ಅತ್ತಾವರ ಕೆಎಂಸಿ ಆಸ್ಪತ್ರೆ: 3ಡಿ ಹೈಡೋಸ್‌ ಬ್ರಾಕಿಥೆರಪಿ ಉದ್ಘಾಟನೆ


Team Udayavani, Jul 2, 2019, 11:24 AM IST

kmc

ಮಂಗಳೂರು: ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಹಾಗೂ ಅತ್ಯಾಧುನಿಕ 3ಡಿ ಹೈಡೋಸ್‌ ಬ್ರಾಕಿಥೆರಪಿ ಚಿಕಿತ್ಸೆ ವಿಭಾಗಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಶಾಸಕ ಡಿ. ವೇದವ್ಯಾಸ ಕಾಮತ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮಹತ್ವದ್ದು. ಮಂಗಳೂರಿನ ಕೆಎಂಸಿ ಆಸ್ಪತ್ರೆ ಮಹತ್ತರ ಸೇವೆ ಸಲ್ಲಿಸುತ್ತಿದ್ದು ಮಾದರಿ ಆರೋಗ್ಯ ಕಾರ್ಯ ನಡೆಸುತ್ತಿದೆ ಎಂದು ಶ್ಲಾಘಿಸಿದರು.

ಕರಾವಳಿಯಲ್ಲಿ ಪ್ರಥಮ
ಕೆಎಂಸಿ ಮಂಗಳೂರಿನ ವೈದ್ಯಕೀಯ ಅಧೀಕ್ಷಕ ಡಾ| ಜಾನ್‌ ಟಿ. ರಾಮಪುರಲ್‌ ಮಾತನಾಡಿ, ರೇಡಿಯೋಥೆರಪಿ ಮತ್ತು ಆಂಕೋಲಜಿ ವಿಭಾಗವು ಇದೀಗ ವಿವೋ ಡೋಸಿಮೆಟ್ರಿ ತಂತ್ರಜ್ಞಾನದ ಮೂಲಕ ಅತ್ಯಾಧುನಿಕ 3ಡಿ ಹೈಡೋಸ್‌ ಪ್ರಮಾಣದ ಬ್ರಾಕಿಥೆರಪಿಯನ್ನು ನೀಡುತ್ತಿದೆ. ಈ ವಿಧಾನದಲ್ಲಿ ರೋಗಿಗೆ ನೀಡಬೇಕಾದ ವಿಕಿರಣದ ಪ್ರಮಾಣ ಮತ್ತು ಚಿಕಿತ್ಸೆಯನ್ನು ಅತ್ಯಂತ ನಿಖರವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ. ಈ ತಂತ್ರಜ್ಞಾನವು ಕರಾವಳಿ ಕರ್ನಾಟಕ ಪ್ರದೇಶದಲ್ಲಿ ಮೊದಲನೆಯ ಸಾಧನೆಯಾಗಿದೆ ಎಂದರು.

