500 ಸುಧಾರಿತ ಸಾಂಪ್ರದಾಯಿಕ ಕಟ್ಟಗಳ ನಿರ್ಮಾಣ ಗುರಿ: ಡಾ| ರವಿ
Team Udayavani, Sep 4, 2017, 8:10 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಲಸಂರಕ್ಷಣೆ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರತಿ ತಾಲೂಕಿನಲ್ಲಿ ತಲಾ 100ರಂತೆ 500 ಸುಧಾರಿತ ಸಾಂಪ್ರದಾಯಿಕ ಕಟ್ಟಗಳನ್ನು (ತೋಡುಗಳು ಹಾಗೂ ತೊರೆಗಳಲ್ಲಿ ತಡೆ ನಿರ್ಮಿಸಿ ನೀರು
ನಿಲ್ಲಿಸುವ ಪಾರಂಪರಿಕ ವ್ಯವಸ್ಥೆ) ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್. ರವಿ ತಿಳಿಸಿದರು.
ಸಾಂಪ್ರದಾಯಿಕ ಕಟ್ಟಗಳ ನಿರ್ಮಾಣ ಕುರಿತು ಜಿ.ಪಂ. ಸಭಾಂಗಣದಲ್ಲಿ ಮಂಗಳೂರು ತಾಲೂಕಿನ ಜನಪ್ರತಿನಿಧಿಗಳಿಗೆ, ಪಿಡಿಒಗಳಿಗೆ ನಡೆದ ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡಿದರು.
ನರೇಗಾದಡಿ ಜಿಲ್ಲೆಯಲ್ಲಿ 1,000 ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಗುರಿ ಹೊಂದಲಾಗಿದ್ದು ಪ್ರಗತಿಯಲ್ಲಿದೆ. ಮಾರ್ಚ್‌ನೊಳಗೆ ಇವುಗಳನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು. ಇದೇ ಅವಧಿಯಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಸಾಧ್ಯವಿಲ್ಲದ ಕಡೆಗಳಲ್ಲಿ ಸುಧಾರಿತ ಸಾಂಪ್ರದಾಯಿಕ ಕಟ್ಟಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು ಗ್ರಾ.ಪಂ. ಪಿಡಿಒಗಳು, ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿ ಸೂಕ್ತ ಸ್ಥಳ ಗುರುತಿಸುವ ಕೆಲಸ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಸರಕಾರದ ಪ್ರೋತ್ಸಾಹ ಅಗತ್ಯ
ಬೋರ್‌ವೆಲ್‌ಗಳನ್ನು ಕೊರೆಯುವ ಬದಲು ನೂರಾರು ವರ್ಷಗಳಿಂದ ರೈತರು ನೀರು ಸಂರಕ್ಷಣೆಗೆ ಅನುಸರಿಸುತ್ತಾ ಬಂದಿರುವ ಪಾರಂಪರಿಕ ಕಟ್ಟಗಳನ್ನು ನಿರ್ಮಿಸುವ ಕಾರ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಕಿಂಡಿ ಅಣೆಕಟ್ಟುಗಳ ಗುಣಮಟ್ಟಕ್ಕೆ ಹೋಲಿಸಿದರೆ, ಸಾಂಪ್ರದಾಯಿಕ ಕಟ್ಟಗಳು ಜಲ ಸಂರಕ್ಷಣೆಯಲ್ಲಿ ಪರಿಣಾಮಕಾರಿ ಎಂದು ಸಂಪನ್ಮೂಲ ವ್ಯಕ್ತಿ ವಾರಣಾಶಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ| ವಾರಣಾಶಿ ಕೃಷ್ಣಮೂರ್ತಿ ಹೇಳಿದರು. ಜಲಸಾಕ್ಷರತಾ ಅಧಿಕಾರಿ ಸುಧಾಕರ್ ಯೋಜನೆಯ ಮಾಹಿತಿ ನೀಡಿದರು. ಮಂಗಳೂರು ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಜಿ.