ಪ್ರತಿದಿನ ಪಂಪಿಂಗ್ ವೇಳೆ 5- 6 ಎಂಎಲ್‌ಡಿ ನೀರು ವ್ಯರ್ಥ
Team Udayavani, May 22, 2019, 6:00 AM IST
ಮಹಾನಗರ: ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ನಗರದ ಜನರಿಗೆ ನೀರಿಲ್ಲದ ಪರಿಸ್ಥಿತಿ ಕೆಲವು ದಿನಗಳಿಂದ ನಿರ್ಮಾಣವಾಗಿದೆ. ಆದರೆ ತುಂಬೆ ಡ್ಯಾಂನಿಂದ ಪಂಪಿಂಗ್ ಮಾಡಿ ಶುದ್ಧೀಕರಣಗೊಳ್ಳುವಾಗ, ಒಟ್ಟು 160 ಎಂಎಲ್‌ಡಿ ನೀರಿನ ಪೈಕಿ ಪ್ರತಿದಿನ ಸುಮಾರು 5ರಿಂದ 6 ಎಂಎಲ್‌ಡಿಯಷ್ಟು ಪ್ರಮಾಣದ ನೀರು ವ್ಯರ್ಥವಾಗಿ ಕಡಲು ಸೇರುತ್ತಿದೆ ಎನ್ನುವುದು ವಾಸ್ತವ!
“ನಗರದಲ್ಲಿ ನೀರಿಲ್ಲ’ ಎಂಬ ಗಂಭೀರ ಸ್ಥಿತಿ ಇರುವ ಈ ಕಾಲದಲ್ಲಿಯೂ ಪ್ರತೀ ದಿನ ಲಕ್ಷ-ಲಕ್ಷ ಲೀಟರ್ ನೀರು ನಗರದ ಜನರಿಗೆ ಸಿಗದೆ, ಮತ್ತೆ ನದಿ ಸೇರಿ - ಕಡಲು ಪಾಲಾಗುತ್ತಿದೆ. ಶುದ್ಧೀಕರಣ ವೇಳೆ ವ್ಯರ್ಥವಾಗಿ ಹರಿದು ಹೋಗುವ ಈ ನೀರನ್ನು ಮರುಬಳಕೆ ಮಾಡುವ ನಿಟ್ಟಿನಲ್ಲಿ ಘಟಕವೊಂದು ನಿರ್ಮಾಣ ವಾಗಲಿದೆ ಎಂದು ಪಾಲಿಕೆ ಕೆಲವು ವರ್ಷದಿಂದ ಹೇಳುತ್ತಿದ್ದರೂ ಇನ್ನೂ ಕಾರ್ಯಗತಗೊಂಡಿಲ್ಲ. ಆಡಳಿತ ವ್ಯವಸ್ಥೆ ಈ ಬಗ್ಗೆ ಗಮನಹರಿಸಿದಂತಿಲ್ಲ.ಹಲವು ವರ್ಷ ಗಳಿಂದ ನೀರು ಅದೆಷ್ಟು ಪ್ರಮಾಣದಲ್ಲಿ ವ್ಯರ್ಥವಾಗಿದೆಯೋ ಎಂಬುದೇ ಸದ್ಯದ ಪ್ರಶ್ನೆ.
ವ್ಯರ್ಥವಾಗುವುದು ಹೇಗೆ?
ತುಂಬೆ ಡ್ಯಾಂನಿಂದ 160 ಎಂಎಲ್‌ಡಿ (ರೇಷನಿಂಗ್ ಇಲ್ಲದ ದಿನ) ನೀರನ್ನು ಪ್ರತೀ ದಿನ ಪಂಪಿಂಗ್ ಮಾಡಲಾಗುತ್ತದೆ. ಪಂಪಿಂಗ್ ಮಾಡಿದ ನೀರು ನೇರವಾಗಿ ಹತ್ತಿರದ ರಾಮಲ್‌ಕಟ್ಟೆಯ 2 ಶುದ್ಧೀಕರಣ ಘಟಕಕ್ಕೆ ಸರಬರಾಜಾಗುತ್ತದೆ. ಈ ಪೈಕಿ “ಹೊಸ ಘಟಕ’ವೊಂದರಲ್ಲಿ ನೀರು ಶುದ್ಧೀಕರಣ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತದೆ. ಇಲ್ಲಿ ಮೂರು ಹಂತದಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಬಳಿಕ ನೀರು ಪಡೀಲ್‌ನ ಟ್ಯಾಂಕ್ ಸೇರುತ್ತದೆ. ಶುದ್ಧೀಕರಣಗೊಳ್ಳದ, ಮಣ್ಣು ಮಿಶ್ರಿತವಾಗಿರುವ ಸುಮಾರು 5-6 ಎಂಎಲ್‌ಡಿಯಷ್ಟು ನೀರು ಮಾತ್ರ ವ್ಯರ್ಥವಾಗುತ್ತದೆ. ಇಂತಹ ನೀರನ್ನು ಶುದ್ಧೀಕರಣ ಘಟಕದಿಂದ ಹೊರಗೆ ಬಿಡಲಾಗುತ್ತದೆ. ಹೀಗೆ ತೋಡಿನಲ್ಲಿ ಸಾಗುವ ನೀರು ವಳವೂರು, ನಡಿಬೆಟ್ಟು, ಬ್ರಹ್ಮರಕೂಟ್ಲುವಿನಲ್ಲಿರುವ ಹಾಲ್‌ನ ಪಕ್ಕದಿಂದಾಗಿ ತುಂಬೆ ಡ್ಯಾಂನ ಸುಮಾರು 150 ಮೀಟರ್ ಮುಂಭಾಗದಲ್ಲಿ ನದಿಗೆ ಸೇರುತ್ತಿದೆ. ಅಲ್ಲಿಂದ ಕಡಲಿಗೆ ನೀರು ಹರಿಯುತ್ತಿದೆ. ಈ ಮಧ್ಯೆ ರಾಮಲ್‌ಕಟ್ಟೆಯಲ್ಲಿರುವ ಹಳೆಯ ಶುದ್ಧೀಕರಣ ಘಟಕದಿಂದ ನೀರು ನೇರವಾಗಿ ಬೆಂದೂರ್‌ವೆಲ್, ಪಣಂಬೂರು ಹೋಗಿ ಅಲ್ಲಿ ಶುದ್ಧೀಕರಣಗೊಳ್ಳುತ್ತದೆ. ಅಲ್ಲಿಯೂ ಇಷ್ಟೇ ಪ್ರಮಾಣದ ನೀರು ವ್ಯರ್ಥ ವಾಗುತ್ತದೆ. ರಾಮಲ್‌ಕಟ್ಟೆಯ ಹಳೆ ಘಟಕದಲ್ಲಿಯೂ ಸ್ವಲ್ಪ ಪ್ರಮಾಣದ ನೀರು ವ್ಯರ್ಥವಾಗಿ ನದಿ ಸೇರುತ್ತಿದೆ.
ವಳವೂರು-ನಡಿಬೆಟ್ಟುವಿನ ಗೋಳು ಕೇಳುವವರಾರು?
ಪಾಲಿಕೆಯ ಶುದ್ಧ ನೀರಿನ ಘಟಕದಿಂದ ಹೊರಬಿಡುವ ನೀರಿನ ಪ್ರಮಾಣ ಅಧಿಕವಿರುವ ಕಾರಣದಿಂದ ರಾಮಲ್‌ಕಟ್ಟೆ, ವಳವೂರು, ನಡಿಬೆಟ್ಟು ವ್ಯಾಪ್ತಿಯ ಸಾರ್ವಜನಿಕರಿಗೆ ನಿತ್ಯ ಸಮಸ್ಯೆ ಆಗುತ್ತಿದೆ. ಘಟಕದಿಂದ ಹೊರಬಂದ ನೀರು ರಭಸವಾಗಿ ಈ ವ್ಯಾಪ್ತಿಯ ಮನೆಯ ಬದಿಯಲ್ಲಿರುವ ಮಳೆ ನೀರು ಹರಿಯುವ ತೋಡು ಸೇರುವ ಕಾರಣ ಸ್ಥಳೀಯರ ಭೂಮಿ ಕೊರೆತ ಸಮಸ್ಯೆಯಾಗಿ, ತೋಟ- ಮನೆಗಳಿಗೂ ಹಾನಿಯಾಗಿದೆ. ತೋಡಿನ ಬದಿಯಲ್ಲಿದ್ದ ಒಂದು ಬಾವಿಗೆ ನೀರಿನ ಜತೆಗೆ ಮಣ್ಣು ಬಿದ್ದು, ಬಾವಿ, ಹತ್ತಿರದ ಎರಡು ಕೆರೆಗಳು ಕೂಡ ಮಣ್ಣಿನಲ್ಲಿ ಮುಚ್ಚಿಹೋಗಿವೆ. ಸ್ಥಳೀಯರು ಈ ಬಗ್ಗೆ ಸಚಿವ ಖಾದರ್, ಜಿಲ್ಲಾಡಳಿತ, ಮನಪಾದ ಜತೆಗೆ ಸುದೀರ್ಘ ಕಾಲದಿಂದ ಮನವಿ ಮಾಡುತ್ತ ಬಂದಿದ್ದರೂ ಇನ್ನೂ ಪರಿಹಾರ ಅಥವಾ ಸಮಸ್ಯೆ ನಿವಾರಣೆ ಆಗಿಲ್ಲ.
