ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!
ಮಂಗಳೂರು ನಗರ ವ್ಯಾಪ್ತಿ: ರಾಷ್ಟ್ರೀಯ ಹೆದ್ದಾರಿ
Team Udayavani, Oct 29, 2020, 5:10 AM IST
ಮುನ್ಸೂಚನೆ ಇಲ್ಲದ ಪಂಪ್‌ವೆಲ್ ಸರ್ವೀಸ್ ರಸ್ತೆ.
ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೊಕ್ಕೊಟ್ಟು ಜಂಕ್ಷನ್ ಬಳಿ ಅವೈಜ್ಞಾನಿಕವಾಗಿ ಫ್ಲೈ ಓವರ್ ನಿರ್ಮಿಸಿರುವುದರ ಪರಿಣಾಮ ಮಂಗಳ ವಾರ ಲಾರಿ, ಬೈಕ್ ಢಿಕ್ಕಿಯಾಗಿ ನವದಂಪತಿ ಸಾವಿಗೆ ಕಾರಣವಾಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಈ ಹೆದ್ದಾರಿಗೆ ಹಲವು ಕಡೆ ಅವೈಜ್ಞಾನಿಕ ರೀತಿಯ ತಿರುವು ನೀಡಿದ್ದು, ವಾಹನ ಸವಾರರು ಅದರಲ್ಲಿಯೂ ದ್ವಿಚಕ್ರ ಸವಾರರು ಪ್ರಾಣಭೀತಿಯಿಂದ ಸಂಚರಿಸುವ ದುಃಸ್ಥಿತಿ ಎದುರಾಗಿದೆ!
ತೊಕ್ಕೊಟ್ಟು ಫ್ಲೆ$çಓವರ್‌ನಂತೆಯೇ ಪಂಪ್‌ವೆಲ್ ಫ್ಲೆ$çಓವರ್ ಬಳಿಯೂ ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುವ ರೀತಿಯ ಅಪಾಯಕಾರಿ ತಿರುವು ಇದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರ ಪ್ರವೇಶ ಪಡೆಯುವ ಫ್ಲೈಓವರ್‌ನಲ್ಲಿ ಒಂದು ರಸ್ತೆ ಫ್ಲೈಓವರ್ ಮೇಲ್ಗಡೆಗೆ ಹೋಗುತ್ತಿದ್ದರೆ, ಮತ್ತೂಂದು ನಗರ ಪ್ರವೇಶಿಸುವ ಸರ್ವೀಸ್ ರಸ್ತೆಯಾಗಿದೆ. ಸಾಮಾನ್ಯವಾಗಿ ಹೆದ್ದಾರಿಯಲ್ಲಿ ಈ ರೀತಿಯ ತಿರುವು ನೀಡಿರಬೇಕಾದರೆ ಅಲ್ಲಿ ವಾಹನ ಸವಾರರಿಗೆ ಮುನ್ಸೂಚನೆ ನೀಡುವ ರಸ್ತೆ ಚಿಹ್ನೆಗಳನ್ನು ಹಾಕಿರಬೇಕು. ಜತೆಗೆ, ವಾಹನಗಳು ವೇಗ ಮಿತಿಯನ್ನು ನಿಯಂತ್ರಿಸುವುದಕ್ಕೂ ಸೂಕ್ತ ಸುರಕ್ಷ ಕ್ರಮಗಳನ್ನು ಅಳವಡಿಸಿರಬೇಕು. ಆದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅದರಲ್ಲಿಯೂ ಫ್ಲೈಓವರ್ ಪ್ರವೇಶದ ಪ್ರಾರಂಭದಲ್ಲಿ ಯಾವುದೇ ರಸ್ತೆ ಸುರಕ್ಷ ಕ್ರಮಗಳನ್ನು ಅಳವ ಡಿಸದೆ ಅವೈಜ್ಞಾನಿಕ ತಿರುವು ನೀಡಲಾಗಿದೆ. ಇನ್ನೊಂದೆಡೆ, ಫ್ಲೈಓವರ್‌ನಿಂದ ಸರ್ವೀಸ್ ರಸ್ತೆಗೆ ತಿರುವು ಪಡೆಯುವ ಜಾಗವೂ ತುಂಬಾ ಕಿರಿದಾಗಿದೆ. ಜತೆಗೆ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವಲ್ಲಿನ ಸರ್ವೀಸ್ ರಸ್ತೆ ಕೂಡ ಕಿರಿದಾಗಿದ್ದು, ಸವಾರರು ಸಂಕಷ್ಟ ಎದುರಿ ಸುತ್ತಿದ್ದಾರೆ. ತೊಕ್ಕೊಟ್ಟು ಕಡೆಯಿಂದ ಬರುವ ವಾಹನದವರು ಇಲ್ಲಿ ಸರ್ವೀಸ್ ರಸ್ತೆಗೆ ತಿರುಗುವ ಸೂಚನೆ ನೀಡದಿದ್ದರೆ ಅಪಘಾತ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಮಂಗಳೂರು ನಗರ ಪ್ರವೇಶದ ಗುರುತು (ಸೈನ್ ಬೋರ್ಡ್) ಕೂಡ ದೂರದಲ್ಲಿ ಸಣ್ಣದಾಗಿ ಬರೆಯ ಲಾಗಿದ್ದು, ವಾಹನ ಸವಾರರಿಗೆ ಕಾಣಿಸುವುದಿಲ್ಲ. ಅದೇ ರೀತಿ, ರಾಷ್ಟ್ರೀಯ ಹೆದ್ದಾರಿಯಿಂದ ಕುಂಟಿಕಾನ, ಕೊಟ್ಟಾರ ಚೌಕಿ ಸಂಪರ್ಕ ತಿರುವು ಕೂಡ ಅಪಾಯಕ್ಕೆ ಆಹ್ವಾನ ನೀಡು ವಂತಿದೆ. ನಂತೂರು ಕಡೆಯಿಂದ ಬರು ವಾಗ ಈ ತಿರುವು ಇದ್ದು, ಹೆದ್ದಾರಿಯಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ಅಳವಡಿಸಲಿಲ್ಲ. ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆಯಿಂದ ವಾಹನ ಗಳು ವೇಗವಾಗಿ ಬರುತ್ತಿವೆ. ಈ ಸಮಯ ಸರ್ವೀಸ್ ರಸ್ತೆಗೆ ವಾಹನಗಳು ತಿರುಗುವ ವೇಳೆ ಅನಾಹುತ ಸಂಭವಿಸುವ ಅಪಾಯವಿದೆ.
ಮುನ್ಸೂಚನೆ ಇಲ್ಲದ ತಿರುವು
ಸರ್ವೀಸ್ ರಸ್ತೆಯ ಯಾವುದೇ ಮೂಲೆಯಲ್ಲೂ ಮುನ್ಸೂಚನೆಯಿಲ್ಲದೆ ಯಮರೂಪಿ ತಿರುವುಗಳಿವೆ. ಇದು ರಾ.ಹೆ. 66ರ ಕುಂಟಿಕಾನ ಬಳಿಯ ಖಾಸಗಿ ಹೊಟೇಲ್‌ವೊಂದರ ಬಳಿಯ ವಾಸ್ತವ ಸ್ಥಿತಿ. ಈ ಪ್ರದೇಶ ಈಗಾಗಲೇ ಅಪಘಾತ ವಲಯವಾಗಿ ಮಾರ್ಪಾಡಾಗಿದೆ. ಕುಂಟಿಕಾನ ಫ್ಲೆ çಓವರ್ ಕಡೆ ಯಿಂದ ಹೆದ್ದಾರಿ ಸಂಪರ್ಕಕ್ಕೆ ಎರಡೂ ಬದಿಯಲ್ಲಿ ಸರ್ವೀಸ್ ರಸ್ತೆಗಳಿವೆ. ದೇರೆಬೈಲ್, ಕುಂಟಿಕಾನ, ಕಾಪಿಕಾಡ್ ಸುತ್ತಮುತ್ತಲಿನ ಮಂದಿ ಹೆದ್ದಾರಿ ಸಂಪರ್ಕಕ್ಕೆ ಇದೇ ಸರ್ವೀಸ್ ರಸ್ತೆ ಉಪಯೋಗಿಸುತ್ತಾರೆ. ದಡ್ಡಲಕಾಡು ಬಳಿ ಯಿಂದಲೂ ಸರ್ವೀಸ್ ರಸ್ತೆಯೊಂದು ಇದೇ ಹೆ. ಸಂಪರ್ಕ ಪಡೆದಿದೆ. ಇದು ಅವೈಜ್ಞಾನಿಕವಾಗಿದ್ದು, ಕುಂಟಿಕಾನ ಕಡೆಯಿಂದ ಬರುವ ವಾಹನ, ದಡ್ಡಲಕಾಡು ಕಡೆಯಿಂದ ಬರುವ ವಾಹನಗಳು ಒಂದೇ ಕಡೆ ರಾ.ಹೆ.ಗೆ ಸಂಪರ್ಕ ಪಡೆಯುತ್ತವೆ. ಇಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ.
