31 ಸರಕಾರ: ಅವಿಭಜಿತ ದ.ಕ. ಜಿಲ್ಲೆಯಿಂದ ಇಬ್ಬರೇ ಮುಖ್ಯಮಂತ್ರಿ
Team Udayavani, Apr 5, 2018, 1:01 PM IST
ಕರ್ನಾಟಕ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹಿನ್ನೆಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಿದೆ. ರಾಜಕೀಯ ರಂಗದಲ್ಲಿ ಅನೇಕ ಘಟಾನುಘಟಿಗಳು ದ.ಕ.- ಉಡುಪಿಯಲ್ಲಿದ್ದರೂ ಮುಖ್ಯಮಂತ್ರಿ ಸ್ಥಾನ ಲಭಿಸಿದ್ದು ಕಡಿಮೆ ಅನ್ನಬಹುದು.
ಕಾರ್ಕಳ ಶಾಸಕರಾಗಿದ್ದ ಮೂಡಬಿದಿರೆ (ಮಾರ್ಪಾಡಿ) ವೀರಪ್ಪ ಮೊಯಿಲಿ (ಕಾಂಗ್ರೆಸ್) 19-11-1992ರಂದು ರಾಜ್ಯದ 20ನೇ ಮುಖ್ಯಮಂತ್ರಿಯಾದರು. 11-12-1994ರ ವರೆಗೆ ಅಧಿಕಾರದಲ್ಲಿದ್ದರು. ದೇವರಗುಂಡ ವೆಂಕಪ್ಪ (ಡಿ.ವಿ.) ಸದಾನಂದ ಗೌಡ ಅವರು (ಬಿಜೆಪಿ) ರಾಜ್ಯದ 29ನೇ ಮುಖ್ಯಮಂತ್ರಿಯಾಗಿ 4-8-2011ರಿಂದ 11-7-2012ರ ವರೆಗೆ ಅಧಿಕಾರದಲ್ಲಿದ್ದರು. ಇಬ್ಬರ ಅವಧಿಯಲ್ಲೂ ಸಂಪುಟಗಳಲ್ಲಿ ಜಿಲ್ಲೆಗೆ ಗಮನಾರ್ಹ ಪ್ರಾತಿನಿಧ್ಯ ನೀಡಲಾಗಿತ್ತು.
ಕರ್ನಾಟಕ ಮುಖ್ಯಮಂತ್ರಿಗಳು: (ಸ್ಥಾನದ ಸಂಖ್ಯೆಗೆ ಸಂಬಂಧಿಸಿ ಸಿದ್ದರಾಮಯ್ಯ 31ನೇ ಮುಖ್ಯಮಂತ್ರಿ. ವ್ಯಕ್ತಿಗಳ ನೆಲೆಯಲ್ಲಿ 21ನೆಯವರು). ಕೆ.ಸಿ. ರೆಡ್ಡಿ (1947-52), ಕೆಂಗಲ್ ಹನುಮಂತಯ್ಯ (1952-56), ಕಡಿದಾಳ್ ಮಂಜಪ್ಪ (1956- 2 ತಿಂಗಳು), ಎಸ್. ನಿಜಲಿಂಗಪ್ಪ (1956-57), ಎಸ್.ನಿಜಲಿಂಗಪ್ಪ (1957-58), ಬಿ. ಡಿ. ಜತ್ತಿ (1958-62), ಎಸ್. ಆರ್. ಕಂಠಿ (1962- 3 ತಿಂಗಳು), ಎಸ್. ನಿಜಲಿಂಗಪ್ಪ (1962-67), ಎಸ್. ನಿಜಲಿಂಗಪ್ಪ (1967-68), ವೀರೇಂದ್ರ ಪಾಟೀಲ್ (1968-71), ಡಿ. ದೇವರಾಜ ಅರಸ್ (1978-80), ಆರ್. ಗುಂಡೂ ರಾವ್ (1980-83), ರಾಮಕೃಷ್ಣ ಹೆಗಡೆ (1985-86), ಎಸ್. ಆರ್. ಬೊಮ್ಮಾಯಿ (1988-89), ವೀರೇಂದ್ರ ಪಾಟೀಲ್ (1989-90), ಎಸ್. ಬಂಗಾರಪ್ಪ (1990-92), ಎಂ. ವೀರಪ್ಪ ಮೊಯಿಲಿ (1992-94), ಎಚ್.ಡಿ. ದೇವೇಗೌಡ (1994-96), ಜೆ. ಎಚ್. ಪಟೇಲ್ (1996-99), ಎಸ್.ಎಂ. ಕೃಷ್ಣ (1999-2004), ಧರಂಸಿಂಗ್ (2004-06), ಎಚ್. ಡಿ. ಕುಮಾರಸ್ವಾಮಿ (2006-07), ಬಿ. ಎಸ್.ಯಡಿಯೂರಪ್ಪ (2007- 7 ದಿನ), ಯಡಿಯೂರಪ್ಪ (2008-11), ಸದಾನಂದ ಗೌಡ (2011-12), ಜಗದೀಶ್ ಶೆಟ್ಟರ್ (2012-13), ಸಿದ್ದರಾಮಯ್ಯ (2013- ಪ್ರಸ್ತುತ).
ಅಂದ ಹಾಗೆ…
ಮೊಯಿಲಿ ಮತ್ತು ಡಿ.ವಿ. ಇಬ್ಬರೂ ಪರಿಣತ ನ್ಯಾಯವಾದಿಗಳು. ಇಬ್ಬರೂ ರೈತರ ಪರ ಸೇವಾಕಾರ್ಯದಿಂದ ರಾಜಕೀಯ ಕ್ಷೇತ್ರದಲ್ಲಿ ಮಿಂಚಿದವರು. ಉತ್ತಮ ವಾಗ್ಮಿಗಳು. ಆದರೆ ಅವರಿಗೆ ಪೂರ್ಣ 5 ವರ್ಷದ ಅಧಿಕಾರ ದೊರೆಯಲಿಲ್ಲ.ಮೊಯಿಲಿ ಅವರಿಗೆ ಚುನಾವಣಾಪೂರ್ವ ಎರಡು ವರ್ಷ, ಡಿ.ವಿ.ಗೆ ಮಧ್ಯಾಂತರ ಸುಮಾರು ಒಂದು ವರ್ಷವಷ್ಟೇ ದೊರೆಯಿತು. ವಿಶೇಷವೆಂದರೆ ಬಳಿಕ ಅವರಿಬ್ಬರೂ ಸಂಸದರಾದರು. ಮೊಯಿಲಿ ಮಾಜಿ ಕೇಂದ್ರ ಸಚಿವರು; ಡಿವಿ ಹಾಲಿ ಕೇಂದ್ರ ಸಚಿವರು !
ಮನೋಹರ ಪ್ರಸಾದ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.