ಜಪಾನ್ ನ ಸ್ಕೌಟ್ ಜಾಂಬೂರಿಗೆ ಪುತ್ತೂರಿನ 7 ವಿದ್ಯಾರ್ಥಿಗಳು
Team Udayavani, Jul 26, 2018, 2:15 AM IST
ಪುತ್ತೂರು: ಗೈಡ್ಸ್‌ನ ಅಂತಾರಾಷ್ಟ್ರೀಯ ಖ್ಯಾತಿಯ ಜಾಂಬೂರಿ ಉತ್ಸವದಲ್ಲಿ ಪುತ್ತೂರಿನ 9 ಮಂದಿ ಆಯ್ಕೆಯಾಗಿದ್ದಾರೆ. ಇದರಲ್ಲಿ 7 ಮಂದಿ ವಿದ್ಯಾರ್ಥಿಗಳು. ಇಬ್ಬರು ಗೈಡರ್, ಆಗಸ್ಟ್ 4ರಿಂದ 10ರವರೆಗೆ ಜಪಾನ್ ನ ಸುಜು ಸಿಟಿಯಲ್ಲಿ 17ನೇ ನಿಪ್ಪಾನ್ ಜಾಂಬೂರಿ ನಡೆಯಲಿದೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಜಾಂಬೂರಿಗೆ ತೆರಳುವ ಬಗ್ಗೆ ಗೈಡ್ಸ್ ರಂಜಿತಾ ಹೇಮನಾಥ ಶೆಟ್ಟಿ ಮಾಹಿತಿ ನೀಡಿದರು.
ಅಂಬಿಕಾದ ವಿದ್ಯಾರ್ಥಿನಿ ಸುದಾನ ಶಾಲಾ ಗೈಡ್ ರಂಜಿತಾ, ಬೆಥನಿಯ ವಿದ್ಯಾರ್ಥಿ ಹಾಗೂ ಗೈಡ್‌ಗಳಾದ ವಂಶಿತಾ, ನಿಧಿ ಜಯಕುಮಾರ್, ಅರ್ಪಿತಾ ಕೆ.ಪಿ., ಸ್ಕೌಟ್ಸ್‌ನ ರಾಮಕೃಷ್ಣದ ವಿದ್ಯಾರ್ಥಿಗಳಾದ ದಿವಿತ್, ದಿರೈನ್, ಅಂಬಿಕಾದ ವಿದ್ಯಾರ್ಥಿ ಬೆಥನಿಯ ಗೈಡ್ ವಿಶಾಖ್ ನವೀನ್ ಹಾಗೂ ಗೈಡರ್ ಗಳಾದ ಶಿಕ್ಷಕಿ ಸುನಿತಾ ಹಾಗೂ ಮೈತ್ರೇಯಿ ಜಾಂಬೂರಿ ಉತ್ಸವಕ್ಕೆ ಆಯ್ಕೆ ಆಗಿದ್ದಾರೆ. ಮಂಗಳೂರು ಶಾರದಾ ವಿದ್ಯಾಲಯದ ದಿನೇಶ್ ಕಂಬಳಗದ್ದೆಯೂ ಸ್ಕೌಟರ್ ಆಗಿ ತೆರಳಲಿದ್ದಾರೆ. ಕರಾವಳಿಯಿಂದ ಆಯ್ಕೆ ಆಗಿರುವ 3 ಶಿಕ್ಷಕರು ಸಹಿತ 26 ಮಂದಿ ರಾಜ್ಯವನ್ನು, ಒಟ್ಟು 45 ಮಂದಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಜು. 30 ಹಾಗೂ 31ರಂದು ತಂಡಗಳಾಗಿ ಹೊರಡಲಿದ್ದಾರೆ ಎಂದು ವಿವರಿಸಿದರು.
