ಕುಮಾರ ಪರ್ವತ :ಚಾರಣಕ್ಕೆ ತೆರಳಿದ ಬೆಂಗಳೂರಿನ ವ್ಯಕ್ತಿ ನಾಪತ್ತೆ
Team Udayavani, Sep 16, 2019, 7:29 PM IST
ಸುಬ್ರಹ್ಮಣ್ಯ : ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕುಮಾರ ಪರ್ವತ ಚಾರಣಕ್ಕೆ ತೆರಳಿದ ಬೆಂಗಳೂರು ಮೂಲದ 12 ಮಂದಿ ಚಾರಣಿಗರ ಪೈಕಿ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಸಂತೋಷ್ ರವಿವಾರ ಗಿರಿಗದ್ದೆಯಲ್ಲಿ ನಾಪತ್ತೆಯಾಗಿದ್ದಾರೆ.
ಚಾರಣಿಗರ 12 ಮಂದಿ ತಂಡ ಶುಕ್ರವಾರ ಅಗಮಿಸಿ ಸುಬ್ರಹ್ಮಣ್ಯದ ದೇವರಗದ್ದೆ ಮಾರ್ಗವಾಗಿ ಕುಮಾರ ಪರ್ವತಕ್ಕೆ ಚಾರಣ ಬೆಳೆಸಿತ್ತು.ಗಿರಿಗದ್ದೆಯಲ್ಲಿ ತಂಗಿದ್ದ ತಂಡ ರವಿವಾರ ಶೇಷ ಪರ್ವತ ತನಕ ಚಾರಣಗೈದು ವಾಪಸ್ಸಾಗಿತ್ತು.ಸಂಜೆ 4.30 ರ ವೇಳೆಗೆ ಗಿರಿಗದ್ದೆ ಭಟ್ರ ಮನೆಯಲ್ಲಿ ಊಟ ಮಾಡಿ ತಂಡವು ವಾಪಸ್ಸು ಊರಿಗೆ ಹೊರಟಿದ್ದರು.ತಂಡದಲ್ಲಿದ್ದ 5 ಮಂದಿ ಮೊದಲಿಗೆ ಹೊರಟು ಬಂದಿದ್ದು ನಂತರ ಸಂತೋಷ್ ಒರ್ವನೆ ಬಂದಿದ್ದ ಅವರ ಹಿಂದಿಂದ 6 ಮಂದಿ ಬರುತಿದ್ದರು.ಈ ನಡುವೆ ಮದ್ಯದಲ್ಲಿದ್ದ ವ್ಯಕ್ತಿ ಕೇವಲ 10 ನಿಮಿಷ ಅಂತರದಲ್ಲಿ ಕಾಣೆಯಾಗಿದ್ದಾನೆ.
ಚಾರಣ ತಂಡದಲ್ಲಿದ್ದವರು ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಖಾಸಗಿ ಉದ್ಯೋಗಿಗಳು. ಘಟನೆ ನಡೆದ ಬಳಿಕ ರಾತ್ರಿಯೆ ವೈಲ್ಡ್ ಲೈಪ್ ಅಧಿಕಾರಿಗಳ ಮಾಹಿತಿ ನೀಡಿದ್ದು ಹುಡುಕಾಟ ನಡೆಸಲಾಗಿದೆ. ಆದರೆ ಸುಳಿವು ಸಿಕ್ಕಿಲ್ಲ.ತಂಡದಲ್ಲಿದ್ದವರು ಸೋಮವಾರ ಕುಕ್ಕೆಗೆ ಆಗಮಿಸಿದ್ದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಲು ಸಿದ್ದತೆ ನಡೆಸುತಿದ್ದಾರೆ.
ಚಾರಣಕ್ಕೆ ಸೂಕ್ತ ಸಮಯವಲ್ಲ :
ಇಲ್ಲಿ ಚಾರಣ ಮಾಡುವುದು ಈಗ ಸಮಯ ಸೂಕ್ತವಲ್ಲ. ಈ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ.ಇದರ ನಡುವೆಯು ಚಾರಣಿಗರು ಅರಣ್ಯ ಪ್ರವೇಶಿಸಿದ್ದು ಇದೀಕ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಕಾಣೆಯಾಗಿರುವುದನ್ನು ಯುವಕನ ಸ್ನೇಹಿತ ವಿನಯ್ ಖಚಿತ ಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.