ದ.ಕ., ಉಡುಪಿಯಲ್ಲಿಲ್ಲ ಸ್ಪಂದನೆ !ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ
ಮೀನಿನ ಮೌಲ್ಯವರ್ಧಿತ ಉತ್ಪನ್ನ ಘಟಕ ಸ್ಥಾಪನೆಗೆ ಹತ್ತಾರು ಅಡಚಣೆ
Team Udayavani, Jan 9, 2022, 6:10 AM IST
ಮಂಗಳೂರು: ಆತ್ಮ ನಿರ್ಭರ ಭಾರತ ಅಭಿಯಾನದಡಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಫ್‌ಎಂಇ) ಯೋಜನೆಯಲ್ಲಿ ಒಂದು ಜಿಲ್ಲೆಗೆ ಒಂದು ಉತ್ಪನ್ನ ಕಾರ್ಯಕ್ರಮ ಅನುಷ್ಠಾನಗೊಂಡು ವರ್ಷ ಕಳೆದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಘಟಕವೂ ಕಾರ್ಯಗತವಾಗಿಲ್ಲ.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೀನು ಹೇರಳವಾಗಿರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಮೀನಿನ ಮೌಲ್ಯ
ವರ್ಧಿತ ಉತ್ಪನ್ನ ತಯಾರಿ ಘಟಕ ಸ್ಥಾಪನೆಯನ್ನು ಆಯ್ದುಕೊಳ್ಳಲಾಗಿದೆ. ಆದರೆ ಒಂದೇ ಒಂದು ಘಟಕ ಆರಂಭವಾಗಿಲ್ಲ. ಮೀನಿನಿಂದ ಮೌಲ್ಯವರ್ಧಿತ ಉತ್ಪನ್ನಗಳಾದ ಫ್ತೈ, ಕಬಾಬ್, ಕಟ್ಲೆಟ್, ಒಣ ಸಿಗಡಿಯ ಚಟ್ನಿ, ಉಪ್ಪಿನ ಕಾಯಿ ಇತ್ಯಾದಿ ತಯಾ ರಿಸಬಹುದಾಗಿದೆ.
ಕೊರೊನಾದಿಂದ ಜನರು ತೊಂದರೆಗೆ ಒಳಗಾದ ಹಿನ್ನೆಲೆಯಲ್ಲಿ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವ
ನಿಟ್ಟಿನಲ್ಲಿ ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಈ ಯೋಜನೆಯನ್ನು ಅನುಷ್ಠಾನಿಸಲಾ ಗಿತ್ತು, ಈ ಕುರಿತು ಪ್ರಚಾರ ಮಾಡಲು ಇಲಾಖೆ ಯಿಂದ ವಿವಿಧ ಕ್ರಮ, ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳ ನೇಮಕ ಮಾಡ
ಲಾಗಿದೆ. ಕೃಷಿ, ಮೀನುಗಾರಿಕೆ, ತೋಟಗಾರಿಕೆ ಇಲಾಖೆ ಮತ್ತುನಬಾರ್ಡ್ ಅನ್ನು ಸೇರಿಸಿಕೊಂಡು ಜಿ.ಪಂ.ನಲ್ಲಿ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ಆದರೆ ಘಟಕ ಆರಂಭದಲ್ಲಿ ನಿರೀಕ್ಷಿತ ಪ್ರಗತಿ ಕಂಡು ಬಂದಿಲ್ಲ.
