ಬೆಳ್ತಂಗಡಿ ತಾ|ನಲ್ಲಿ 70 ಸೂಕ್ಷ್ಮಮತಗಟ್ಟೆ; ಪದ್ಮುಂಜ ಕೂಡ ಪಟ್ಟಿಯಲ್ಲಿ


Team Udayavani, Apr 28, 2018, 8:20 AM IST

Voting-600.jpg

ಬೆಳ್ತಂಗಡಿ: ಚುನಾವಣೆಗೆ ತಾಲೂಕಿನಲ್ಲಿ ಭರದ ಸಿದ್ಧತೆ ನಡೆದಿದೆ.ತಾಲೂಕಿನಲ್ಲಿ 46 ನಕ್ಸಲ್‌ ಪೀಡಿತ ಮತ ಗಟ್ಟೆಗಳು, ಪೊಲೀಸ್‌ ಇಲಾಖೆ ಅಂದಾಜಿ ನಂತೆ ಇತರ 24 ಮತಗಟ್ಟೆ, ಚುನಾವಣ ಅಧಿಕಾರಿಗಳು 5 ಸೂಕ್ಷ್ಮಮತಗಟ್ಟೆಗಳನ್ನು ಗುರುತಿಸಿದ್ದು, ಒಟ್ಟು 70 ಸೂಕ್ಷ್ಮ ಮತಗಟ್ಟೆಗಳು ತಾಲೂಕಿನಲ್ಲಿವೆ.

ಚುನಾವಣ ಅಧಿಕಾರಿಗಳ ಲೆಕ್ಕಾಚಾರದಂತೆ ಒಟ್ಟು 5 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳಾಗಿ ಸೇರಿಸಲಾಗಿದೆ. ಇದರಲ್ಲಿ ಕಳೆದಬಾರಿ ಚುನಾವಣೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಮತದಾನವಾದ 205ನೇ ಪದ್ಮುಂಜ ಮತಗಟ್ಟೆಯೂ ಸೇರಿದೆ. ಕಳೆದ ಬಾರಿ ಚುನಾವಣೆಯಲ್ಲಿ ಇಲ್ಲಿ ಶೇ. 92.63 ಮತದಾನವಾದ ಕಾರಣ ವರ್ಗೀಕರಿಸಿ ಸೂಕ್ಷ್ಮ ಮತಗಟ್ಟೆಯಾಗಿ ಪರಿಗಣಿಸಿ ನಿಗಾವಹಿಸಲಾಗಿದೆ. 4 ಮತಗಟ್ಟೆಗಳಲ್ಲಿ ಕಳೆದ ಚುನಾವಣೆಯಲ್ಲಿ ಒಂದೇ ಅಭ್ಯರ್ಥಿಗೆ ಶೇ.75ಕ್ಕಿಂತ ಹೆಚ್ಚು ಮತದಾನವಾಗಿದ್ದು, 113ನೇ ಮತಗಟ್ಟೆ ಪಿಲಿಚಾಮುಂಡಿಕಲ್ಲು, 51ನೇ ಮತಗಟ್ಟೆ ಪೇಂದಡ್ಕ, 85ನೇ ಮತಗಟ್ಟೆ ಗಂಡಿಬಾಗಿಲು, 221ನೇ ಕರಾಯ ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ.

ಕೆಮರಾ ಕಣ್ಗಾವಲು
46 ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ವಿಶೇಷವಾಗಿ 20ರಿಂದ 24 ಮತಗಟ್ಟೆಗಳಲ್ಲಿ ಅರೆಸೇನಾ ಪಡೆಗಳ ಸಿಬಂದಿ ವಿಶೇಷ ಭದ್ರತೆ ನಿಯೋಜಿಸುವ ಜತೆಗೆ ಸಿಸಿ ಕೆಮರಾ ಕಣ್ಗಾವಲಿಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಮೈಕ್ರೋಅಬ್ಸರ್‌ವರ್ಸ್‌ ನೇಮಿಸಲಾಗಿದ್ದು, ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ.

