400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗ: ರೈತರ ಸಭೆ; ತೊಂದರೆಯಾಗದಂತೆ ಕಾಮಗಾರಿ: ಡಿಸಿ
Team Udayavani, Mar 16, 2022, 5:55 AM IST
ವಿಟ್ಲ: ಸರಕಾರಕ್ಕೆ ವಿದ್ಯುತ್‌ಪ್ರಸರಣ ಮಾರ್ಗಕ್ಕೆ ಜಾಗವನ್ನು ಮಾಡಿಕೊಡುವ ಜವಾಬ್ದಾರಿ ಇದೆ. ಪವರ್ ಡಿಪಾರ್ಟ್‌ಮೆಂಟ್‌ನಿಂದ ಜಿಲ್ಲಾಡಳಿತಕ್ಕೆ ಈ ಬಗ್ಗೆ ಸೂಕ್ತ ಮಾರ್ಗದರ್ಶನ ಮಾಡಲಾಗಿದೆ. ನಾಗರಿಕರಿಗೆ ತೊಂದರೆಯಾಗದಂತೆ ಮಾಡುವ ಮತ್ತು ಜನರಿಗೆ ಸಮಸ್ಯೆಯಾದರೆ ಅದಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡುವ ಜವಾಬ್ದಾರಿ ಜಿಲ್ಲಾಧಿಕಾರಿಗಿದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಹೇಳಿದರು.
ಅವರು ಉಡುಪಿ ಕಾಸರಗೋಡು 400 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ವಿಚಾರದಲ್ಲಿ ನ್ಯಾಯಾಲಯದ ಮೊರೆಹೊಕ್ಕಿರುವ 69 ಮಂದಿ ರೈತರನ್ನು ಆಹ್ವಾನಿಸಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದರು.
ಸಂತ್ರಸ್ತ ರೈತ ರಾಜೀವ ಗೌಡ ಮಾತನಾಡಿ, ನಮ್ಮ ಜಾಗದಲ್ಲಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಬೇಡವೆಂದೇ ಬೇಡಿಕೆ ಸಲ್ಲಿಸಿದ್ದೇವೆ. ಅದೇ ಪ್ರಕಾರ ನಾವು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನ್ಯಾಯ ಬೇಡಿದ್ದೆವು. ನಮಗೆ ಪರಿಹಾರ ಬೇಡ. ನಮ್ಮ ಜಾಗದಲ್ಲಿ ಲೈನ್ ಹೋಗದಿರುವುದೇ ನಮಗೆ ಪರಿಹಾರ ಎಂದು ಪುನರುಚ್ಚರಿಸಿದರು.
ತತ್‌ಕ್ಷಣ ಕಾಮಗಾರಿ ಇಲ್ಲ
ಸಹಾಯಕ ಆಯುಕ್ತ ಮದನ ಮೋಹನ್ ಮಾತನಾಡಿ, ಹೈಕೋರ್ಟ್‌ಆದೇಶದ ಪ್ರಕಾರ ನಿಮ್ಮನ್ನು ಆಹ್ವಾನಿಸಿದ್ದೇವೆಯೇ ಹೊರತು ಚರ್ಚೆ ಮಾಡಿ ಇಲ್ಲೇ ಎಲ್ಲ ತೀರ್ಮಾನ ಮಾಡುವುದಕ್ಕಲ್ಲ; ಅದು ಅಸಾಧ್ಯ ಕೂಡ.
ಜಿಲ್ಲಾಧಿಕಾರಿಗಳ ಜತೆಗೆ ಚರ್ಚಿಸುವ ಅವಕಾಶವಿದೆ. ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಲಾಗುತ್ತದೆ. ತತ್‌ಕ್ಷಣ ಕಾಮಗಾರಿ ಆರಂಭಿಸುವುದಿಲ್ಲ. ಕಾನೂನಿನ ಪ್ರಕಾರ ಕಾಮಗಾರಿ ನಡೆಸಲಾಗುವುದು ಎಂದರು.
ವಿದ್ಯುತ್ ಮಾರ್ಗ ತಮ್ಮ ಜಮೀನುಗಳಲ್ಲಿ ಹೋಗಬಾರದೆಂದು ಮನವಿ ಮಾಡಿದ ರೈತರಿಗೆ ಪರಿಹಾರದ ಮೊತ್ತದ ಬಗ್ಗೆ ನೋಟಿಸು ಜಾರಿ ಮಾಡಿರುವುದಕ್ಕೇ ಸಭೆಯ ಆರಂಭದಲ್ಲಿ ಸಹಾಯಕ ಆಯುಕ್ತರಲ್ಲಿ ವಿರೋಧ ವ್ಯಕ್ತಪಡಿಸಲಾಯಿತು. ಬಳಿಕ ಕಡಿಮೆ ರೈತರು ಇರುವ ಕಾರಣಕ್ಕೆಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಮಾತುಕತೆ ಮುಂದುವರಿಯಿತು.
ರೈತರ ಆಕ್ಷೇಪ
ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ರೈತರು ನೀಡಿದ ಮನವಿಯನ್ನು ಒಂದು ತಿಂಗಳಲ್ಲಿ ಪುರಸ್ಕಾರ ಮಾಡಬೇಕೆಂದು ತಿಳಿಸಿದ್ದರೂ ಯಾವೊಂದು ಸಭೆಯನ್ನೂ ಜಿಲ್ಲಾಡಳಿತ ನಡೆಸಿರಲಿಲ್ಲ. ಮಾ. 11ರಂದು ನೋಟಿಸು ಜಾರಿ ಮಾಡಿದ ಭೂಸ್ವಾ ಧೀನಾಧಿ ಕಾರಿ ಹಾಗೂ ಸಹಾಯಕ ಆಯುಕ್ತರು ಪರಿಹಾರದ ಮೌಲ್ಯ ನಿಗದಿಪಡಿಸುವ ವಿಚಾರದಲ್ಲಿ ಮಾ. 15ರಂದು ಸಭೆ ಕರೆದಿದ್ದರು. ಇದು ಸರಿಯಲ್ಲ ಎಂದು ಆಕ್ಷೇಪಿಸಿದ ರೈತರು ಪರಿಹಾರದ ವಿಚಾರವಾಗಿ ಮಾತನಾಡುವುದಕ್ಕೆ ತಮ್ಮ ವಿರೋಧವಿದೆ ಎಂದು ಮನವಿ ಸಲ್ಲಿಸಿ, ನ್ಯಾಯಾಲಯದಲ್ಲಿಯೂ ಮನವಿ ಸಲ್ಲಿಸುವುದಾಗಿ ತಿಳಿಸಿ ಸಭೆಯಿಂದ ತೆರಳಿದರು. ತಹಶೀಲ್ದಾರ್ ರಶ್ಮಿ ಎಸ್.ಆರ್., ಸಂತ್ರಸ್ತ ರೈತರಾದ ರೋಹಿತಾಶ್ವ, ಶ್ಯಾಮ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.