ಸದ್ಯ ನೀರು ಸ್ವಲ್ಪ ಪ್ರಮಾಣದಲ್ಲಿ ನದಿಗೆ ಸೇರುತ್ತಿದ್ದರೆ, ಮಳೆಗಾಲದಲ್ಲಿ ಮಾತ್ರ ಇದರ ಪ್ರಮಾಣ ಯಥೇತ್ಛವಿದೆ. ಮಳೆ ನೀರು ಹರಿಯುವ ಜತೆಗೆ ತೋಡಿನಲ್ಲಿ ಘಟಕದ ವ್ಯರ್ಥ ನೀರು ಕೂಡ ಹರಿಯುವುದರಿಂದ ಇಲ್ಲಿನ ಮನೆಮಂದಿಗೆ ಸಮಸ್ಯೆ ಕಟ್ಟಿಟ್ಟಬುತ್ತಿ. ಕೆಲವು ಮನೆಗಳಿಗೆ ನೀರು ನುಗ್ಗುವ ಪ್ರಮೇಯವಿದೆ.
ಬ್ಯಾಕ್ ವಾಷ್ ಟ್ರೀಟ್‌ಮೆಂಟ್ ಫೆಸಿಲಿಟಿ ಪ್ಲ್ಯಾಂಟ್
ತುಂಬೆ ಸಮೀಪದ ರಾಮಲ್‌ಕಟ್ಟೆಯಲ್ಲಿ ಶುದ್ಧೀಕರಣ ಘಟಕದಿಂದ ವ್ಯರ್ಥವಾಗಿ ಹೊರಗೆ ಹೋಗುವ ನೀರನ್ನು ಮರು ಶುದ್ಧೀಕರಿಸಿ ಬಳಕೆ ಮಾಡುವ ಬಗ್ಗೆ ಪಾಲಿಕೆ ಈ ಹಿಂದೆಯೇ ನಿರ್ಧರಿಸಿದೆ. ಇದಕ್ಕಾಗಿ ಘಟಕದ ಸಮೀಪದಲ್ಲಿ ಭೂಮಿ ಖರೀದಿಗೆ ಮುಂದಾಗಿದೆ. “ಬ್ಯಾಕ್ ವಾಷ್ ಟ್ರೀಟ್‌ಮೆಂಟ್ ಫೆಸಿಲಿಟಿ ಪ್ಲ್ಯಾಂಟ್’ ಎಂಬ ನೂತನ ಘಟಕ ನಿರ್ಮಾಣವಾಗಲಿದೆ. ಶುದ್ಧೀಕರಣಗೊಂಡ ಬಳಿಕ ವ್ಯರ್ಥವಾಗುವ ನೀರನ್ನು ಇಲ್ಲಿ ಮರು ಶುದ್ಧೀಕರಿಸಲು ಉದ್ದೇಶಿಸಲಾಗಿದೆ. ಈ ಮೂಲಕ ವ್ಯರ್ಥವಾಗಿ ಹೋಗುವ ನೀರು ಮರುಬಳಕೆ ಸಾಧ್ಯ ಎಂಬುದು ಪಾಲಿಕೆಯ ವಾದ. ನೇತ್ರಾವತಿಯಲ್ಲಿ ಹರೇಕಳ ಡ್ಯಾಂ ನಿರ್ಮಾಣವಾಗುವ ಕಾಲಕ್ಕೆ ತುಂಬೆಯ ವ್ಯರ್ಥ ನೀರನ್ನು ನದಿಗೆ ಬಿಡುವಂತಿಲ್ಲವಾದ್ದರಿಂದ ಹೊಸ ಪ್ಲ್ಯಾಂಟ್ ನಿರ್ಮಾಣ ಬೇಗನೆ ಮಾಡಬೇಕಿದೆ. ಸದ್ಯ ಬೆಂಗಳೂರು ಸಹಿತ ವಿವಿಧ ನಗರಗಳಲ್ಲಿ ಇಂತಹ ಘಟಕ ಕಾರ್ಯಾಚರಿಸುತ್ತಿದೆ.
ಪರಿಶೀಲಿಸಿ ಕ್ರಮ
ಶುದ್ಧೀಕರಣ ಘಟಕದಲ್ಲಿ ಸ್ವಲ್ಪ ಪ್ರಮಾಣದಷ್ಟು ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ ಎಂಬ ವಿಚಾರದ ಬಗ್ಗೆ ಪಾಲಿಕೆ ಅಧಿಕಾರಿಗಳ ಜತೆಗೆ ಮಾತುಕತೆ ಮಾಡಲಾಗುವುದು. ಸದ್ಯಕ್ಕೆ ಆ ನೀರನ್ನು ಮರುಬಳಕೆ ಮಾಡಲು ಅಥವಾ ಇತರ ಬಳಕೆಗೆ ಸಾಧ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುವುದು.
-ನಾರಾಯಣಪ್ಪ , ಮನಪಾ ಆಯುಕ್ತರು
- ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.