![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, Jan 22, 2019, 12:50 AM IST
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಈ ಬಾರಿ ಮಕರ ಸಂಕ್ರಾಂತಿ ಸಂದರ್ಭದಲ್ಲಿ ನಮ್ಮೂರು ನಮ್ಮ ಶ್ರದ್ಧಾಕೇಂದ್ರ ಯೋಜನೆಯಲ್ಲಿ ರಾಜ್ಯದ ಒಟ್ಟು 161 ತಾಲೂಕುಗಳ 7,897 ಧಾರ್ಮಿಕ ಕೇಂದ್ರಗಳನ್ನು ಸ್ವತ್ಛಗೊಳಿಸಲಾಗಿದೆ ಎಂದು ಯೋಜನೆ ಸ್ವತ್ಛತಾ ವಿಭಾಗದ ನಿರ್ದೇಶಕ ಲಕ್ಷ್ಮಣ್ ಎಂ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಕನಸಿನ ಯೋಜನೆಯಾಗಿ ಶ್ರದ್ಧಾ ಕೇಂದ್ರಗಳ ಸ್ವತ್ಛತಾ ಅಭಿಯಾನ 3 ವರ್ಷಗಳಿಂದ ನಡೆಯುತ್ತಿದೆ. ಯೋಜನೆಯ ಕಾರ್ಯನಿರ್ವಾಹಕ ನಿದೇರ್ಶಕ ಡಾ| ಎಲ್.ಎಚ್. ಮಂಜುನಾಥ್ ನಿರ್ದೇಶನದಿಂದ ಯಶಸ್ವಿಯಾಗಿ ನಡೆದಿದೆ ಎಂದರು.
ಜ. 7ರಿಂದ 14ರ ವರೆಗೆ ಕಾಸರ ಗೋಡು ಸೇರಿದಂತೆ 31 ಜಿಲ್ಲೆಗಳಲ್ಲಿ ಸ್ವತ್ಛತೆ ನಡೆಸಲಾಗಿದೆ. 7,498 ಮಂದಿರ/
ಬಸದಿ, 34 ಚರ್ಚ್, 162 ಮಸೀದಿ ಹಾಗೂ 203 ಇತರ ಶ್ರದ್ಧಾಕೇಂದ್ರ ಸೇರಿದಂತೆ ಒಟ್ಟು 7,897 ಶ್ರದ್ಧಾ ಕೇಂದ್ರಗಳನ್ನು ಸ್ವತ್ಛಗೊಳಿಸಲಾಗಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ವಿನೂತನವಾಗಿ ಹೇಮಾವತಿ ವಿ. ಹೆಗ್ಗಡೆ ಅವರು ಹೆಸರಿಟ್ಟಂತೆ 115 ಸ್ವತ್ಛತಾ ಸೇನಾನಿಗಳು 81 ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಂಜಿನಿಯರ್ ಸಂಕೇತ್ ಉಪಸ್ಥಿತರಿದ್ದರು.
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.