![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 2, 2019, 9:03 AM IST
ಮೂಲ್ಕಿ: ಎರಡು ವರ್ಷಗಳಿಂದ ಕೊಲೆ, ಸುಲಿಗೆ ಮುಂತಾದ ಹಲವು ಅಪರಾಧ ಕೃತ್ಯಗಳ ಮೂಲಕ ಠಾಣಾ ವ್ಯಾಪ್ತಿಯ ಜನರಲ್ಲಿ ಭಯದ ವಾತಾವರಣ ಮೂಡಿಸಿ, ಪೊಲೀಸರಿಗೆ ಸವಾಲಾಗಿದ್ದ ಆರು ಮಂದಿಯ ತಂಡವನ್ನು ಬಂಧಿಸುವಲ್ಲಿ ಮೂಲ್ಕಿ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಅವರ ನೇತೃತ್ವದ ತಂಡ ಯಶಸ್ವಿಯಾಗಿದೆ.
ಪಡುಬಿದ್ರಿ ಕಂಚಿನಡ್ಕದ ಮಹಮ್ಮದ್ ಅನೀಸ್ (24), ಬಜಪೆ ಜೋಕಟ್ಟೆಯ ಶೌಕತ್ ಅಲಿ (32), ಹಳೆಯಂಗಡಿ ಸಂತೆಕಟ್ಟೆಯ ಝಾಕೀರ್ ಹುಸೇನ್(20), ಮೂಲ್ಕಿ ಕೊಲಾಡು ಕೆ.ಎಸ್. ನಗರದ ಮಹಮ್ಮದ್ ಅನ್ವರ್ (26), ಹಳೆಯಂಗಡಿ ಇಂದಿರಾ ನಗರದ ಮೆಹರಾಜ್ (26) ಮತ್ತು ಪಡುಪಣಂಬೂರಿನ ಓರ್ವ ಬಾಲಕ ಬಂಧಿತರು.
ಜು. 30ರಂದು ಹೆದ್ದಾರಿ ತಪಾಸಣೆಯಲ್ಲಿದ್ದ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಅವರಿಗೆ ಈ ಕೃತ್ಯದ ಸೂತ್ರಧಾರರಾದ ಮಹಮ್ಮದ್ ಅನೀಸ್ ಮತ್ತು ಶೌಕತ್ ಅಲಿ ಅವರು ಸಿಕ್ಕಿ ಬಿದ್ದಿದ್ದರು. ಅವರನ್ನು ವಿಚಾರಿಸಿದಾಗ ಇತರ ಆರೋಪಿಗಳ ಮಾಹಿತಿ ಸಿಕ್ಕಿತ್ತು.
ಬಂಧಿತರಿಂದ 3 ಲ.ರೂ. ಮೌಲ್ಯದ ಆಭರಣ, ದರೋಡೆಗೆ ಬಳಸಿದ್ದ ವಾಹನಗಳು, ಮೊಬೈಲ್‌ಗಳು ಮುಂತಾದವುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
ಮಂಗಳೂರು ಕಮಿಷನರ್ ಸಂದೀಪ್ ಪಾಟೀಲ್ ಅವರ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷಿ ಗಣೇಶ್ ಅವರ ಮಾರ್ಗದರ್ಶನದಲ್ಲಿ ಪಣಂಬೂರು ಎ.ಸಿ.ಪಿ. ಶ್ರೀನಿವಾಸ ಗೌಡ ಅವರ ನೇತೃತ್ವದಲ್ಲಿ ಮೂಲ್ಕಿ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಅವರ ನಾಯಕತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಸ್‌ಐ ಶೀತಲ್ ಅಲಗೂರು, ಎಎಸ್‌ಐ ಚಂದ್ರಶೇಖರ್ ಮತ್ತು ಕೇಶವ, ಎಚ್.ಸಿ.ಗಳಾದ ಧರ್ಮೇಂದ್ರ, ಶಶಿಧರ, ಸುಧೀರ್, ವಾದಿರಾಜ, ಮೆಲ್ವಿನ್ ಪಿಂಟೋ, ಉಮೇಶ್ ಗೌಡ, ಚಂದ್ರಶೇಖರ್ ಮತ್ತು ಮಹೇಶ್ ಹಾಗೂ ಪಿ.ಸಿ.ಗಳಾದ ಸುರೇಶ್ ಮತ್ತು ರಾಜೇಶ್ ಪಾಲ್ಗೊಂಡಿದ್ದರು.
ತಂಡದ ಮೇಲಿನ ಪ್ರಮುಖ ಆರೋಪಗಳು
2017ರಲ್ಲಿ ಐಕಳದ ಮನೆಯೊಂದರಲ್ಲಿ ಒಂಟಿಯಾಗಿದ್ದ ವಸಂತಿ ಶೆಟ್ಟಿ (60) ಮನೆಗೆ ಕರೆಂಟ್ ಬಿಲ್ ಕೇಳುವ ನೆಪದಲ್ಲಿ ಬಂದು ಕುಡಿಯಲು ನೀರು ಕೇಳಿ ಅವರ ಕುತ್ತಿಗೆ ಸೀಳಿ ಕೊಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿದ್ದು, ಹಳೆಯಂಗಡಿಯ ಪಕ್ಷಿಕೆರೆ ಬಳಿಯ ಕಾವೇರಿ (60) ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಲೂಟಿ ಮಾಡಿದ್ದು, ಕೊಲಾ°ಡು ಗುತ್ತು ಬಳಿಯ ಶಾರದಾ ಶೆಟ್ಟಿ (62) ಮನೆಗೂ ಕರೆಂಟ್ ಬಿಲ್ ನೆಪದಲ್ಲಿ ಬಂದು ನೀರು ಕೇಳಿ ಹಲ್ಲೆ ನಡೆಸಿ ಚಿನ್ನಾಭರಣ ಲೂಟಿ ಮಾಡಿದ್ದು ಸಹಿ ತ ಮೂಲ್ಕಿ, ಶಿರ್ವ, ಪಾಂಡೇಶ್ವರ, ಬಂದರು ಮುಂತಾದ ಠಾಣಾ ವ್ಯಾಪ್ತಿಯಲ್ಲಿ ಹಲವು ಕಳ್ಳತನದ ಆರೋಪಗಳು ಈ ತಂಡದ ಮೇಲಿವೆ.
ಇನ್ನಷ್ಟು ಪ್ರಕರಣ ಬಯಲಿಗೆ?
ಬಂಧಿತರಿಗೆ ಯಾವುದೇ ಉದ್ಯೋಗ ಇರದಿದ್ದರೂ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬುದು ತನಿಖೆ ಯಿಂದ ತಿಳಿದು ಬಂದಿದೆ. ಇವರಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ನಿರೀ ಕ್ಷೆ ಪೊಲೀಸರಲ್ಲಿದೆ. ಇವರಿಗೆ ಸಹಕರಿಸುತ್ತಿರುವ ಆರೋಪದಲ್ಲಿ ಇನ್ನೂ ಕೆಲವರು ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.