ವಿದ್ಯಾರಶ್ಮಿ ಕಾಲೇಜು ಎನ್ನೆಸೆಸ್ ಘಟಕದಿಂದ ‘ಗ್ರಾಮಡೊಂಜಿ ದಿನ’
Team Udayavani, Jul 15, 2017, 2:35 AM IST
ಸವಣೂರು: ಭತ್ತ ಪ್ರಮುಖ ಆಹಾರ ಬೆಳೆ. ಆದರೂ ಹೆಚ್ಚಿನ ಯುವ ಪೀಳಿಗೆಗೆ ಅದನ್ನು ಯಾವ ರೀತಿ ಬೆಳೆಯಲಾಗುತ್ತದೆ ಎಂಬ ಮಾಹಿತಿ ಕಡಿಮೆ. ಈಗ ಗದ್ದೆಯನ್ನು ಕಾಣುವುದೇ ಅಪರೂಪ. ಇಂತಹ ವಿದ್ಯಮಾನಗಳಿಂದ ಮಕ್ಕಳಿಗೆ ಭತ್ತದ ಬೆಳೆ ಬೆಳೆಯುವ ಬಗೆ, ನಾಟಿ ಮೊದಲಾದ ವಿಚಾರಗಳು ತಿಳಿದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಭತ್ತದ ಕೃಷಿಯ ಬಗ್ಗೆ ಆಸಕ್ತಿ ಹಾಗೂ ತಿಳುವಳಿಕೆ ಮೂಡಿಸಲು ಸವಣೂರು ವಿದ್ಯಾರಶ್ಮಿ ರಾಷ್ಟ್ರೀಯ ಸೇವಾಯೋಜನೆಯ ಘಟಕದ ವತಿಯಿಂದ ‘ಗ್ರಾಮಡೊಂಜಿ ದಿನ’ ಕಾರ್ಯಕ್ರಮ ಸವಣೂರು ರಾಘವ ಗೌಡರ ಭತ್ತದ ಗದ್ದೆಯಲ್ಲಿ ಶುಕ್ರವಾರ ನಡೆಯಿತು.
ಶಾಲಾ ವಿದ್ಯಾರ್ಥಿಗಳಿಗೆ ಭತ್ತದ ಗದ್ದೆಯಲ್ಲಿ ಪರಿಣತರಿಂದ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ಆಸಕ್ತಿಯಿಂದ ಗದ್ದೆಗೆ ಇಳಿದರು. ಗದ್ದೆ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರ ಬಾಯಿಯಿಂದ ಕೇಳಿಬರುತ್ತಿದ್ದ ‘ಓ ಬೇಲೇ ಓ ಬೇಲೆ..’ ಹಾಡು ಇವರ ಬಾಯಲ್ಲೂ ಸರಾಗವಾಗಿ ಕೇಳಿಬಂದವು. ಹಿಂದಿನ ಕಾಲದವರು ಕೃಷಿಯ ನಂಟನ್ನು ಬಿಡದೆ ನೇಜಿ ನಾಟಿ ಮಾಡುವ ಸಮಯದಲ್ಲಿ ತಮ್ಮನ್ನು ತಾವೇ ಹುರಿದುಂಬಿಸಿಕೊಳ್ಳಲು ಜಾನಪದ ಹಾಡು, ಪಾಡ್ದನಗಳನ್ನು ಹೇಳುತ್ತಿದ್ದರು. ಈ ಹಾಡನ್ನೂ ವಿದ್ಯಾರ್ಥಿಗಳೂ ಹಾಡಿ ಸಂಭ್ರಮಿಸಿದರು. ಭತ್ತದ ಕೃಷಿಯಿಂದ ದೂರ ಸರಿಯುವ ಕಾಲದಲ್ಲಿ ವಿದ್ಯಾರ್ಥಿಗಳು, ಯುವ ಜನತೆ ಕೃಷಿಯ ಬಗ್ಗೆ ನೈಜ ತಿಳುವಳಿಕೆ ಬೆಳೆಸಿಕೊಳ್ಳಬೇಕಾದರೆ ಸ್ವತಃ ಗದ್ದೆಗಿಳಿದು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂಬುದನ್ನು ಮನಗಂಡು ವಿದ್ಯಾರ್ಥಿಗಳನ್ನು ಗದ್ದೆಯ ಬಳಿ ಕರೆದುಕೊಂಡು ಅವರಿಗೆ ನೈಜತೆಯನ್ನು ಮನದಟ್ಟು ಮಾಡಿಸುವ ಪ್ರಯತ್ನ ಮಾಡಲಾಯಿತು.
ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ ಎಸ್. ಶೆಟ್ಟಿ, ರಾ. ಸೇವಾ ಯೋಜನೆ ಘಟಕದ ಸಂಯೋಜಕ ವೆಂಕಟ್ರಮಣ ನಾೖಕ್ ಎನ್. ಹಾಗೂ ಸಹಸಂಘಟಕರಾದ ಗುರುರಾಜ್ ಕೆ., ವಿದ್ಯಾಲತಾ ಕೆ., ರಘುನಾಥ್ ಬಿ. ಎಸ್., ಲೋಕೇಶ್, ಶ್ರೀ ಕೀರ್ತನ್, ಧೀರಜ್ ಶೆಟ್ಟಿ ಎಂ., ಮನೋಹರ್ ಮೆದು ಹಾಗೂ ವಿದ್ಯಾರ್ಥಿ ಸ್ವಯಂ ಸೇವಕರಾದ ವಿನಯ್ ಎಚ್., ಶಿಶ್ಮಿತಾ, ಪ್ರತಾಪ್ ಹಾಗೂ ಉಮಾವತಿ ಅವರು ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಭಾಗವಹಿಸಿದ್ದರು. ಗ್ರಾಮದ ಜನತೆ ಸಹಕರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ
PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.