ನಿಟ್ಟೆ ವಿ.ವಿ.: “ಕ್ಯಾಂಪಸ್ ಬರ್ಡ್ ಕೌಂಟ್’; 76 ಪಕ್ಷಿ ಪ್ರಭೇದ ದಾಖಲು
Team Udayavani, Feb 28, 2022, 7:43 AM IST
ಉಳ್ಳಾಲ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ದೇರಳಕಟ್ಟೆ ಕ್ಯಾಂಪಸ್‌ನಲ್ಲಿ ನಿಟ್ಟೆ ವಿ.ವಿ. ವಿಜ್ಞಾನ ಶಿಕ್ಷಣ ಮತ್ತು ಸಂಶೋಧನ ಕೇಂದ್ರದ ನೇತೃತ್ವದಲ್ಲಿ ಪಕ್ಷಿ ಪ್ರೇಮಿಗಳು ಫೆ. 18ರಿಂದ 21ರ ವರೆಗೆ ನಡೆಸಿದ “ಕ್ಯಾಂಪಸ್ ಬರ್ಡ್ ಕೌಂಟ್ -2022′ ಸಮೀಕ್ಷೆಯಲ್ಲಿ 76 ಜಾತಿಯ ಪಕ್ಷಿಗಳನ್ನು ಗುರುತಿಸಿ ದಾಖಲೆ ಸೃಷ್ಟಿಸಿದ್ದಾರೆ.
ನಿಟ್ಟೆ ವಿ.ವಿ.ಯ ದೇರಳಕಟ್ಟೆ ಮತ್ತು ಪಾನೀರು ಕ್ಯಾಂಪಸ್‌ನಲ್ಲಿ ಹಲವು ವರ್ಷಗಳಿಂದ ವಿವಿಧ ಹಸಿರು ಯೋಜನೆಗಳನ್ನು ಕೈಗೊಂಡು ಯಶಸ್ವಿಯಾಗಿದ್ದು, ಹಸಿರು ಕ್ಯಾಂಪಸ್‌ಗೆ ಬೇರೆ ಬೇರೆ ಪ್ರದೇಶಗಳ ಹಕ್ಕಿಗಳು ವಲಸೆ ಬರುತ್ತಿವೆ. ಅವುಗಳ ದಾಖಲೀಕರಣ ನಡೆಸಲಾಗಿದೆ.
ಕ್ಯಾಂಪಸ್ ಬರ್ಡ ಕೌಂಟ್ 2022 ಗ್ರೇಟ್ ಬ್ಯಾಕ್‌ಯಾರ್ಡ್ ಬರ್ಡ್‌ಕೌಂಟ್ ಕಾರ್ಯಕ್ರಮದ ಭಾಗವಾಗಿದ್ದು 2015ರಿಂದ ನಿಯಮಿತವಾಗಿ ಬರ್ಡ್‌ಕೌಂಟ್ ಇಂಡಿಯಾ (ದಿ ಕಾರ್ನೆಲ್ ಲ್ಯಾನ್ ಆಫ್ ಆರ್ನಿಥಾಲಜಿ) ಸಹಯೋಗದೊಂದಿಗೆ ನಡೆಯುತ್ತಿದೆ. ಈ ವರ್ಷ ದೇಶದ ವಿವಿಧ ಭಾಗಗಳ 250ಕ್ಕೂ ಹೆಚ್ಚು ಕ್ಯಾಂಪಸ್‌ಗಳು ಬರ್ಡ್‌ಕೌಂಟ್‌ನಲ್ಲಿ ನೋಂದಾಯಿಸಿವೆ.
ನಿಟ್ಟೆ ವಿ.ವಿ.ಯ ಸಂಶೋಧಕರು, ವೈದ್ಯರು, ವೃತ್ತಿಪರರು, ಪ್ರಾಧ್ಯಾಪಕರು, ಪಕ್ಷಿಪ್ರೇಮಿಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಆಪರೇಷನ್ ಗಂಗಾ: ಉಕ್ರೇನ್ ನೆರೆ ರಾಷ್ಟ್ರಗಳಿಗೆ ಇನ್ನಷ್ಟು ವಿಮಾನಗಳು
ಪತ್ತೆಯಾದ ಪಕ್ಷಿಗಳು
ಬಿಳಿ ಕೆನ್ನೆಯ ಬಾರ್ಬೆಟ್, ಬಿಳಿ ಗಂಟಲಿನ ಮಿಂಚುಳ್ಳಿ, ಏಷ್ಯನ್ ಕೋಯೆಲ್, ಗ್ರೇಟರ್ ಕೌಕಲ್, ಕಾಮನ್ ಮೈನಾ, ಹೌಸ್ ಕ್ರೌಸ್, ಕ್ಯಾಟಲ್ ಎಗ್ರೆಟ್, ಬ್ರಾಹ್ಮನಿ ಗಾಳಿಪಟ, ಕಪ್ಪು ಗಾಳಿಪಟ, ಕಾಮನ್ ಅಯೋರಾ, ಜಂಗಲ್ ಬ್ಯಾಬxರ್, ಬ್ಲ್ಯಾಕ್ ಡ್ರೋಂಗೊ, ರಾಕ್ ಪಾರಿವಾಳ, ಕೆಂಪು ವಿಸ್ಕರ್ಡ್ ಬುಲ್‌ಬುಲ್, ರೆಡ್‌ವಾಟಲ್ಡ್ ಲ್ಯಾಪ್‌ವಿಂಗ್, ಕಾಮನ್‌ಹಾಕ್ ಕೋಗಿಲೆ, ರೋಸ್‌ರಿಂಗ್ಡ್ ಪ್ಯಾರಾಕಿಟ್ಸ್, ರೆಡ್‌ವೆಂಟೆಡ್ ಬುಲ್‌ಬುಲ್, ಕಾಮನ್ ಕಿಂಗ್‌ಫಿಶರ್, ವಲಸೆ ಹಕ್ಕಿಗಳಾದ ಪರ್ಪಲ್ ಸನ್‌ಬರ್ಡ್, ಇಂಡಿಯನ್‌ಪಿಟ್ಟಾ, ರಾತ್ರಿ ಸಂಚರಿಸುವ ಇಂಡಿಯನ್‌ಸ್ಕಾಪ್ಸ್ ಗೂಬೆ, ಬಾರ್ನ್ಔಲ್, ಇಂಡಿಯನ್ ನೈಟ್‌ಜಾರ್ ಜೆರ್ಡನ್ಸ್ ನೈಟ್‌ಜಾರ್‌ನಂತಹ ಕೆಲವು ಪಕ್ಷಿಗಳು ಸಹ ವರದಿಯಲ್ಲಿ ದಾಖಲಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.