49 ನೆರೆ ಬಾಧಿತ ಪ್ರದೇಶಗಳು, 39 ಕಾಳಜಿ ಕೇಂದ್ರಗಳು
Team Udayavani, Jun 25, 2021, 5:40 AM IST
ಮಹಾನಗರ: ಅವಿಭಜಿತ ಮಂಗಳೂರು ತಾಲೂಕಿನಲ್ಲಿ ಪ್ರವಾಹ ತಲೆದೋರುವ 49 ಪ್ರದೇಶಗಳನ್ನು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ ಗುರುತಿಸಿದ್ದು, ಪ್ರವಾಹದ ಸಂದರ್ಭ ಬಾಧಿತರಾಗುವ ಮಂದಿಯ ಸಂಖ್ಯೆಯನ್ನು ಅಂದಾಜಿಸಿ ಅವರ ಸ್ಥಳಾಂತರಕ್ಕೆ 39 ಕಾಳಜಿ ಕೇಂದ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ.
ಭಾರೀ ಮಳೆಯಾಗುವ ಸಂದರ್ಭಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಮಂಗಳೂರು ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ಹರಿಯುವ ನೇತ್ರಾವತಿ, ಫಲ್ಗುಣಿ, ಶಾಂಭವಿ ನದಿಗಳ ಅಕ್ಕಪಕ್ಕದ ಬರುವ ಈ ಗ್ರಾಮಗಳಲ್ಲಿ ನೆರೆ ಸಂಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯಿಂದ ಭಾರೀ ಮಳೆಯ ಮುನ್ಸೂಚನೆಗಳು ಬಂದ ಸಂದರ್ಭ ಈ ಗ್ರಾಮಗಳಲ್ಲಿ ವಿಶೇಷ ನಿಗಾವಹಿಸಲಾಗುತ್ತದೆ. ಪಾಲಿಕೆ, ಗ್ರಾಮಾಂತರ ಸೇರಿ ನೆರೆಯಿಂದ ಒಟ್ಟು 11,716 ಮಂದಿ ಬಾಧಿತರಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಬಾಧಿತವಾಗುವ ಪ್ರದೇಶ, ಕಾಳಜಿ ಕೇಂದ್ರಗಳು: ಗ್ರಾಮಾಂತರ ಪ್ರದೇಶನೆರೆ ಬಾಧಿತ ಪ್ರದೇಶ -ಉಳ್ಳಾಲ, ಮುಕ್ಕಚ್ಚೇರಿ, ಕೋಟೆಪುರ ಅಲೇಕಳ(ಬಾಧಿತರಾಗುವ ಜನಸಂಖ್ಯೆ -600): ಕಾಳಜಿ ಕೇಂದ್ರ -ಟಿಪ್ಪು ಸುಲ್ತಾನ್ ಉರ್ದು ಎಚ್‌ಎನ್‌ಎ ದ.ಕ.ಜಿ.ಪಂ. ಹಿ.ಪ್ರಾ. ಒಂಬತ್ತುಕೆರೆ, ಎಚ್‌ಪಿ ಸ್ಕೂಲ್ ಮೊಗವೀರ ಪಟ್ಣ ಹಾಗೂ ಒಂಬತ್ತುಕೆರೆ; ನೇತ್ರಾವತಿ ಉಳಿಯ, ಮುನ್ನೂರು (550): ಕಾಳಜಿ ಕೇಂದ್ರ -ರಾಣಿಪುರ ಹಿ.ಪ್ರಾ.