76 ಕೋ.ರೂ. ಮೊತ್ತದ ತೆರಿಗೆ ಕಳ್ಳತನ ಪತ್ತೆ; 50 ಕೋ.ರೂ. ತೆರಿಗೆ ವಸೂಲಿ

Team Udayavani, Apr 14, 2017, 11:50 AM IST

Tax-14.jpg

ಮಂಗಳೂರು: ಡೈರೆಕ್ಟರೆಟ್‌ ಜನರಲ್‌ ಆಫ್‌ ಸೆಂಟ್ರಲ್‌ ಎಕ್ಸೈಸ್‌ ಇಂಟೆಲಿಜೆನ್ಸ್‌ (ಡಿಜಿಸಿಇಐ) ಮಂಗಳೂರು ಘಟಕ 2016-17ನೇ ಸಾಲಿನಲ್ಲಿ 76 ಕೋಟಿ ರೂ. ಮೊತ್ತದ ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ ಕಳ್ಳತನ ಪತ್ತೆ ಹಚ್ಚಿದ್ದು, ಈ ಪೈಕಿ 50 ಕೋ. ರೂ. ವಸೂಲಿ ಮಾಡಿದೆ.

ಕಳೆದ ವರ್ಷದ ಸಾಧನೆಗೆ ಹೋಲಿಸಿದರೆ ಈ ವರ್ಷ ಶೇ 300ರಷ್ಟು ಹೆಚ್ಚು ಸಾಧನೆಯಾಗಿದೆ.ಪತ್ತೆಯಾದ ತೆರಿಗೆ ಕಳ್ಳತನದಲ್ಲಿ ವಸೂಲಾದ ತೆರಿಗೆ ಮೊತ್ತ ಶೇ. 65ರಷ್ಟಿದ್ದು, ಇದು ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದು ಪ್ರಕಟನೆ ತಿಳಿಸಿದೆ.ತೆರಿಗೆ ಪಾವತಿಸದೆ ತಪ್ಪಿಸಿಕೊಳ್ಳಲು ಹಲವು ದಾರಿ ಕಂಡು ಕೊಂಡವರು ತಮ್ಮ ಕೃತ್ಯವನ್ನು ಅಧಿಕಾರಿಗಳು ಪತ್ತೆ ಹಚ್ಚಿದ ಕೂಡಲೇ ಅದನ್ನು ಸಂಪೂರ್ಣವಾಗಿ ಮರು ಪಾವತಿಸಿದ್ದಾರೆ.

ಮಂಗಳೂರು ಘಟಕ 2016-17ರಲ್ಲಿ ಒಟ್ಟು 14 ಪ್ರಕರಣಗಳಲ್ಲಿ 26.23 ಕೋ. ರೂ. ಕೇಂದ್ರೀಯ ಅಬ್ಕಾರಿ ಸುಂಕ ಪಾವತಿಸದಿರುವ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಈ ಪೈಕಿ 6.47 ಕೋ. ರೂ. ವಸೂಲಾಗಿದೆ. ಸೇವಾ ತೆರಿಗೆ ಪಾವತಿ ಮಾಡದ 71 ಪ್ರಕರಣಗಳನ್ನು ಪತ್ತೆ ಮಾಡಿದೆ. ಒಟ್ಟು ಮೊತ್ತ 50.63 ಕೋ. ರೂ. ಆಗಿದ್ದು, ಅದರಲ್ಲಿ 43.57 ಕೋ. ರೂ. ವಸೂಲು ಮಾಡಿದೆ.

ಕೆಲವು ಹೈ ಪ್ರೊಫೈಲ್‌ ಪ್ರಕರಣ ಪತ್ತೆ ಹಚ್ಚಿದ್ದು, 117 ಮಂದಿ ತಪ್ಪಿತಸ್ಥರು ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ ಪಾವತಿಸಲು ಮುಂದೆ ಬಂದಿದ್ದಾರೆ. ಘಟಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡ ಫಲವಾಗಿ ಇದು ಸಾಧ್ಯವಾಗಿದೆ ಎಂದು ಪ್ರಕಟನೆ ತಿಳಿಸಿದೆ.

ತೆರಿಗೆ ಪಾವತಿ ಮಾಡದೆ ಸರಕಾರಕ್ಕೆ ವಂಚಿಸುವ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಕೂಡ ಇಲಾಖೆಗೆ ಮಾಹಿತಿ ನೀಡುತ್ತಿದ್ದಾರೆ. ಹಾಗೆ ಮಾಹಿತಿ ನೀಡುವವರಿಗೆ ಸರಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪತ್ತೆಯಾಗುವ ತೆರಿಗೆ ಕಳ್ಳತನ ಮೊತ್ತದ ಶೇ. 20ರಷ್ಟನ್ನು ಸಂಭಾವನೆಯಾಗಿ ನೀಡಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ತೆರಿಗೆ ಕಳ್ಳತನ ಪ್ರಕರಣಗಳ ಪತ್ತೆಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸಾರ್ವಜನಿಕ ಮಾಹಿತಿದಾರರು ಮಂಗಳೂರಿನ ಮಣ್ಣಗುಡ್ಡ ಗಾಂಧಿ ಪಾರ್ಕ್‌ ಬಳಿಯ ಭಾರತ್‌ ನಿವಾಸ್‌ ಕಟ್ಟಡದಲ್ಲಿರುವ ಡೈರೆಕ್ಟರೆಟ್‌ ಜನರಲ್‌ ಆಫ್‌ ಸೆಂಟ್ರಲ್‌ ಎಕ್ಸೈಸ್‌ ಇಂಟೆಲಿಜೆನ್ಸ್‌ ಅಧಿಕಾರಿಗಳನ್ನು ಸಂಪರ್ಕಿಸ ಬಹುದು. ಮಾಹಿತಿದಾರರ ಬಗ್ಗೆ ಗೌಪ್ಯತೆ ಕಾಯ್ದು ಕೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ. ಈ ಮೇಲ್‌ ವಿಳಾಸ: [email protected]
 
ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Kulai: ಬೃಹತ್‌ ಟ್ರಕ್‌ ಓಡಾಟದಿಂದ ರಸ್ತೆಗೆ ಹಾನಿ

10

Lalbagh: ಪಾಲಿಕೆ ಚುನಾವಣೆ ಸನ್ನಿಹಿತ; ಮೀಸಲಾತಿಯದೇ ಆತಂಕ!

7–ullala

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ

7

Mangaluru: ನಿತ್ಯ ಟ್ರಾಫಿಕ್‌ ಜಾಮ್‌ ಗೋಳು; ವಾಹನ ಸವಾರರ ಪರದಾಟ

Crime

Mangaluru: ಬಸ್‌ ನಿರ್ವಾಹಕನ ಕೊಲೆ; ಆರೋಪಿಗಳ ಸುಳಿವು ಲಭ್ಯ?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.