ಎರಡೂ ಕ್ಷೇತ್ರಗಳಲ್ಲಿ ನೋಟಾ ಮತಗಳಿಗೆ 3ನೇ ಸ್ಥಾನ!
Team Udayavani, Jun 5, 2024, 12:14 AM IST
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ- ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊರತು ಪಡಿಸಿದರೆ ಮೂರನೇ ಅತೀ ಹೆಚ್ಚು ಮತಗಳು ನೋಟಾಕ್ಕೆ ಬಿದ್ದಿವೆ! ಬರೋಬ್ಬರಿ 23,576 ಮತಗಳನ್ನು ನೋಟಾ ಪಡೆದುಕೊಂಡಿದೆ.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳು ನೋಟಾಕ್ಕೆ ಚಲಾವಣೆಯಾಗಿವೆ. ಬೆಳ್ತಂಗಡಿಯಲ್ಲಿ 7,691 ಮತ, ಮೂಡುಬಿದಿರೆ 2,166, ಮಂಗಳೂರು ನಗರ ಉತ್ತರ 2,019, ಮಂಗಳೂರು ನಗರ ದಕ್ಷಿಣ 1,551, ಮಂಗಳೂರು 892, ಬಂಟ್ವಾಳ 2,353, ಪುತ್ತೂರು 2302, ಸುಳ್ಯ 4,541 ಮತಗಳು ನೋಟಾಕ್ಕೆ ಚಲಾವಣೆಯಾಗಿದೆ. ಅಂಚೆ ಮತದಾನದಲ್ಲೂ 61 ಮತಗಳು ನೋಟಾಕ್ಕೆ ಹೋಗಿದೆ.2014ರ ಲೋಕಸಭಾ ಚುನಾವಣೆಯಲ್ಲಿ 7,109 ಮತ್ತು 2019ರ ಚುನಾವಣೆಯಲ್ಲಿ 7,380 ಮತಗಳು ನೋಟಾಕ್ಕೆ ಬಿದ್ದಿದ್ದವು.
ಅಭಿಯಾನದ ಪರಿಣಾಮ?
ಉಜಿರೆಯ ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಸ್ಪಂದಿಸಿಲ್ಲ, ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲಎಂದು ಆರೋಪಿಸಿ ಸೌಜನ್ಯಾ ಪರ ಹೋರಾಟ ಸಮಿತಿಯಿಂದ ನೋಟಾಕ್ಕೆ ಮತ ಚಲಾಯಿಸುವಂತೆ ಸಾರ್ವ ಜನಿಕರಲ್ಲಿ ಮನವಿ ಮಾಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲೂ ದೊಡ್ಡ ಮಟ್ಟದಲ್ಲಿ ಅಭಿಯಾನ ನಡೆದಿತ್ತು. ಬೆಳ್ತಂಗಡಿ – ಸುಳ್ಯ ತಾಲೂಕಿನಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ ನೋಟಾಕ್ಕೆ ಮತ ಚಲಾಯಿಸುವಂತೆ ಸಮಿತಿಯ ಪ್ರಮುಖರು ಆಗ್ರಹಿಸಿದ್ದರು. ಅಭಿ ಯಾನದ ಪರಿಣಾಮವೋ ಎಂಬಂತೆ ಈ ಬಾರಿ ನೋಟಾ ಮತಗಳು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿವೆ.
ನೋಟಾಕ್ಕೆ ಬಿದ್ದ ಮತಗಳು ಹೆಚ್ಚಾದರೂ ಇದು ಗೆಲುವಿನ ಮೇಲೆ ಪರಿಣಾಮ ಯಾವುದೇ ಬೀರಿಲ್ಲ. ಆದರೆ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳಿಗೆ ಪಕ್ಷಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯೂ ಹೌದು.
ಉಡುಪಿ: ಕಾರ್ಕಳದಲ್ಲಿ ಅತೀ ಹೆಚ್ಚು ನೋಟಾ
ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ 7,510 ನೋಟ ಮತಗಳು ಚಲಾವಣೆಯಾಗಿದ್ದರೆ ಈ ಬಾರಿ 11,269 ಚಲಾವಣೆಯಾಗಿದೆ. ಕಾರ್ಕಳ ಮತ್ತು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಮತ ಚಲಾವಣೆಯಾಗಿರುವುದು ವಿಶೇಷ. ವಿಧಾನಸಭಾ ಕ್ಷೇತ್ರವಾರು ಕುಂದಾಪುರ 1,578, ಉಡುಪಿ 1,778, ಕಾಪು 1,523, ಕಾರ್ಕಳ 2,780, ಶೃಂಗೇರಿ 943, ಮೂಡಿಗೆರೆ 1,135, ಚಿಕ್ಕಮಗಳೂರು 814, ತರಿಕೆರೆ 684 ನೋಟ ಮತ ಚಲಾವಣೆಯಾಗಿದೆ. ಚುನಾವಣೆ ಪೂರ್ವದಲ್ಲಿ ಕೆಲವು ಸಂಘಟನೆಗಳು ನೋಟಾ ಅಭಿಯಾನ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.