ಆಳ್ವಾಸ್‌ನಲ್ಲಿ 46ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್ಗಳ ವಿಚಾರ ಸಂಕಿರಣ, ಪ್ರದರ್ಶನ
1,494 ಯೋಜನ ಪ್ರಸ್ತಾವನೆಗಳಿಗೆ ಮಂಡಳಿ ನೆರವು
Team Udayavani, Aug 12, 2023, 1:06 AM IST
ಮೂಡುಬಿದಿರೆ: ಸ್ಥಳೀಯ ಹಾಗೂ ದೇಶದ ಅಭಿವೃದ್ಧಿ ದೃಷ್ಟಿಯಿಂದ ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ಕೆಎಸ್‌ಸಿಎಸ್‌ಟಿ ಪ್ರೋತ್ಸಾಹಿಸುತ್ತಿದೆ. ಮಂಡಳಿಯು 45 ವರ್ಷಗಳಲ್ಲಿ 15,300ಕ್ಕೂ ಅಧಿಕ ವಿದ್ಯಾರ್ಥಿ ಯೋಜನೆಗಳನ್ನು ಗುರುತಿಸಿ ನೆರವು ನೀಡಿದೆ. ಪ್ರಸಕ್ತ 46ನೇ ಸರಣಿಯಲ್ಲಿ ಮಂಡಳಿಯು ರಾಜ್ಯದ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ವಿವಿಧ ವಿಭಾಗಗಳ 5,961 ಯೋಜನೆಗಳನ್ನು ಸ್ವೀಕರಿಸಿದ್ದು 197 ಎಂಜಿನಿಯರಿಂಗ್ ಕಾಲೇಜುಗಳ 1,494 ಯೋಜನ ಪ್ರಸ್ತಾವನೆಗಳಿಗೆ ಧನಸಹಾಯ ಮತ್ತು ತಾಂತ್ರಿಕ ನೆರವು ನೀಡಿರುವುದು ಶ್ಲಾಘನೀಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು.
ಮಿಜಾರಿನಲ್ಲಿರುವ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ) ಸಹಯೋಗದಲ್ಲಿ ಆ. 11, 12ರಂದು ನಡೆಯುವ “46ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್ಗಳ ವಿಚಾರ ಸಂಕಿರಣ ಮತ್ತು ಪ್ರದರ್ಶನ’ದಲ್ಲಿ ಅವರು ಮಾತನಾಡಿ, ಪರಿಣತರ ಮೌಲ್ಯಮಾಪನದ ಮೂಲಕ 433 ಅತ್ಯುತ್ತಮ ಯೋಜನೆಗಳು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂಬುದು ಉತ್ತಮ ಬೆಳವಣಿಗೆ ಎಂದರು.
ದೇಶಕ್ಕೆ ಕೊಡುಗೆ
ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಠ್ಯದ ಹಿನ್ನೆಲೆಯಲ್ಲಿ ನಿಮ್ಮ ಒಳಗಿನ ಪ್ರತಿಭೆ, ಸೃಜನಶೀಲತೆ ವ್ಯಕ್ತಪಡಿಸಲು ಇದೊಂದು ಸಶಕ್ತ ಸಂದರ್ಭವಾಗಿದೆ; ಇಡಿಯ ವಿಶ್ವವೇ ನಮ್ಮತ್ತ ನೋಡುವ ತಾಂತ್ರಿಕ ಪ್ರತಿಭೆ ನಿಮ್ಮಲ್ಲಿದೆ. ಅದು ದೇಶಕ್ಕೆ ಕೊಡುಗೆಯಾಗುವುದು ಖಂಡಿತ. ನೀವೆಲ್ಲ ಈ ದೇಶವನ್ನು ಇನ್ನೂಎತ್ತರಕ್ಕೆ ಏರಿಸಬಲ್ಲಿರಿ’ ಎಂದರು.
ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಪ್ರೊ| ಅಶೋಕ ಎಂ. ರಾಯಚೂರು ದಿಕ್ಸೂಚಿ ಭಾಷಣ ಮಾಡಿದರು.
ತಾಂತ್ರಿಕ ಪ್ರದರ್ಶನ
ಮಂಗಳೂರಿನ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ| ಹ್ಯೂಬರ್ಟ್ ಮನೋಹರ್ ವಾಟ್ಸನ್ ರಿಮೋಟ್ ಕಂಟ್ರೋಲ್ ಮೂಲಕ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ರಾಜ್ಯದ ವಿವಿಧ ತಾಂತ್ರಿಕ ಶಿಕ್ಷಣ ಕಾಲೇಜುಗಳ ಪ್ರಾಂಶುಪಾಲರು, 160 ಪ್ರಾಧ್ಯಾಪಕರು ಹಾಗೂ ವಿಜ್ಞಾನಿಗಳು ಪಾಲ್ಗೊಂಡಿದ್ದರು.
ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ಫೆನಾಂìಡಿಸ್, ಕಾರ್ಯಕ್ರಮದ ಸಂಯೋಜಕರಾದ ಕಾಲೇಜಿನ ಡಾ| ಸುಧೀರ್ ಶೆಟ್ಟಿ ಹಾಗೂ ಕೆಎಸ್‌ಸಿಎಸ್‌ಟಿಯ ಕೆ.ಎನ್. ವೆಂಕಟೇಶ್ ವೇದಿಕೆಯಲ್ಲಿದ್ದರು.
ಕೆಎಸ್‌ಸಿಎಸ್‌ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ| ಯು.ಟಿ. ವಿಜಯ್ ಸ್ವಾಗತಿಸಿದರು. ಆಳ್ವಾಸ್ ಉಪನ್ಯಾಸಕ ರಾಜೇಶ್ ಡಿ’ಸೋಜಾ ನಿರೂಪಿಸಿದರು.
133 ಕಾಲೇಜುಗಳ 712 ವಿದ್ಯಾರ್ಥಿಗಳು ಒಟ್ಟು 368 ಪ್ರಾಜೆಕ್ಟ್ಗಳನ್ನು ಪ್ರದರ್ಶಿಸಿದರು. ಇಸ್ರೋದ ಚಂದ್ರಯಾನದಿಂದ ಹಿಡಿದು ಚರಂಡಿಯ ತ್ಯಾಜ್ಯ ಎತ್ತುವ ತಂತ್ರಜ್ಞಾನದ ವರೆಗೆ ಬಹುವಿಧ ಆವಿಷ್ಕಾರಗಳು ಕಂಡುಬಂದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.