ಪಂ. ಸಹಾಯಕ ಕಾರ್ಯದರ್ಶಿ, ತಾಂತ್ರಿಕ ಸಲಹೆಗಾರ ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
1,500 ಕಿಂಡಿ ಅಣೆಕಟ್ಟುಗಳಿಗೆ ಪುನಶ್ಚೇತನ
ದ.ಕ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ನಿರ್ಮಿಸಿರುವ ಸುಮಾರು 1,500 ಕಿಂಡಿ ಅಣೆಕಟ್ಟುಗಳು ನಾದುರಸ್ತಿಯಲ್ಲಿವೆ. ಇವುಗಳನ್ನು ದುರಸ್ತಿಗೊಳಿಸಿ ಪುನಶ್ಚೇತನ ನೀಡಲು ನಿರ್ಧರಿಸಲಾಗಿದೆ. ಇದಲ್ಲದೆ ನರೇಗ ಯೋಜನೆಯಲ್ಲಿ ಸುಮಾರು 1,000 ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳು ಒಟ್ಟು ಸೇರಿದರೆ ಈ ವರ್ಷಹೊಸದಾಗಿ ಸುಮಾರು 2,500 ಕಿಂಡಿಅಣೆಕಟ್ಟುಗಳು ಜಲಸಂರಕ್ಷಣೆ ಹಾಗೂ ಕೃಷಿಗೆ ಲಭ್ಯವಾಗಲಿವೆ ಎಂದು ಜಿ.ಪಂ. ಸಿಇಒ ಡಾ| ಎಂ.ಆರ್. ರವಿ ವಿವರಿಸಿದರು.
ಸಾಂಪ್ರದಾಯಿಕ ಕಟ್ಟಗಳು
ಕರಾವಳಿಯಲ್ಲಿ ಹಿಂದೆ ಕೃಷಿಗೆ ಪಾರಂಪರಿಕ ಕಟ್ಟಗಳೇ ಜೀವಾಳವಾಗಿದ್ದವು. ತೋಡು, ತೊರೆಗಳಿಗೆ ಸಾಮಾನ್ಯವಾಗಿ ಡಿಸೆಂಬರ್ ಅಂತ್ಯ ಅಥವಾ ಜನವರಿಯಲ್ಲಿ ಕಟ್ಟಗಳನ್ನು ನಿರ್ಮಿಸಿ ಕೃಷಿಗೆ ನೀರುಣಿಸಲಾಗುತ್ತಿತ್ತು. ಮಳೆ ಬಂದೊಡನೆ ಅವುಗಳನ್ನು ಕಡಿದುಬಿಡಲಾಗುತ್ತಿತ್ತು. ಸೊಪ್ಪು, ಮರದ ಬಳ್ಳಿ, ಮರದ ಗೂಟ, ಕಲ್ಲು, ಮಣ್ಣು ಮುಂತಾದುವುಗಳನ್ನು ಬಳಸಿ ಕಟ್ಟಗಳನ್ನು ಕಟ್ಟಲಾಗುತ್ತಿತ್ತು. ಈಗ ಇವುಗಳಲ್ಲಿ ಸುಧಾರಣೆಯಾಗಿದ್ದು ಪ್ಲಾಸ್ಟಿಕ್ ಶೀಟುಗಳು, ಮರಳು ಮುಂತಾದುವುಗಳನ್ನು ಬಳಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ವನರಾಯಿ ಪ್ರತಿಷ್ಠಾನ ಪಾರಂಪರಿಕ ಕಟ್ಟಗಳ ನಿರ್ಮಾಣ ಆಂದೋಲನವನ್ನು 1986ರಿಂದ ಕೈಗೊಂಡಿದ್ದು ಈವರೆಗೆ 3,50,000 ಕಟ್ಟಗಳನ್ನು ನಿರ್ಮಿಸಲಾಗಿದೆ. ಎಂದು ಡಾ| ವಾರಣಾಶಿ ಕೃಷ್ಣಮೂರ್ತಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.