ಕಟೀಲು: 75 ಜೋಡಿ ವಿವಾಹ, 25 ಸಾವಿರಕ್ಕೂ ಅಧಿಕ ಭಕ್ತರ ಆಗಮನ
Team Udayavani, Apr 29, 2019, 2:22 PM IST
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರವಿವಾರ 65 ಜೋಡಿ ಹಾಗೂ ದೇವ ಸ್ಥಾನದ ಪರಿಸರದಲ್ಲಿರುವ ಸಭಾ ವೇದಿಕೆ ಯಲ್ಲಿ 10 ಜೋಡಿಗಳ ಸಹಿತ ಒಟ್ಟು 75 ಜೋಡಿಗಳ ವಿವಾಹ ನಡೆಯಿತು.
ಬೆಳಗ್ಗೆ 6.45ರಿಂದ ಆರಂಭವಾದ ವಿವಾಹ ಮುಹೂರ್ತ 1 ಗಂಟೆಯ ತನಕ ನಡೆಯಿತು. 8,000 ಜನರು ರವಿವಾರ ಅನ್ನಪ್ರಸಾದ ಸ್ವೀಕರಿಸಿದರು. 500 ಮಂದಿ ಬೆಳಗ್ಗಿನ ಗಂಜಿ ಊಟ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದಲ್ಲಿ ದಿನದ ಮೂರು ಹೊತ್ತು ಅನ್ನದಾನ ಇದೆ.
ಮದುವೆ ವ್ಯವಸ್ಥೆಗೆ ನಾಲ್ವರು ಪುರೋಹಿತರು, ಎರಡು ಕೌಂಟರ್‌ಗಳು ಹಾಗೂ ನೋಂದಣಿಗೆ ಪ್ರತ್ಯೇಕ ಸಿಬಂದಿಯನ್ನು ನೇಮಕ ಮಾಡಲಾಗಿತ್ತು. ಸೋಮ ವಾರವೂ 7 ಜೋಡಿಗಳ ವಿವಾಹಕ್ಕೆ ನೋಂದಣಿಯಾಗಿದೆ ಎಂದು
ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ತಿಳಿಸಿದ್ದಾರೆ.
ಪ್ರತಿವರ್ಷ ಅಕ್ಷಯ ತೃತೀಯಾದಂದು ಕಟೀಲು ಕ್ಷೇತ್ರದಲ್ಲಿ ಅತೀಹೆಚ್ಚು ಸಾಮೂಹಿಕ ವಿವಾಹ ಸಾಮಾನ್ಯ. ಆದರೆ ಈ ಬಾರಿ ಅಕ್ಷಯ ತೃತೀಯಾ ಮಂಗಳವಾರ ಬಂದಿರುವುದರಿಂದ ಅಂದು ಮದುವೆಗಳು ಇರುವುದಿಲ್ಲ. ಅದರ ಹಿಂದು-ಮುಂದಿನ ದಿನಗಳಲ್ಲಿ ಸಾಕಷ್ಟು ಸಂಖ್ಯೆಯ ಮದುವೆಗಳು ನೆರವೇರಲಿವೆ.
ವಾಹನ ದಟ್ಟಣೆ ನಿರ್ವಹಣೆ
ಮದುವೆ ಕಡೆಯವರ ಆಗಮನ ಜತೆಗೆ ರಜಾ ದಿನವಾಗಿದ್ದರಿಂದ ಕಟೀಲು ಪೇಟೆ, ಬಸ್ ನಿಲ್ದಾಣ ಹಾಗೂ ರಥಬೀದಿಯಲ್ಲಿ ಜನ-ವಾಹನಗಳ ದಟ್ಟಣೆ ಹೆಚ್ಚಾಗಿ ಕಂಡುಬಂದಿತು. 25,000ಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ವಾಹನಗಳ ಸುಗಮ ಸಂಚಾರಕ್ಕಾಗಿ ಕಿನ್ನಿಗೋಳಿ ಕಡೆಯಿಂದ ಬರುವ ವಾಹನಗಳಿಗೆ ಕಾಲೇಜು ಮೈದಾನ ಹಾಗೂ ಬಜಪೆ ಕಡೆಯಿಂದ ಬರುವ ವಾಹನಗಳಿಗೆ ಪ್ರೌಢಶಾಲೆ-ಹಳೆ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಯೂ ನಿರ್ವಹಣೆಗಾಗಿ ಸಿಬಂದಿ ಯನ್ನು ನಿಯೋಜಿಸಲಾಗಿತ್ತು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.