ಜನಾಕರ್ಷಣೆಯ ತಾಣ- ಅಂಚೆ ಚೀಟಿ, ಹಳೆಯ ನಾಣ್ಯ ಮತ್ತು ನೋಟುಗಳ ಪ್ರದರ್ಶನ


Team Udayavani, Oct 12, 2019, 5:25 AM IST

d-5

ಮಧುಕರ್‌ ಜಿಂಗನ್‌ ಅವರು ಉದ್ಘಾಟಿಸಿದರು.

ಮಹಾನಗರ: ನಗರದ ಎಂ.ಜಿ. ರಸ್ತೆಯ ದೀಪಾ ಕಂಫರ್ಟ್ಸ್ ಹೊಟೇಲ್‌ ಸಭಾಂಗಣದಲ್ಲಿ ಫಿಲಾಟೆಲಿಕ್‌ ಡೀಲರ್ ಅಸೋಸಿಯೇಶನ್‌, ಇಂಡಿಯಾ ವತಿಯಿಂದ ಏರ್ಪಡಿಸಿರುವ ಅಂಚೆ ಚೀಟಿಗಳು, ಹಳೆಯ ನಾಣ್ಯ ಮತ್ತು ನೋಟುಗಳ ಪ್ರದರ್ಶನವು ಜನರ ಆಕರ್ಷಣೆಯ ತಾಣವಾಗಿದೆ.

ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಿಸುವ ಹವ್ಯಾಸಿಗಳು ಮತ್ತು ಮಾರಾಟಗಾರರು ಸೇರಿಕೊಂಡು ಈ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಿದ್ದು, ದೇಶಾದ್ಯಂತದ 20 ಮಂದಿ ಡೀಲರ್‌ಗಳು ದೇಶ ವಿದೇಶಗಳ ಅಂಚೆ ಚೀಟಿಗಳು, ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ.

ಪ್ರದರ್ಶನದ ಉದ್ಘಾಟನೆಯನ್ನು ಶುಕ್ರವಾರ ಫಿಲಾಟೆಲಿಕ್‌ ಡೀಲರ್ ಅಸೋಸಿಯೇಶನ್‌, ಇಂಡಿಯಾದ ಅಧ್ಯಕ್ಷ ಮಧುಕರ್‌ ಜಿಂಗನ್‌ ಅವರು ನೆರವೇರಿಸಿದರು. ಅಂಚೆ ಚೀಟಿಗಳು, ನಾಣ್ಯಗಳನ್ನು ಮತು ಕರೆನ್ಸಿಗಳನ್ನು ಸಂಗ್ರಹಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಢಿಸುವುದು ಹಾಗೂ ವಿಶೇಷವಾಗಿ ಯುವಕರನ್ನು ಈ ಹವ್ಯಾಸದಲಿಯಲ ತೊಡಗಿಸುವುದು ಈ ಪ್ರದರ್ಶನದ ಉದ್ದೇಶ ಎಂದವರು ಈ ಸಂದರ್ಭದಲ್ಲಿ ಹೇಳಿದರು.

ಚಿನ್ನ, ಬೆಳ್ಳಿ ಮತ್ತಿತರ ಲೋಹಗಳಿಂದ ಹಾಗೂ ರಬ್ಬರ್‌, ರೇಶ್ಮೆ, ಮೀನಿನ ಚರ್ಮ ಇತ್ಯಾದಿಗಳಿಂದ ತಯಾರಿಸಿದ ನಾಣ್ಯಗಳು, ವಿವಿಧ ಗಾತ್ರದ ಅಂಚೆ ಚೀಟಿಗಳು, ಪಾಂಡಿಚೇರಿಯಲ್ಲಿ ಫ್ರೆಂಚ್‌ ಆಡಳಿತದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಇಂಡೊ- ಫ್ರೆಂಚ್‌ ನಾಣ್ಯಗಳು, ಬ್ರಿಟಿಷ್‌ ಇಂಡಿಯಾ ನೋಟುಗಳು, ಗಾಂಧಿ ಅಂಚೆ ಚೀಟಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಈ ಪ್ರದರ್ಶನವು ಅ. 13 ರ ತನಕ ಇರುತ್ತದೆ ಎಂದು ಅಸೋಸಿಯೇಶನ್‌ನ ಉಪಾಧ್ಯಕ್ಷ ಎ.ವಿ.ಜಯಚಂದ್ರನ್‌ ತಿಳಿಸಿದರು.

ಮಂಗಳೂರಿನ ನಾಗರಾಜ ಶೇಟ್‌ ಅವರು ತನ್ನ ಬಳಿ 1835 ರಿಂದ 1943 ವರೆಗಿನ ಬೆಳ್ಳಿ ನಾಣ್ಯಗಳ ಸಂಗ್ರಹವಿದೆ. ನಾಣ್ಯಗಳ ಸಂಗ್ರಹದ ಜತೆಗೆ ಮಾರಾಟವನ್ನೂ ಮಾಡುತ್ತಿದ್ದೇನೆ ಎಂದು ಉದಯವಾಣಿ ಜತೆ ಮಾತನಾಡುತ್ತಾ ತಿಳಿಸಿದರು.

ಕೊಚ್ಚಿಯ ಜೊಸೆಫ್‌ ಡಿ’ಕೋತೊ ಮತ್ತು ಜೇಮ್ಸ್‌ ವಿ.ಪಿ. ಅವರು ಭಾರತ ಮಾತ್ರವಲ್ಲದೆ ಹಲವು ವಿದೇಶಗಳ ಅಂಚೆ ಚೀಟಿ, ನೋಟುಗಳು ಮತ್ತು ನಾಣ್ಯಗಳನ್ನು ಪ್ರದರ್ಶಿಸಿದ್ದಾರೆ. ಜಗತ್ತಿನ ಮೊದಲ ಪ್ಲಾಸ್ಟಿಕ್‌ ನಾಣ್ಯ, ವಿವಿಧ ರಾಜ ಮನೆತನದ ಮದುವೆಗಳ ಫೋಟೊಗಳು ಇವರ ಸಂಗ್ರಹದಲ್ಲಿದೆ.

ಬೆಂಗಳೂರಿನ ಸಂತೋಷ್‌ ಅವರ ಬಳಿ 107 ದೇಶಗಳ ನೋಟುಗಳ ಸಂಗ್ರಹವಿದೆ. ಚೆನ್ನೈನ ಅರವಮುತ್ತನ್‌ ಅವರ ಹವ್ಯಾಸ ವಿದೇಶಿ ನಾಣ್ಯ, ನೋಟು ಮತ್ತು ಅಂಚೆ ಚೀಟಿ ಸಂಗ್ರಹಕ್ಕೆ ಮೀಸಲಾಗಿದ್ದು, 250 ದೇಶಗಳ ನಾಣ್ಯಗಳು, 200 ದೇಶಗಳ ಕರೆನ್ಸಿ ನೋಟುಗಳು, 100 ದೇಶಗಳ ಗಾಂಧಿ ಕರೆನ್ಸಿಗಳ ಸಂಗ್ರಹವಿದೆ.

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Narimogru: ಕಾಲೇಜು ವಿದ್ಯಾರ್ಥಿನಿ ಆತ್ಮಹ*ತ್ಯೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.