ಶಾಲೆ; ಪೆರ್ಮನ್ನೂರುಕಲ್ಲಾಪು (650): ಕಾಳಜಿ ಕೇಂದ್ರ – ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪೆರ್ಮನ್ನೂರು; ಗಟ್ಟಿ ಕುದ್ರು, ಅಂಬ್ಲಿಮೊಗರು (102): ಕಾಳಜಿ ಕೇಂದ್ರ -ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಅಂಬ್ಲಿಮೊಗರು; ಪಾವೂರು, ಉಳಿಯ ಇನೋಳಿ ಗಾಡಿ ಗದ್ದೆ (150): ಕಾಳಜಿ ಕೇಂದ್ರ- ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಗಾಡಿಗದ್ದೆ, ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಇನೋಳಿ; ರಾಜಗುಡ್ಡೆ ಕಡೆಂಜ ಕಡವು (240): ಕಾಳಜಿ ಕೇಂದ್ರ -ಹರೇಕಳ ಶಾಲೆ; ಕಣ್ಣೂರು (60): ಕಾಳಜಿ ಕೇಂದ್ರ -ಮುಸ್ಲಿಂ ಚಾರಿಟೆಬಲ್ ಟ್ರಸ್ಟ್ ಕಣ್ಣೂರು, ಆಂಗ್ಲಮಾಧ್ಯಮ ಹಿ.ಪ್ರಾ.ಶಾಲೆ ಕಣ್ಣೂರು; ಅಮ್ಮೆಂಬಳ ಬೋಳಿಯ (75): ಕಾಳಜಿ ಕೇಂದ್ರ -ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಅಮ್ಮೆಂಬಳ; ಚಂದ್ರಶಾನುಭೋಗ ಕುದ್ರು ಬಪ್ಪನಾಡು (100): ಕಾಳಜಿ ಕೇಂದ್ರ – ಸರಕಾರಿ ಮಾದರಿ ಹಿ.ಪ್ರಾ.ಶಾಲೆ, ಬಪ್ಪನಾಡು; ಬಪ್ಪನಾಡು ಬಡಗಹಿತ್ಲು (150): ಕಾಳಜಿ ಕೇಂದ್ರ -ಸರಕಾರಿ ಮಾದರಿ ಹಿ.ಪ್ರಾ.ಶಾಲೆ ಬಪ್ಪನಾಡು; ಬಳ್ಕುಂಜೆ, ಕರ್ನಿರೆ, ಕೊಪ್ಪಳ, ಪಚಂಗೇರಿ(100): ಕಾಳಜಿ ಕೇಂದ್ರ -ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕರ್ನಿರೆ; ಮಾನಂಪಾಡಿ (600): ಕಾಳಜಿ ಕೇಂದ್ರ -ಸರಕಾರಿ ಹಿ.ಪ್ರಾ.ಶಾಲೆ ಮಾನಂಪಾಡಿ; ಪಂಜದಕಲ್ಲು, ಕೊಯಿಕುಡೆ (360): ಕಾಳಜಿ ಕೇಂದ್ರ- ಸರಕಾರಿ ಹಿ.ಪ್ರಾ.ಶಾಲೆ ಪಚ್ಚಿಜ; ಹಳೆಯಂಗಡಿ, ಕರಿತೋಟ, ಪಾವಂಜೆ, ಕೊಳವೈಲು ಸಮುದ್ರಕೊರೆತ ಪ್ರದೇಶ ಸಸಿಹಿತ್ಲು (60): ಕಾಳಜಿ ಕೇಂದ್ರ -ಯುಬಿಎಂಸಿ ಹಿ,ಪ್ರಾ. ಶಾಲೆ ಹಳೆಯಂಗಡಿ; ಅತಿಕಾರಿ ಬೆಟ್ಟು (240): ಕಾಳಜಿ ಕೇಂದ್ರ- ವಾಸುದೇವ ರಾವ್ ಸ್ಮಾರಕ ಕಿ.ಹಿ.ಪ್ರಾ.