ಎರಡೂವರೆ ತಿಂಗಳಲ್ಲಿ  8.33 ಕೋ.ರೂ. ನಷ್ಟ


Team Udayavani, Jun 14, 2018, 6:00 AM IST

m-29.jpg

ಮಂಗಳೂರು: ಈ ಬಾರಿಯ ಮುಂಗಾರು ಋತುವಿನಲ್ಲಿ ಅತಿಹೆಚ್ಚು ಹೊಡೆತಕ್ಕೆ ಸಿಲುಕಿರುವ ಸಂಸ್ಥೆಯೆಂದರೆ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ). ಕಳೆದ ಎರಡೂ ವರೆ ತಿಂಗಳಲ್ಲಿ ಗಾಳಿ-ಮಳೆಯಿಂದ ಸುಮಾರು 6,400ಕ್ಕೂ ಅಧಿಕ ವಿದ್ಯುತ್‌ ಕಂಬಗಳು ನೆಲ ಕ್ಕುರುಳಿದ್ದು, 8 ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳು ಮೆಸ್ಕಾಂ ವ್ಯಾಪ್ತಿಗೆ ಬರು ತ್ತಿದ್ದು, ಈ ಭಾಗಗಳಲ್ಲಿ ನಿರೀಕ್ಷೆಗೂ ಮೀರಿದ ನಷ್ಟ ಮೆಸ್ಕಾಂಗೆ ಸಂಭವಿಸಿದೆ. ವಿದ್ಯುತ್‌ ಸಂಪರ್ಕವನ್ನು ಯಥಾಸ್ಥಿತಿಗೆ ತರಲು ಇಲಾಖೆ ಸಿಬಂದಿ ಹರಸಾಹಸ ಪಡುತ್ತಿದ್ದಾರೆ. ಮೆಸ್ಕಾಂ ಮಾಹಿತಿಯಂತೆ, ನಾಲ್ಕು ಜಿಲ್ಲೆಗಳಲ್ಲಿ ಕೇವಲ ಎರಡೂವರೆ ತಿಂಗಳಲ್ಲಿ 6,400ಕ್ಕೂ ಅಧಿಕ ವಿದ್ಯುತ್‌ ಕಂಬಗಳು, 500ಕ್ಕೂ ಅಧಿಕ ವಿದ್ಯುತ್‌ ಪರಿ ವರ್ತಕಗಳು ಹಾನಿಗೀಡಾಗಿ ಒಟ್ಟು 8.33 ಕೋಟಿ ರೂ.ವಿಗೂ ಅಧಿಕ ನಷ್ಟ ಅನುಭವಿಸಿದೆ. ದ.ಕ. ಜಿಲ್ಲೆಯಲ್ಲೇ ಅತಿಹೆಚ್ಚು 2.98 ಕೋಟಿ ರೂ. ನಷ್ಟವಾಗಿದೆ. ಗಾಳಿ ಮಳೆಯಿಂದಾಗಿ ಎ. 1ರಿಂದ ಜೂ. 11ರ ವರೆಗೆ ಉಡುಪಿ ಜಿಲ್ಲೆಯಲ್ಲಿ 2.14 ಕೋಟಿ ರೂ., ಶಿವಮೊಗ್ಗದಲ್ಲಿ 1.70 ಕೋಟಿ ರೂ. ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 1.51ಕೋ. ರೂ. ನಷ್ಟ ಸಂಭವಿಸಿದೆ.

6,446 ಕಂಬಗಳಿಗೆ ಹಾನಿ
4 ಜಿಲ್ಲೆಗಳಲ್ಲಿ ಒಟ್ಟು 6,446 ವಿದ್ಯುತ್‌ ಕಂಬ ಗಳು ಹಾನಿಗೀಡಾಗಿದ್ದು, 5,590 ಕಂಬಗಳನ್ನು ಬದಲಾ ಯಿಸಲಾಗಿದೆ. ದ.ಕ ಜಿಲ್ಲೆಯಲ್ಲಿ ಅತಿ ಹೆಚ್ಚು 2,109 ಕಂಬಗಳಿಗೆ ಹಾನಿಯಾಗಿದ್ದು ಎಲ್ಲ ಕಂಬಗಳನ್ನು ಮರು ಸ್ಥಾಪಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 1,896 ಕಂಬಗಳು ಹಾನಿಗೊಂಡಿದ್ದು ಇದರಲ್ಲಿ 1,195 ಕಂಬಗಳನ್ನು ಬದಲಾಯಿಸಲಾಗಿದೆ; 770 ಕಂಬಗಳು ಬದಲಾಸಲು ಬಾಕಿ ಇವೆ. ಶಿವಮೊಗ್ಗ ದಲ್ಲಿ ಹಾನಿಗೊಳಗಾದ ಎಲ್ಲ 1,315 ಕಂಬಗಳ ಬದಲಿಗೆ ಹೊಸದನ್ನು ಹಾಕಲಾಗಿದೆ. ಚಿಕ್ಕಮಗಳೂರಿ ನಲ್ಲಿ 1,126 ಕಂಬಗಳಿಗೆ ಹಾನಿಯಾಗಿದೆ. 977 ಬದ ಲಾಯಿಸಲಾಗಿದ್ದು 149 ಕಂಬಗಳು ಬದ ಲಾಯಿಸಲು ಬಾಕಿ ಇವೆ.

ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 474 ಕಿ.ಮೀ. ವಿದ್ಯುತ್‌ ಮಾರ್ಗಗಳು ಹಾನಿಗೀಡಾಗಿದ್ದು 397.97 ಕಿ.ಮೀ. ಮಾರ್ಗದಲ್ಲಿ ತಂತಿಗಳ ದುರಸ್ತಿ ಅಥವಾ ಬದಲಾವಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು 162 ಕಿ.ಮೀ., ದಕ್ಷಿಣ ಜಿಲ್ಲೆಯಲ್ಲಿ 154 ಕಿ.ಮೀ. ವಿದ್ಯುತ್‌ ಮಾರ್ಗ ಹಾನಿಗೊಳಾಗಿದ್ದು ಎಲ್ಲ ವನ್ನೂ ಸರಿಪಡಿಸಲಾಗಿದೆ. ಉಡುಪಿ ಜಿಲ್ಲೆ ಯಲ್ಲಿ ಹಾನಿಗೊಳಗಾದ 40 ಕಿ.ಮೀ. ವಿದ್ಯುತ್‌ ಮಾರ್ಗದಲ್ಲಿ 34.97 ಕಿ.ಮೀ. ಸರಿಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾನಿಗೊಳಗಾದ 113 ಕಿ.ಮೀ. ವಿದ್ಯುತ್‌ ಮಾರ್ಗದಲ್ಲಿ 74 ಕಿ.ಮೀ. ದುರಸ್ತಿಗೊಳಿಸಲಾಗಿದೆ. 

536 ಪರಿವರ್ತಕಗಳು ಹಾನಿ
ಮೆಸ್ಕಾಂನ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 536 ವಿದ್ಯುತ್‌ ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್‌) ಹಾನಿಗೀಡಾಗಿದ್ದು, 524ನ್ನು ದುರಸ್ತಿ ಅಥವಾ ಬದಲಾಯಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ಅತಿ ಹೆಚ್ಚು 260 ವಿದ್ಯುತ್‌ ಪರಿವರ್ತಕಗಳು ಹಾನಿಗೊಂಡಿದ್ದು ಮರುಸ್ಥಾಪಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಹಾನಿಗೊಳಗಾದ 240 ವಿದ್ಯುತ್‌ ಪರಿವರ್ತಕದಲ್ಲಿ 235ನ್ನು ಸರಿಪಡಿಸಲಾಗಿದೆ. ಶಿವಮೊಗ್ಗದಲ್ಲಿ ಹಾನಿಗೊಳಗಾದ 27 ಪರಿವರ್ತಕಗಳಲ್ಲಿ 24 ಹಾಗೂ ಜಿಕ್ಕಮಗಳೂರಿನಲ್ಲಿ 9 ಪರಿವರ್ತಕಗಳ ಪೈಕಿ 6ನ್ನು ಮರುಸ್ಥಾಪಿಸಲಾಗಿದೆ.

2 ತಿಂಗಳಿನಿಂದ ಮೆಸ್ಕಾಂ ಎಂಡಿ ಹುದ್ದೆ  ಖಾಲಿ!
ಮಳೆಗಾಲದಲ್ಲಿ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವಿದ್ಯುತ್‌ ಸಮಸ್ಯೆ ಬಗ್ಗೆ ಗ್ರಾಹಕರಿಂದ ಹೆಚ್ಚಿನ ದೂರುಗಳು ಬರುತ್ತಿರುತ್ತವೆ. ಆದರೆ ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದು ಕೊಳ್ಳಬೇಕಾಗಿರುವ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ಎರಡು ತಿಂಗಳಿಂದ ಖಾಲಿಯಿದೆ. ಎಂಡಿ ಯಾಗಿದ್ದ ರಾಮಕೃಷ್ಣ ಅವರು ಎಪ್ರಿಲ್‌ ನಲ್ಲಿ ವರ್ಗಾವಣೆಗೊಂಡಿದ್ದು, ಹೊಸಬರ ಭರ್ತಿಯಾಗಿಲ್ಲ. ಪ್ರಸ್ತುತ ಪವರ್‌ ಕಂಪೆನಿ ಆಫ್‌ ಕರ್ನಾಟಕ ಲಿಮಿಟೆಡ್‌(ಪಿಸಿಕೆಎಲ್‌)ನ ವ್ಯವ ಸ್ಥಾಪಕ ನಿರ್ದೇಶಕ ಟಿ.ಎಚ್‌.ಎಂ. ಕುಮಾರ್‌ ಮೆಸ್ಕಾಂನ ಪ್ರಭಾರ ಎಂಡಿ ಆಗಿದ್ದಾರೆ. ಇದಕ್ಕಾಗಿ ವಾರದಲ್ಲಿ 3 ದಿನ ಬೆಂಗಳೂರಿನಿಂದ ಮಂಗಳೂರಿಗೆ ಬಂದು ಹೋಗುತ್ತಿದ್ದಾರೆ. ಮೆಸ್ಕಾಂಗೆ ಪೂರ್ಣಕಾಲಿಕ ವ್ಯವಸ್ಥಾಪಕ ನಿರ್ದೇಶಕರಿದ್ದರೆ ತುರ್ತು ನಿರ್ಧಾರ ಕೈಗೊಳ್ಳಲು ಅನುಕೂಲವಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಕೇಶವ ಕುಂದರ್‌

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru ಆನ್‌ಲೈನ್‌ ವಂಚನೆ: ಕೇರಳದ ಯುವಕ ಸೆರೆ

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

Mangaluru: ಅಂಗಡಿ ಕೆಲಸಗಾರನಿಂದಲೇ ಹಣ, ಮೊಬೈಲ್‌ ಕಳವು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.