ, ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು. ಫಲಾನುಭವಿಗಳಾದ ವಂದನಾ ನಾಯಕ್, ಶಮಂತ್ ಮತ್ತು ಅರುಣ್ ಜಿ.ಶೇಟ್ ಅಭಿಪ್ರಾಯ ತಿಳಿಸಿದರು.
ಶಾಸಕರಾದ ಡಾ| ವೈ. ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಉಮಾನಾಥ ಎ. ಕೋಟ್ಯಾನ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ರವಿ ಕುಮಾರ್, ಉಪಮೇಯರ್ ಭಾನುಮತಿ, ಮೆಸ್ಕಾಂ ಎಂಡಿ ಜಯಕುಮಾರ್ ಆರ್., ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ ಉಪಸ್ಥಿತರಿದ್ದರು. ಮೆಸ್ಕಾಂ ಅಧಿಧೀಕ್ಷಕ ಎಂಜಿನಿಯರ್ ಕೃಷ್ಣರಾಜ ಕೆ. ಸ್ವಾಗತಿಸಿ, ತಾಂತ್ರಿಕ ವ್ಯವಸ್ಥಾಪಕ ಮಹಾದೇವ ಪ್ರಸನ್ನ ಸ್ವಾಮಿ ವಂದಿಸಿದರು.
ಜನಪ್ರತಿನಿಧಿಗಳೇ ಮಾಹಿತಿ ನೀಡಿ
ದೇಶದಲ್ಲಿ ಒಂದು ಕೋಟಿ ಮನೆಗಳಿಗೆ ಸೋಲಾರ್ ಪ್ಯಾನಲ್ ಅಳವಡಿಸುವ ಗುರಿ ಇದ್ದು, 6 ತಿಂಗಳಲ್ಲಿ 7.5 ಲಕ್ಷ ಮನೆಗಳಲ್ಲಿ ಅಳವಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಯಲ್ಲೂ ಯೋಜನೆ ಯಶಸ್ವಿಯಾಗಿ ಅನುಷ್ಠಾನ
ಗೊಳ್ಳುತ್ತಿದ್ದು, ಜನಪ್ರತಿನಿಧಿಗಳೇ ರಾಯಭಾರಿ ಗಳಾಗಿ ಜನರಿಗೆ ಮಾಹಿತಿ ನೀಡಬೇಕು ಎಂದು ಸಚಿವ ಜೋಶಿ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Abujhmad: ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರ ಹತ್ಯೆ; ಓರ್ವ ಪೊಲೀಸ್ ಹುತಾತ್ಮ
Chikkamagaluru: ತಾಯಿ ಮನೆಗೆ ಬರಲಿಲ್ಲ ಎಂದು ಮಾವನ ಮೇಲೆ ಮಚ್ಚು ಬೀಸಿದ ಅಳಿಯ
UP: ವಿವಾಹದ ಮಧ್ಯೆ ಬಾತ್‌ರೂಮ್ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ
ISRO: ಅಂತರಿಕ್ಷದಲ್ಲಿ ಅಲಸಂದೆ ಬೀಜ ಮೊಳಕೆ: ಇಸ್ರೋ ಪ್ರಯೋಗಕ್ಕೆ ಯಶಸ್ಸು
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.