ಬ್ರಾಕಿಥೆರಪಿ ವಿಧಾನವು ವಿಕಿರಣ ಚಿಕಿತ್ಸೆಯ ಒಂದು ರೂಪವಾಗಿದ್ದು, ಈ ವಿಧಾನದ ಮೂಲಕ ರೋಗಿಗೆ ನೀಡುವ ವಿಕಿರಣದ ಪ್ರಮಾಣ ಮತ್ತು ಚಿಕಿತ್ಸೆಯನ್ನು ಅತ್ಯಂತ ನಿಖರವಾಗಿ ನೀಡಲು ಸಾಧ್ಯವಾಗುತ್ತದೆ. ಈ ವಿಧಾನದ ಮೂಲಕ ರೋಗಿಗೆ ವೈದ್ಯಕೀಯ ವಿಕಿರಣ ಎಸೊಟೋಪ್ಸ್‌ಗಳಾದ (ಸಮಸ್ಥಾನಿ) ಕೋಬಾಲ್ಟ್ 60, ಇಂಡಿಯನ್‌ 192 ಮುಂತಾದವುಗಳನ್ನು ಟೊಳ್ಳಾದ ಲೋಹದ ಸೂಜಿಗಳು ಅಥವಾ ಪ್ಲಾಸ್ಟಿಕ್‌ ತೂರುನಳಿಕೆ ಮೂಲಕ ದೇಹದ ಒಳಗೆ ಅಥವಾ ದೇಹದ ಮೇಲ್ಮೈಯಲ್ಲಿ ಇಡುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ನೋವು ರಹಿತ ಚಿಕಿತ್ಸೆ
ಈ ಚಿಕಿತ್ಸೆ ನೋವು ರಹಿತವಾಗಿದ್ದು, ಹೆಚ್ಚಿನ ಪ್ರಮಾಣದ ವಿಕಿರಣವನ್ನು ನಿರ್ದಿಷ್ಟವಾಗಿ ಕ್ಯಾನ್ಸರ್‌ ಇರುವ ಭಾಗಗಳಿಗಷ್ಟೇ ನೀಡಲಾಗುತ್ತದೆ. ಇದರಿಂದ ದೇಹದ ಇತರ ಸಾಮಾನ್ಯ ಭಾಗಗಳು ವಿಕಿರಣದಿಂದ ಪಾರಾಗುತ್ತವೆ ಎಂದರು.

ಪಯ್ಯನೂರಿನ ಮಕ್ಕಳ ತಜ್ಞರಾದ ಡಾ| ಎಂ. ಹರಿದಾಸ್‌, ಉಪ್ಪಿನಂಗಡಿಯ ಭಟ್‌ ನರ್ಸಿಂಗ್‌ ಹೋಂ ಇದರ ವೈದ್ಯ ಡಾ| ಕೆ.ಜಿ. ಭಟ್‌, ಮೂಡುಬಿದಿರೆ ಜಿ.ವಿ. ಪೈ ಮೆಮೋರಿಯಲ್‌ ಆಸ್ಪತ್ರೆಯ ವೈದ್ಯ ಡಾ| ಜಯಗೋಪಾಲ್‌ ತೋಳ್ಪಾಡಿ, ಕೆಎಂಸಿಯ ಅಡಿಶನಲ್‌ ಡೀನ್‌ ಡಾ| ಆಲ್ಫೆ†ಡ್‌ ಆಗಸ್ಟಿನ್‌, ಅಸೋಸಿಯೇಟ್‌ ಡೀನ್‌ ಡಾ| ನೂತನ್‌ ಕಾಮತ್‌, ರೀಜನಲ್‌ ಸಿಇಒ ಸಗೀರ್‌ ಸಿದ್ದಿಕಿ ಉಪಸ್ಥಿತರಿದ್ದರು. ಸಹನಾ ಅವರು ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Barkur Shri Kallikamba Temple: ಕುಲಕಸುಬನ್ನು ಉಳಿಸಿ ಬೆಳೆಸಬೇಕಿದೆ: ಕಾಳಹಸ್ತೇಂದ್ರ ಶ್ರೀ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ

Malpe: ಏಕರೂಪದ ಮೀನುಗಾರಿಕೆಗೆ ಪ್ರಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

illegal sand mining ಸಹಕಾರ ಮಾಡಿರುವ ಆರೋಪ: ಕಾಪು ಎಸ್‌ಐ ಅಮಾನತು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Kaniyoor: ಮರಳುಗಾರಿಕೆಯ ಬೋಟ್‌ ಅನ್ನು ಕಟ್ಟಿ ಹಾಕಿದರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Bantwal: ಬಿ.ಸಿ.ರೋಡ್; ರೈಲು ಢಿಕ್ಕಿಯಾಗಿ ವ್ಯಕ್ತಿ ಮೃತ್ಯು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Sullia: ವಿದ್ಯುತ್‌ ಕಂಬದಿಂದ ಬಿದ್ದಿದ್ದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.