ಶಾಲೆ ಅತಿಕಾರಿಬೆಟ್ಟು; ನಡುಗೋಡು ಮಿತ್ತಬೈಲು(48): ಕಾಳಜಿ ಕೇಂದ್ರ -ಹಳೆಯ ಪಂಚಾಯತ್ ಕಚೇರಿ ನಡುಗೋಡು; ಕಿಲೆಂಜಾರು ಮಾಡದ ಹೌಸ್ (40): ಕಾಳಜಿ ಕೇಂದ್ರ -ಸರಕಾರಿ ಹಿ. ಪ್ರಾ. ಶಾಲೆ. ಕಿಲೆಂಜಾರು; ಬಪ್ಪನಾಡು(180): ಕಾಳಜಿ ಕೇಂದ್ರ -ಸರಕಾರಿ ಹಿ.ಪ್ರಾ.ಶಾಲೆ (ಬೋರ್ಡ್‌ಶಾಲೆ) ಬಪ್ಪನಾಡು; ಮದಿ ಕೆಳಗಿನಕೆರೆ ಉಳಿಯ ಹೊಳೆ ಬದಿ (240): ಕಾಳಜಿ ಕೇಂದ್ರ -ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಅಡೂxರು, ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ತಾರಿಕರಿಯ; ಮಾರನಕರಿಯ ದೋಣಿಂಜೆ ಕೊಳದ ಹೊಳೆಬದಿ ಕಾರಮೊಗರು (255): ಕಾಳಜಿ ಕೇಂದ್ರ -ಸರಕಾರಿ ಹಿ.ಪ್ರಾ.ಶಾಲೆ ಗುರುಪುರ; ಉಳಾಯಿಬೆಟ್ಟು (78): ಕಾಳಜಿ ಕೇಂದ್ರ -ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಉಳಾಯಿಬೆಟ್ಟು; ಅದ್ಯಪಾಡಿ(168 ): ಕಾಳಜಿ ಕೇಂದ್ರ -ದ.ಕ.ಜಿ.ಪಂ. ಹಿ,ಪ್ರಾ.ಶಾಲೆ ಅದ್ಯಪಾಡಿ; ಅಡ್ಯಾರ್ ಗುತ್ತು, ಆಚಾರಿಪಾಲು, ಬದ್ರಿಯಾಬೆಟ್ಟು,ವಳಚ್ಚಿಲು (320): ಕಾಳಜಿ ಕೇಂದ್ರ -ಗ್ರಾಮ ಪಂಚಾಯತ್ ಅಡ್ಯಾರ್; ಮಳವೂರು, ಕೆಂಜಾರು (500): ಕಾಳಜಿ ಕೇಂದ್ರ -ದ.ಕ.ಜಿ.ಪಂ. ಹಿ,ಪ್ರಾ.ಶಾಲೆ ಕರಂಬಾರ್, ದೇಲಂತಬೆಟ್ಟು , ಸೂರಿಂಜೆ (275): ಕಾಳಜಿ ಕೇಂದ್ರ -ಪಂಚಾಯತ್ ಕಚೇರಿ ಸೂರಿಂಜೆ; ಕೆಳಗಿನ ತೋಕೊರು, ಉಳಿಯ (1,250): ಕಾಳಜಿ ಕೇಂದ್ರ -ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಜೋಕಟ್ಟೆ; ಚೇಳಾçರು, ಮಧ್ಯ(290): ಕಾಳಜಿ ಕೇಂದ್ರ – ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಚೇಳಾçರು, ಕೆಂಜಾರು ಗ್ರಾಮ (420): ಕಾಳಜಿ ಕೇಂದ್ರ -ಅನುದಾನಿತ ಹಿ.ಪ್ರಾ. ಶಾಲೆ ಉಳಿಯ ಕೆಂಜಾರು, ಮೂಡುಶೆಡ್ಡ,ಪಡುಶೆಡ್ಡೆ (200): ಕಾಳಜಿ ಕೇಂದ್ರ- ಬಿ.ಎಚ್.ಎಸ್. ಶಾಲೆ ಮೂಡುಶೆಡ್ಡೆ.