ಒಟ್ಟು 216 ದೇಶಗಳು ಭಾಗವಹಿಸಲಿರುವ ಈ ಉತ್ಸವ 7 ದಿನಗಳ ಕಾಲ ನಡೆಯಲಿದೆ. ಪ್ರಕೃತಿ ವೀಕ್ಷಣೆ, ಸಾಹಸ ಕ್ರೀಡೆಗಳು, ಸಂಸ್ಕೃತಿಯ ವಿನಿಮಯ ಇಲ್ಲಿ ಪ್ರಮುಖವಾಗಿ ನಡೆಯುತ್ತವೆ. 13 ವರ್ಷ ಭರ್ತಿಯಾದವರು ಮಾತ್ರ ಈ ಉತ್ಸವಕ್ಕೆ ಆಯ್ಕೆಯಾಗುತ್ತಾರೆ. ಇದಕ್ಕೆ 40 ಸಾವಿರ ರೂ. ನೋಂದಣಿ ವೆಚ್ಚ ಭರಿಸಬೇಕು. ಒಟ್ಟು 1.5 ಲಕ್ಷ ರೂ. ಖರ್ಚು ಆಗಲಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ಇದರಿಂದ ಅನುಕೂಲಗಳಿವೆ ಎಂದು ವಿವರಿಸಿದರು.
ದಿವಿತ್ ಗೆ ದತ್ತು ಹಣ
ಪರಮೇಶ್ವರ್ ಗೆ SMS ಕಳುಹಿಸುವ ಮೂಲಕ ರಾಜ್ಯಾದ್ಯಂತ ಸುದ್ದಿಯಾಗಿದ್ದ ದಿವಿತ್ ರೈ ಈ ತಂಡದಲ್ಲಿದ್ದಾನೆ. ಈತನಿಗೆ ಅಗತ್ಯ ಹಣವನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಭರಿಸಲಿದ್ದಾರೆ. ಆದರೆ ಉಳಿದ ವಿದ್ಯಾರ್ಥಿಗಳು ತಮ್ಮ ಕೈಯಿಂದಲೇ ಇಷ್ಟು ವೆಚ್ಚವನ್ನು ಭರಿಸಬೇಕಾಗಿದೆ. ಸರಕಾರದ ಸಹಕಾರ ಸಿಕ್ಕಿದರೆ ಉತ್ತಮ ಎಂದು ವಿದ್ಯಾರ್ಥಿಗಳು ಅಭಿಪ್ರಾಯಿಸಿದ್ದಾರೆ.
ಸಿಎಂ ಭೇಟಿ
ವಿದ್ಯಾರ್ಥಿಗಳ ಒಂದು ತಂಡ ಬೆಂಗಳೂರಿನಿಂದ ಹೊರಡಲಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್ ಅವರನ್ನು ಭೇಟಿಯಾಗಲಿದೆ. ಮಂಗಳೂರಿನಲ್ಲಿ ಗೌರವ ಏರ್ಪಡಿಸಿದ್ದು, ಸಚಿವರಾದ ಯು.ಟಿ. ಖಾದರ್, ಡಾ| ಜಯಮಾಲಾ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಹರೀಶ್ ಕುಮಾರ್ ಮೊದಲಾದವರು ಶುಭ ಹಾರೈಸಿದ್ದಾರೆ ಎಂದು ತಿಳಿಸಿದರು.
ವಿದೇಶಕ್ಕೆ ಮೊದಲ ಪಯಣ
ಯಾರಿಗೂ ಸಿಗದ ಅವಕಾಶ ನಮಗೆ ಸಿಕ್ಕಿದೆ. 5ನೇ ತರಗತಿಯಿಂದಲೇ ಗೈಡ್ಸ್‌ನಲ್ಲಿದ್ದೇನೆ. ಎಷ್ಟೋ ಕ್ಯಾಂಪ್ ಗಳಲ್ಲಿ ಭಾಗವಹಿಸಿದ್ದೇನೆ. ಕ್ಯಾಂಪ್ ಗಳಲ್ಲಿ ನಿದ್ದೆ ಬಿಟ್ಟು ಕೆಲಸವನ್ನು ಮಾಡಿದ್ದೇವೆ. ಭಾರತವನ್ನು ವಿಶ್ವ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದೇವೆ ಎನ್ನುವುದೇ ಹೆಮ್ಮೆಯ ವಿಷಯ. ಪುತ್ತೂರಿನ ತಂಡದಲ್ಲಿರುವ ಎಲ್ಲರೂ ವಿದೇಶಕ್ಕೆ ಮೊದಲ ಬಾರಿಗೆ ಹೋಗುತ್ತಿದ್ದೇವೆ.
– ರಂಜಿತಾ ಹೇಮನಾಥ ಶೆಟ್ಟಿ, ಜಪಾನ್ ಜಾಂಬೂರಿಗೆ ತೆರಳಲಿರುವ ಗೈಡ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.