ಮಂಗಳೂರು : 8 ತಿಂಗಳ ಮಗುವಿಗೆ ಚೈಲ್ಡ್‌ಲೈನ್‌ನಿಂದ ರಕ್ಷಣೆ
Team Udayavani, Jul 17, 2022, 1:57 AM IST
ಮಂಗಳೂರು : ನಗರದಲ್ಲಿ ಪಾನಮತ್ತಳಾಗಿ ತಿರುಗುತ್ತಿದ್ದ ಮಹಿಳೆಯ 8 ತಿಂಗಳ ಹೆಣ್ಣುಮಗುವನ್ನು ಜು.15ರಂದು ಚೈಲ್ಡ್‌ಲೈನ್ ತಂಡದವರು ರಕ್ಷಿಸಿದ್ದಾರೆ.
ಮಂಗಳೂರು ನಗರದ ಸರ್ಕಾರಿ ಆಸ್ಪತ್ರೆ ಬಳಿ ಮಹಿಳೆಯೋರ್ವಳು ಪಾನಮತ್ತಳಾಗಿದ್ದಾಳೆ, ಆಕೆಯ ಬಳಿ ಹೆಣ್ಣುಮಗುವೊಂದಿದ್ದು ಮಗುವಿಗೆ ರಕ್ಷಣೆ ನೀಡುವಂತೆ ಸಾರ್ವಜನಿಕರಿಂದ ಚೈಲ್ಡ್ ಲೆ„ನ್ -1098ಕ್ಕೆ ಮಾಹಿತಿ ಬಂದಿತ್ತು.
ದ.ಕ.ಜಿಲ್ಲಾ ಚೆ„ಲ್ಡ್ ಲೆ„ನ್ ತಂಡವು ಪಾಂಡೇಶ್ವರ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸ್ಥಳಕ್ಕೆ ಭೇಟಿ ನೀಡಿದಾಗ ಮಹಿಳೆಯು ವಿಪರೀತ ಪಾನಮತ್ತಳಾಗಿ ಕಂಡುಬಂದಿದ್ದಳು. ಆಕೆಯ ಬಳಿಯಿದ್ದ 8 ತಿಂಗಳ ಮಗುವಿಗೆ ಸೂಕ್ತ ರಕ್ಷಣೆಯ ಅಗತ್ಯವಿದ್ದುದರಿಂದ ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಬಾಲಕಿಯರ ವಸತಿನಿಲಯದಲ್ಲಿ ಪುನರ್ವಸತಿಯನ್ನು ಕಲ್ಪಿಸಲಾಗಿದೆ. ಮಹಿಳೆಯು ಕಳೆದ 15 ದಿನಗಳಿಂದ ಮಗುವನ್ನು ಹಿಡಿದುಕೊಂಡು ಪಾನಮತ್ತಳಾಗಿ ನಗರದಲ್ಲಿ ತಿರುಗಾಡುತ್ತಿದ್ದಳು ಎಂಬುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.
ಈ ರಕ್ಷಣಾ ತಂಡದಲ್ಲಿ ಚೈಲ್ಡ್ ಲೈನ್ ದ.ಕ.ಜಿಲ್ಲೆಯ ಕೇಂದ್ರ ಸಂಯೋಜಕ ದೀಕ್ಷಿತ್ ಅಚÅಪ್ಪಾಡಿ, ಸದಸ್ಯರಾದ ಆಶಾಲತ ಕುಂಪಲ, ಸಿಬಂದಿಗಳಾದ ಸುಪ್ರಿತ್ ಆರ್ಲಪದವು, ಕವನ್ ಕಬಕ, ಶೋಭಾ ಹಾಗೂ ಪಾಂಡೇಶ್ವರ ಪೊಲೀಸ್ ಠಾಣಾ ಸಿಬಂದಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.