ಕಾರಣಗಳು
ಒಂದು ಘಟಕವೂ ಆರಂಭ ಆಗದಿರಲು ಕೆಲವು ತಾಂತ್ರಿಕ ಅಡಚಣೆಗಳು ಕಾರಣ ಎನ್ನಲಾಗುತ್ತಿದೆ. ಮುಖ್ಯವಾಗಿ ಘಟಕ ಆರಂಭಿಸಲು ಸ್ವಂತ ಜಾಗ ಅಥವಾ ಲೀಸ್ ಮೇಲೆ ಪಡೆದ ಜಾಗ ಇರಬೇಕು. ಬ್ಯಾಂಕ್ ಸಾಲ ಪಡೆಯ ಬೇಕಾಗಿರುವ ಹಿನ್ನೆಲೆಯಲ್ಲಿ ಜಾಗಕ್ಕೆ ಸಂಬಂಧಿಸಿ ಸಮರ್ಪಕವಾದ ದಾಖಲೆ ಪತ್ರಗಳೂ ಅಗತ್ಯ. ತಯಾರಿಸುವ ಉತ್ಪನ್ನಗಳು ಆರೋಗ್ಯಕರ ರೀತಿಯಲ್ಲಿ ಪ್ಯಾಕ್ ಮಾಡಿರ ಬೇಕು. ಘಟಕವು ಲೈಸನ್ಸ್ ಹೊಂದಿದ್ದು, ಫುಡ್ ಸೆಕ್ಯುರಿಟಿ ಅಥಾರಿಟಿ ಆಫ್ ಇಂಡಿಯಾದಿಂದ ಪ್ರಮಾಣ ಪತ್ರ ಪಡೆದಿರ ಬೇಕು. ಮೀನನ್ನು ಒಣಗಿಸಲು ಸೂಕ್ತ ಜಾಗ ಇರಬೇಕಾಗುತ್ತದೆ.
ಇದನ್ನೂ ಓದಿ:ಕೊರಗಜ್ಜ ದೈವದ ವೇಷ ಧರಿಸಿದ್ದ ಮುಸ್ಲಿಂ ವರನಿಂದ ಕ್ಷಮೆ ಯಾಚನೆ
ಅಡಚಣೆಗಳು
ಸಮುದ್ರ ತೀರದಲ್ಲಿ ಸ್ವಂತ ಜಾಗವನ್ನು ಹೊಂದಿರುವವರು ಕಡಿಮೆ. ಮಂಗಳೂರಿನ ಬೆಂಗ್ರೆ, ತಣ್ಣೀರುಬಾವಿಯಲ್ಲಿ ಜಾಗ ಇದ್ದರೂ ಬಹುತೇಕ ಜಾಗ ನವ ಮಂಗಳೂರು ಬಂದರಿನ ಅಧೀನದಲ್ಲಿ ಇದೆ. ಅದನ್ನು ಲೀಸ್ ನಲ್ಲಿ ಪಡೆಯ ಬೇಕಾಗಿದೆ. ಮೀನಿನ ವಾಸನೆ ಬರುವುದರಿಂದ ನಗರದಲ್ಲಿ ಘಟಕ ತೆರೆಯುವಂತಿಲ್ಲ. ಕಡಲ ತೀರವನ್ನು ಆಯ್ಕೆ ಮಾಡಿಕೊಳ್ಳುವ ಆವಶ್ಯಕತೆ ಇದೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಉದ್ಯಮ ಘಟಕವನ್ನು ಆರಂಭಿಸ ಬೇಕಾಗಿದೆ.
ಯೋಜನೆ ಕುರಿತಂತೆ ಪರಿಶೀಲಿಸಿ, ಘಟಕ ಆರಂಭಿಸಲು ಇರುವ ತೊಡಕುಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು.
– ಎಸ್. ಅಂಗಾರ,
ಮೀನುಗಾರಿಕಾ ಸಚಿವರು
ನಾವು ಪ್ರಯತ್ನ ಪಡುತ್ತಿದ್ದೇವೆ. ಆದರೆ ಸೂಕ್ತ ಜಾಗ ದೊರೆಯದಿರುವುದು ಮುಖ್ಯ ಸಮಸ್ಯೆ. ಜಾಗ ಒದಗಿಸುವ ವ್ಯವಸ್ಥೆ ಆಗಬೇಕು.
– ಸತೀಶ್ ಮಾಬೆನ್,
ಸಂಪನ್ಮೂಲ ವ್ಯಕ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.