ಬಂತು ಮತಯಂತ್ರ
ತಾಲೂಕಿಗೆ ಈಗಾಗಲೇ ಮತಯಂತ್ರ ಗಳು ಆಗಮಿಸಿವೆ. ಮತಯಂತ್ರಗಳನ್ನು ಉಜಿರೆಯಲ್ಲಿರುವ ಎಸ್‌.ಡಿ.ಎಂ. ಪಿಯು ಕಾಲೇಜಿನಲ್ಲಿ ಇಡಲಾಗಿದೆ. ಬಳಿಕ ಇಲ್ಲಿಯೇ ಚುನಾವಣೆಯ ಕಾರ್ಯ ಚಟುವಟಿಕೆ ಗಳು ನಡೆಯಲಿವೆ.

ನಕ್ಸಲ್‌ ಪೀಡಿತ ಮತಗಟ್ಟೆ
ತಾಲೂಕಿನಾದ್ಯಂತ ಒಟ್ಟು 46 ನಕ್ಸಲ್‌ ಪೀಡಿತ ಮತಗಟ್ಟೆಗಳಲ್ಲಿ ವಿಶೇಷ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ನಾರಾವಿ, ಚಾರ್ಮಾಡಿಯಲ್ಲಿ ತಲಾ 4, ನಡ, ಕಾಯರ್ತಡ್ಕದಲ್ಲಿ ತಲಾ 3, ಕುತ್ಲೂರು, ಶಿರ್ಲಾಲು, ಸವಣಾಲು, ನಾವೂರು, ಕರಂಬಾರು, ನೆರಿಯಾ, ಶಿಶಿಲಾ, ಸಲೆತಡ್ಕ, ಅರಸಿನಮಕ್ಕಿಗಳಲ್ಲಿ ತಲಾ 2, ಸುಲ್ಕೇರಿ ಮೊಗ್ರು, ನಾವರ, ಯಳನೀರು, ದಿಡುಪೆ, ಕರಿಯಾಲು, ಮಿತ್ತಬಾಗಿಲು, ಕುಕ್ಕಾವು, ಕಿಲ್ಲೂರು, ಕಡಿರುದ್ಯಾವರ, ಸುಲ್ಕೇರಿ, ಲಾೖಲ, ಬಾಂಜಾರು, ಮಿಯಾರುಮಠ, ಮೊಂಟೆತಡ್ಕಗಳಲ್ಲಿ ತಲಾ 1 ನಕ್ಸಲ್‌ ಪೀಡಿತ ಪ್ರದೇಶಗಳಿವೆ.

— ಹರ್ಷಿತ್‌ ಪಿಂಡಿವನ

ಟಾಪ್ ನ್ಯೂಸ್

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Puttur: ಬಸ್‌ ನಿಲ್ದಾಣದಲ್ಲಿ ಕಿರುಕುಳ; ಯುವಕನಿಗೆ ಗೂಸಾ

byndoor

Guttigaru: ಕಮರಿಗೆ ಉರುಳಿದ ಕಾರು; ಗಾಯ

Kadaba ಕೋಡಿಂಬಾಳ ಮರಬಿದ್ದು ವ್ಯಕ್ತಿ ಸಾವು ಪ್ರಕರಣ: 2 ದಿನವಾದರೂ ಸ್ಥಳ ಬಿಟ್ಟು ಕದಲದ ಕೋಳಿ!

Kadaba ಕೋಡಿಂಬಾಳ ಮರಬಿದ್ದು ವ್ಯಕ್ತಿ ಸಾವು ಪ್ರಕರಣ: 2 ದಿನವಾದರೂ ಸ್ಥಳ ಬಿಟ್ಟು ಕದಲದ ಕೋಳಿ!

Farangipete Devaki Krishna Ravalnath Temple: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು

Farangipete Devaki Krishna Ravalnath Temple: ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳವು

Puttur:ನಾಪತ್ತೆಯಾಗಿದ್ದ ಅಸ್ಥಿಪಂಜರ ಪತ್ತೆ; ಸಾವಿನ ಬಗ್ಗೆ ಅನುಮಾನ ಆತ್ಮಹ*ತ್ಯೆಯೋ,ಕೊ*ಲೆಯೋ

Puttur:ನಾಪತ್ತೆಯಾಗಿದ್ದ ಅಸ್ಥಿಪಂಜರ ಪತ್ತೆ; ಸಾವಿನ ಬಗ್ಗೆ ಅನುಮಾನ ಆತ್ಮಹ*ತ್ಯೆಯೋ,ಕೊ*ಲೆಯೋ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.