ಬಾಧಿತವಾಗುವ ಪ್ರದೇಶ, ಕಾಳಜಿ ಕೇಂದ್ರಗಳು: ಪಾಲಿಕೆ ವ್ಯಾಪ್ತಿ :
ನೆರೆ ಬಾಧಿತ ಪ್ರದೇಶ -ಕಸ್ಬಾ ಬೆಂಗ್ರೆ (ಬಾಧಿತರಾಗುವ ಜನಸಂಖ್ಯೆ-260): ಕಾಳಜಿ ಕೇಂದ್ರ- ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಬೆಂಗ್ರೆ, ಪಾಂಡೇಶ್ವರ ರೈಲ್ವೇಗೇಟ್ ಬಳಿ (90), ಕಾಳಜಿ ಕೇಂದ್ರ -ದ.ಕ.ಜಿ.ಪಂ.ಹಿ. ಪ್ರಾ.ಶಾಲೆ ಪಾಂಡೇಶ್ವರ; ಹೊಗೆ ಬಜಾರ್ ಜಿ.ಎಚ್.ಶಾಲೆ ಹಿಂಭಾಗ ಪ್ರದೇಶ-(100), ಹೊಗೆ ಬಜಾರ್ ಧೂಮಾವತಿ ದೈವಸ್ಥಾನದ ಹಿಂಭಾಗದಲ್ಲಿರುವ ಪ್ರದೇಶ (125). ಕಾಳಜಿ ಕೇಂದ್ರ -ದ.ಕ.ಜಿ.ಪಂ. ಶಾಲೆ ಹೊಗೆ ಬಜಾರ್; ಬೊಕ್ಕಪಟ್ಣ, ಕುದ್ರೋಳಿ (100): ಕಾಳಜಿ ಕೇಂದ್ರ -ದ.ಕ.ಜಿ.ಪಂ. ಶಾಲೆ ಬೊಕ್ಕಪಟ್ಣ; ಜಪ್ಪಿನಮೊಗರು-ಕಡೆಕಾರ್, ಕಟ್ಟಪುಣಿ, ಸಿಟಿ ಪ್ರದೇಶ, ಆಡಂ ಕುದ್ರು ಪ್ರದೇಶಗಳು (700): ಕಾಳಜಿ ಕೇಂದ್ರ -ದ.ಕ.ಜಿ.ಪಂ. ಹಿ,ಪ್ರಾ.ಶಾಲೆ ಬಜಾಲ್; ಬಜಾಲ್ ಪಡ್ಪು (75): ಕಾಳಜಿ ಕೇಂದ್ರ -ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಬಜಾಲ್; ಕುಳೂರು ಜಂಕ್ಷನ್ ಪಡುಕೋಡಿ (80): ಕಾಳಜಿ ಕೇಂದ್ರ -ಚರ್ಚ್‌ಸ್ಕೂಲ್ ಕುಳೂರು; ಮೇಲುಕೊಪ್ಪಳ, ಅತ್ರೆಬೈಲು (715): ಕಾಳಜಿ ಕೇಂದ್ರ -ಸರಕಾರಿ ಹಿ.ಪ್ರಾ.ಶಾಲೆ ಪಂಜಿಮೊಗರು ವಿದ್ಯಾನಗರ, ಹಿ.ಪ್ರಾ.ಶಾಲೆ ಮರಕಡ; ತಣ್ಣೀರುಬಾವಿ (325): ಕಾಳಜಿ ಕೇಂದ್ರ- ಕುಳೂರು ಚರ್ಚ್ ಹಿ.ಪ್ರಾ.ಶಾಲೆ.
ಮಂಗಳೂರು ತಾಲೂಕಿನಲ್ಲಿ ಪಾಲಿಕೆ, ಗ್ರಾಮಾಂತರ ಪ್ರದೇಶಗಳಲ್ಲಿ ನೆರೆ ಬಾಧಿತ ಪ್ರದೇಶಗಳನ್ನು ಗುರುತಿಸಲಾಗಿದೆ. ನೆರೆ ಬರುವ ಸಂದರ್ಭಗಳಲ್ಲಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಸ್ಥಳೀಯವಾಗಿ ಹತ್ತಿರ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಇವುಗಳಿಗೆ ನೋಡಲ್ ಅಧಿಕಾರಿಗಳನ್ನು ಕೂಡ ನೇಮಿಸಲಾಗಿದೆ. ಪಾಲಿಕೆ, ಎಲ್ಲ ಗ್ರಾ.ಪಂ.ಗಳಲ್ಲಿ ವಿಪತ್ತು ನಿರ್ವಹಣೆ ಸಮಿತಿಗಳಿದ್ದು, ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸುತ್ತವೆ. –ಗುರುಪ್ರಸಾದ್, ತಹಶೀಲ್ದಾರ್ ಮಂಗಳೂರು ತಾಲೂಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್ ಲೈಟ್ ಉರಿಯುತ್ತಿಲ್ಲ!
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.