ನಂತೂರು ವೃತ್ತದಲ್ಲಿ ಸಮಸ್ಯೆ
ಸದಾ ವಾಹನಗಳ ದಟ್ಟಣೆಯಿಂದ ಕೂಡಿದ ನಂತೂರು ವೃತ್ತ ಪ್ರದೇಶವು ಸಂಚಾರಕ್ಕೆ ಸಮಸ್ಯೆಯಾಗಿ ಮಾರ್ಪಾಡಾಗುತ್ತಿದೆ. ಅವೈಜ್ಞಾನಿಕ ವೃತ್ತ ಮತ್ತು ರಸ್ತೆಯಿಂದಾಗಿ ಇಲ್ಲಿ ಸದಾ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಪಂಪ್‌ವೆಲ್, ಪಡೀಲ್, ಕೊಟ್ಟಾರ, ಕದ್ರಿ ನಾಲ್ಕೂ ಕಡೆಗಳಿಂದ ವಾಹನಗಳು ಬರುತ್ತಿವೆ. ಈ ನಡುವೆ ಸಾಮಾನ್ಯವಾಗಿ ನಂತೂರು ವೃತ್ತದಲ್ಲಿ ಇಬ್ಬರು ಪೊಲೀಸರು ಮಾತ್ರ ಕರ್ತವ್ಯ ನಿರ್ವಹಿಸುತ್ತಾರೆ. ಹೀಗಿದ್ದಾಗ ನಾಲ್ಕೂ ಕಡೆಗಳಲ್ಲಿ ವಾಹನ ನಿಯಂತ್ರಣ ಕಷ್ಟ ಸಾಧ್ಯ. ಅದೇ ರೀತಿ ಕೊಟ್ಟಾರ ಮೇಲ್ಸೇತುವೆ ಇಳಿಯುತ್ತಿದ್ದಂತೆ ಕೋಡಿಕಲ್ ಕ್ರಾಸ್ ಬಳಿ ಅವೈಜ್ಞಾನಿಕವಾದ ಅಪಾಯಕಾರಿ ರಸ್ತೆ ತಿರುವು ಇದೆ. ಈ ಭಾಗದಲ್ಲಿ ಯೂಟರ್ನ್ ಅಥವಾ ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ವಾಹನಗಳ ಪ್ರವೇಶಕ್ಕೆ ಯಾವುದೇ ರೀತಿಯ ಸೂಚನ ಫಲಕವಿಲ್ಲ.
ಕಾನ್ವೆಕ್ಸ್ ಮಿರರ್ ಅಳವಡಿಕೆ
ನಗರದ ಕೆಲವೊಂದು ಕಡೆಗಳಲ್ಲಿ ಅಪಾಯಕಾರಿ ರಸ್ತೆಗಳಿವೆ. ಅದರಲ್ಲಿಯೂ ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್ ರಸ್ತೆ ಸಂಪರ್ಕ ತಿರುವಿನಲ್ಲಿ ಮುನ್ನೆಚ್ಚರಿಕೆ ಕ್ರಮ ಅಳವಡಿಸಲಾಗುವುದು. ಈ ರೀತಿಯ ಜಾಗಗಳಲ್ಲಿ ಸದ್ಯದಲ್ಲಿಯೇ ಕಾನ್ವೆಕ್ಸ್ ಮಿರರ್, ಬ್ಯಾರಿಕೇಡ್ ಅಳವಡಿಸಿ ಮುಂಜಾಗ್ರತೆ ವಹಿಸಲಾಗುವುದು.
-ನಟರಾಜ್, ಮಂಗಳೂರು ಟ್ರಾಫಿಕ್ ಎಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.