ಗುಲ್ಬರ್ಗಕ್ಕೆ 36 ಸಾವಿರ ಟನ್ ಪೆಟ್ ಕೋಕ್ ರವಾನೆ
ಎಂಆರ್‌ಪಿಎಲ್‌ಗೆ ರೈಲ್ವೇ ಸಂಪರ್ಕ
Team Udayavani, Dec 6, 2019, 4:51 AM IST
ಸುರತ್ಕಲ್: ಎಂಆರ್‌ಪಿಎಲ್‌ನಿಂದ ಮೊದಲ ಬಾರಿಗೆ 36 ಸಾವಿರ ಟನ್ ಪೆಟ್ ಕೋಕ್ ಅನ್ನು ರೈಲಿನ ಮೂಲಕ ಗುಲ್ಬರ್ಗಕ್ಕೆ ಸಾಗಿಸಲಾಗಿದೆ. ಈ ಮೂಲಕ ರೈಲ್ವೇ ಸಂಪರ್ಕ ಪಡೆದ ರಾಜ್ಯದ ಪ್ರಥಮ ರಿಫೈನರಿ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.
ತೋಕೂರು ರೈಲು ನಿಲ್ದಾಣದಿಂದ ಗುಲ್ಬರ್ಗ ದಲ್ಲಿರುವ ಆಲ್ಟ್ರಾಟೆಕ್ ಸಿಮೆಂಟ್ ಕಂಪೆನಿಗೆ ಪ್ರಥಮ ಸಾಗಾಟಕ್ಕೆ ಸಂಸ್ಥೆಯ ಚೀಫ್ ವಿಜಿಲೆನ್ಸ್ ಅಧಿಕಾರಿ ರಾಜೀವ್ ಕುಶ್ವಾ ಚಾಲನೆ ನೀಡಿದರು. ಪ್ರಾಜೆಕ್ಟ್ ವಿಭಾಗದ ಜಿಜಿಎಂ ರಾಮಕೃಷ್ಣ, ತಾಂತ್ರಿಕ ವಿಭಾಗದ ಜಿಜಿಎಂ ಎಸ್‌ಪಿ ಕಾಮತ್, ಮಾರುಕಟ್ಟೆ ವಿಭಾಗದ ಜಿಜಿಎಂ ಎಚ್.ಸಿ. ಸತ್ಯನಾರಾಯಣ, ಸಿಜಿಎಂ ಕೃಷ್ಣ ಹೆಗ್ಡೆ, ದರ್ಶನ್ ಠಾಕೂರ್ ಉಪಸ್ಥಿತರಿದ್ದರು.
ಟ್ರಾಫಿಕ್, ಮಾಲಿನ್ಯ ಗಣನೀಯ ಇಳಿಕೆ
ಪೆಟ್ ಕೋಕ್ ಲೋಡಿಂಗ್‌ಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಅತೀ ವೇಗದಲ್ಲಿ ಮಾಲಿನ್ಯ ವಿಲ್ಲದೆ ವ್ಯಾಗನ್ ಗಳಿಗೆ ತುಂಬಿಸಬಹುದಾಗಿದೆ. ನಿಗದಿತ ಸಮಯ ದಲ್ಲಿ ಪೆಟ್ ಕೋಕ್ ನಿಗದಿತ ಕಂಪೆನಿ ಗಳಿಗೆ ತಲುಪಲು ಇದರಿಂದ ಸಾಧ್ಯವಾಗಲಿದೆ.
ಒಂದು ಟ್ರಕ್ ಮೂಲಕ 16 ಟನ್ ಪೆಟ್ ಕೋಕ್ ಸಾಗಾಟ ಮಾಡಬಹುದಾದರೆ ರೈಲಿನ 59 ವ್ಯಾಗನ್ ಮೂಲಕ 36 ಸಾವಿರ ಟನ್ ಪೆಟ್ ಕೋಕ್ ಏಕಕಾಲಕ್ಕೆ ಸಾಗಾಟ ಮಾಡಬಹುದಾಗಿದೆ. ಇದು ಒಟ್ಟು 225 ಟ್ರಕ್‌ಗಳ ಓಡಾಟಕ್ಕೆ ಸಮಾನವಾಗಿದೆ. ರೈಲ್ವೇ ಸಂಪರ್ಕದಿಂದ ಸಾಗಾಟ ವೆಚ್ಚ, ಸಮಯ ಉಳಿಯಲಿದೆ. ಜತೆಗೆ ಹೆದ್ದಾರಿಗಳಲ್ಲಿ ಟ್ರಕ್ ಓಡಾಟ ಗಣನೀಯ ಕಡಿಮೆಯಾಗಲಿದೆ. ದೇಶಾದ್ಯಂತ ರೈಲ್ವೇ ಮೂಲಕ ಸಾಗಾಟಕ್ಕೆ ಒತ್ತು ನೀಡಿದರೂ ಸ್ಥಳೀಯವಾಗಿ ಕೆಲವು ಭಾಗಗಳಿಗೆ ಟ್ರಕ್ ಮೂಲಕ ಸಾಗಾಟ ಮುಂದುವರಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.