ಸ್ವಚ್ಛ ಪರಿಸರಕ್ಕೆ ಮಾದರಿಯಾದ ಹೊಟೇಲ್
ಯುವಕ ಮಂಡಲದಿಂದ ಕೊಳಚೆ ನೀರಿಗೆ ಇಂಗುಗುಂಡಿ ನಿರ್ಮಾಣ
Team Udayavani, Apr 12, 2019, 6:00 AM IST
ಕನಕಮಜಲಿನ ಶ್ರೀರಾಮ್ ಪೇಟೆಯಲ್ಲಿರುವ ಹೊಟೇಲ್ ಶ್ರೀರಾಮ….
ಕನಕಮಜಲು: ಪರಿಸರ ಮಾಲಿನ್ಯ ತಡೆಗೆ ಗ್ರಾಮೀಣ ಜನರೂ ಇತ್ತೀಚೆಗೆ ಒಲವು ತೋರುತ್ತಿದ್ದಾರೆ. ಕನಕ ಮಜಲು ಯುವಕ ಮಂಡಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾದರಿ ವ್ಯವಸ್ಥೆಯೊಂದನ್ನು ರೂಪಿಸಿದೆ. ಕನಕಮಜಲಿನ ಹೊಟೇಲ್‌ನಿಂದ ಹರಿಯುವ ಕೊಳಚೆ ನೀರಿಗೆ ಪ್ರತ್ಯೇಕ ಇಂಗು ಗುಂಡಿಯನ್ನು ನಿರ್ಮಿಸಿ ಸ್ವತ್ಛ ಪರಿಸರಕ್ಕೆ ಮಾದರಿಯಾಗಿದೆ.
ಕನಕಮಜಲು ಶ್ರೀರಾಂಪೇಟೆ ಯಲ್ಲಿರುವ ಹೊಟೇಲ್ ಶ್ರೀರಾಮದಲ್ಲಿ ಕೊಳಚೆ ನೀರು ಹರಿಯುವಿಕೆಗೆ ಇಂಗು ಗುಂಡಿಯನ್ನು ನಿರ್ಮಿಸಲಾಗಿದೆ. ಹೊಟೇಲ್‌ನಲ್ಲಿ ಕೈ ಹಾಗೂ ಪಾತ್ರೆ ತೊಳೆದ ನೀರು ನೇರ ಇಂಗು ಗುಂಡಿಗೆ ಹೋಗುತ್ತಿದೆ. ನೆಹರೂ ಯುವ ಕೇಂದ್ರ ಮಂಗಳೂರು, ಮಹಾತ್ಮಾ ಗಾಂಧಿ ಯುವ ಸ್ವಚ್ಛ ಮಹಾ ಅಭಿಯಾನ್, ಯುವಜನ ವಿಕಾಸ ಕೇಂದ್ರ-ಯುವಕ ಮಂಡಲ ಕನಕಮಜಲು ಅವರ ಸ್ವತ್ಛತಾ ಹಿ ಸೇವಾ ಎನ್ನುವ ಅಭಿಯಾನದ ಮೂಲಕ ಈ ಕಾರ್ಯ ನಡೆಸಲಾಗಿದೆ. ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ನೆಹರೂ ಯುವಕೇಂದ್ರ ಮಂಗಳೂರು ಇವರ ಮಹಾತ್ಮಾ ಗಾಂಧಿ ಸ್ವತ್ಛ ಮಹಾ ಅಭಿಯಾನ್ ಯೋಜನೆಯಲ್ಲಿ ಕನಕಮಜಲು ಯುವಕ ಮಂಡಲ ಈ ಕಾಮಗಾರಿಯನ್ನು ನಡೆಸಿದೆ.
ಶ್ರಮದಾನ
ಹೊಟೇಲ್ ಪಕ್ಕದಲ್ಲಿಯೇ ನಿರ್ಮಿಸಲಾಗಿರುವ ಇಂಗು ಗುಂಡಿ ಸುಮಾರು 6 ಅಡಿ ಆಳವಿದೆ. ಕನಕ ಮಜಲು ಯುವಕ ಮಂಡಲದ ಸದಸ್ಯರು ಶ್ರಮದಾನದ ಮೂಲಕ ಈ ಗುಂಡಿಯನ್ನು ನಿರ್ಮಿಸಿದ್ದಾರೆ. ಸ್ಥಳೀಯ ನಿವಾಸಿಯೋರ್ವರು ಗುಂಡಿ ತೋಡಲು ತಮ್ಮ ಹಿಟಾಚಿ ಕೊಟ್ಟು ಸಹಕರಿಸಿದ್ದಾರೆ. ಗುಂಡಿಯ ಒಳಗೆ ರಿಂಗ್ ಅಳವಡಿಸಲಾಗಿದೆ.
ಪೈಪ್ ಅಳವಡಿಕೆ
ಕೊಳಚೆ ನೀರು ಹರಿಯಲು ಪೈಪ್ ಅಳವಡಿಸಿ ಸಿಮೆಂಟಿನ ಮುಚ್ಚಳಿಕೆ ಹಾಕಲಾಗಿದೆ. ಈ ಇಂಗು ಗುಂಡಿಗೆ ಸುಮಾರು 8 ಸಾವಿರ ರೂ. ಖರ್ಚು ತಗಲಿದೆ. 2 ಸಾವಿರ ರೂ.ಗಳನ್ನು ಹೊಟೇಲ್ ಮಾಲಕರು ಹಾಗೂ ಉಳಿದ ಹಣವನ್ನು ಮಂಗಳೂರು ನೆಹರೂ ಯುವ ಕೇಂದ್ರ ಭರಿಸಿದೆ.
ಪರಿಸರ ಮಾಲಿನ್ಯಕ್ಕೆ ತಡೆ
ಪರಿಸರ ಮಲಿನವಾಗದಂತೆ ತಡೆಯುವುದಕ್ಕೆ ಇಂಗುಗುಂಡಿ ನಿರ್ಮಿಸಲಾಗಿದೆ. ಸ್ವತ್ಛತೆಗೆ ಒತ್ತು ಕೊಟ್ಟು ಈ ರೀತಿಯ ವ್ಯವಸ್ಥೆ ಮಾಡಿದ್ದೇವೆ. ಹಲವರ ಸಹಕಾರದಿಂದ ಈ ಕಾರ್ಯ ಕೈಗೂಡಿದೆ. ಸ್ವತ್ಛತೆಗೆ ಎಲ್ಲರೂ ಆದ್ಯತೆ ಕೊಡಬೇಕು.
ಮೋಹನ್, ಶ್ರೀರಾಮ… ಹೊಟೇಲ್ ಮಾಲಕ
ಶಿವಪ್ರಸಾದ್ ಮಣಿಯೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.