94 ಸಿಸಿ ಸೆಕ್ಷನ್ ಅಡಿ ಸಕ್ರಮ ಪ್ರಕ್ರಿಯೆ: ಸೆ. 10ರ ಗಡುವು
Team Udayavani, Aug 27, 2017, 10:55 AM IST
ಮಂಗಳೂರು: ನಗರ ವ್ಯಾಪ್ತಿಯಲ್ಲಿ ಸರಕಾರಿ ಭೂಮಿ ಅತಿಕ್ರಮಿಸಿ ವಾಸ್ತವ್ಯ ಮಾಡುತ್ತಿರುವವರಿಗೆ ಕರ್ನಾಟಕ ಭೂ ಕಂದಾಯ ಕಾಯಿದೆಯ 94 ಸಿಸಿ ಸೆಕ್ಷನ್ ಅಡಿ ಸಕ್ರಮಗೊಳಿಸುವ ಪ್ರಕ್ರಿಯೆ ಸೆ. 10ರೊಳಗೆ ಮುಗಿಯಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ.
ಈ ಸಂಬಂಧ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, 94 ಸಿಸಿಯಡಿ ಭೂಮಿ ಅಕ್ರಮ ಸಕ್ರಮೀಕರಣ ಪ್ರಕ್ರಿಯೆ ಈಗಾಗಲೇ ಶೇ. 50ರಷ್ಟು ಮುಗಿದಿದ್ದರೂ, ಮಂಗಳೂರು ತಾಲೂಕಿನ ವಿವಿಧೆಡೆ ನಿಧಾನಗೊಳ್ಳುತ್ತಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಜನರ ಅರ್ಜಿ ವಿಲೇವಾರಿಯಾಗದೆ ಬಾಕಿಯಾಗಿದೆ. ಅಂತಹ ತೊಡಕುಗಳನ್ನು ನಿವಾರಿಸಿಕೊಂಡು ನಿಗದಿತ ದಿನಾಂಕದೊಳಗೆ ಸಕ್ರಮೀಕರಣ ನಡೆಯಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶ ನೀಡಿದರು.
ಕರಾವಳಿ ನಿಯಂತ್ರಣ ವಲಯ-ಸಿಆರ್‌ಝಡ್‌ನ 3ನೇ ವಲಯದಲ್ಲಿ 1991ರ ಅನಂತರ ವಾಸ್ತವ್ಯ ಇರುವವರು ಅರ್ಜಿ ಹಾಕಿದ್ದರೆ ಕಂದಾಯ ಮತ್ತು ಸಿಆರ್‌ಝಡ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಾಧಕ-ಬಾಧಕಗಳನ್ನು ವಿಮರ್ಶಿಸಬೇಕು. ಆದರೆ 1991ಕ್ಕಿಂತ ಮೊದಲು ಮನೆ ಕಟ್ಟಿ ವಾಸಿಸುತ್ತಿರುವವರ ಅರ್ಜಿ ವಿಲೇವಾರಿಗೆ ಯಾವುದೇ ತೊಡಕುಗಳಿಲ್ಲ. ಅಂತಹವರು ವಾಸ್ತವ್ಯದ ಬಗ್ಗೆ ಗ್ರಾಮ ಪಂಚಾಯತ್‌ನಿಂದ ಪತ್ರ ಪಡೆದುಕೊಂಡು ಅರ್ಜಿ ಸಲ್ಲಿಸಿದಲ್ಲಿ ಅದಕ್ಕೆ ಸಿಆರ್‌ಝಡ್ ಅಧಿಕಾರಿಗಳು ನಿರಾಕರಣೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ| ಕೆ. ಜಿ. ಜಗದೀಶ್ ಸೂಚಿಸಿದರು.
ಸಿಆರ್‌ಝಡ್ ಹೊರತುಪಡಿಸಿ ಇತರ ಜಮೀನಿನಲ್ಲಿ 2012ರ ಮೊದಲು ಮನೆ ಕಟ್ಟಿ ವಾಸಿಸುತ್ತಿರುವವರ ಎಲ್ಲ ಅರ್ಜಿಗಳನ್ನೂ ಪರಿಗಣಿಸಬಹುದು. ಆದರೆ ಅದು ಅತಿಕ್ರಮಿಸಿಕೊಂಡ ಖಾಸಗಿ ಜಾಗವಾಗಿರಬಾರದು. ರೋಡ್ ಮಾರ್ಜಿನ್‌ನ ಭೂಮಿ ಅಥವಾ ಡೀಮ್ಡ್ ಅರಣ್ಯವಾಗಿರಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಳ್ಳಾಲ ಕಡಲ್ಕೊರೆತ ಉಂಟಾಗುತ್ತಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕ್ರಮ ವಹಿಸಿ ಎಂದು ಸಚಿವ ಖಾದರ್ ನಿರ್ದೇಶಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯ ಕಂದಾಯ ನಿರೀಕ್ಷಕರು, ಈ ಪ್ರದೇಶದಲ್ಲಿ ಒಟ್ಟು 142 ಮಂದಿ ವಾಸ್ತವ್ಯದಲ್ಲಿದ್ದಾರೆ. ಅವರನ್ನು ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸುವ ಸಲುವಾಗಿ ಮುನ್ನೂರು, ಪಾವೂರು ಮುಂತಾದೆಡೆಗಳಲ್ಲಿ ಜಾಗ ಹುಡುಕಲಾಗುತ್ತಿದೆ. ಸುಮಾರು 8 ಎಕರೆ ಜಾಗ ಅಷ್ಟು ಜನರಿಗೆ ಅಗತ್ಯವಾಗಿ ಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.