ದಾನಿಗಳ ನೆರವಿನ ನವೀಕೃತ ಕೇಂದ್ರ ಉದ್ಘಾಟನೆಗೆ ಸಿದ್ಧ

Team Udayavani, Jan 21, 2018, 10:25 AM IST

21-Jan-1.jpg

ಮಹಾನಗರ: ಅದೊಂದು ಸಂಪೂರ್ಣ ಶಿಥಿಲಗೊಂಡ ಕಟ್ಟಡ. ಅಲ್ಲಿ ಪುಟಾಣಿ ಮಕ್ಕಳು ಕುಳಿತುಕೊಳ್ಳಲಾಗದೆ ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಅದೇ ಕೋಣೆಯಲ್ಲೇ ಅಡುಗೆ ಮಾಡಬೇಕಾದ ಸ್ಥಿತಿ. ಪಕ್ಕದಲ್ಲೇ ಶೌಚಾಲಯ! ಇದು ಕೆಲವು ಸಮಯಗಳ ಹಿಂದೆ ನಗರದ ಕೊಟ್ಟಾರ ಅಂಗನವಾಡಿ ಕೇಂದ್ರದ ದುಃಸ್ಥಿತಿ.

ಇಂದು ಈ ಅಂಗನವಾಡಿ ಕೇಂದ್ರದ ಚಿತ್ರಣವೇ ಬದಲಾಗಿದೆ. ಆದರೆ ಇದು ನೆರವೇರಿದ್ದು, ಯಾವುದೇ ಸರಕಾರಿ ಅನುದಾನದಿಂದಲ್ಲ. ಬದಲಾಗಿ ಮೂವರು ಸ್ನೇಹಿತರು ಸೇರಿಕೊಂಡು ಈ ಅಂಗನವಾಡಿಗೆ ಆಧುನಿಕ ಸ್ಪರ್ಶ ನೀಡಿದ್ದಾರೆ!

ಕೊಟ್ಟಾರ ಸಂತ ಪೀಟರ್‌ ಶಾಲೆಯ ಪಕ್ಕದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿ ಅಂಗನವಾಡಿ ಕೇಂದ್ರವೊಂದು ಕಾರ್ಯಾಚರಿಸುತ್ತಿದೆ. ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲದ ಕಾರಣ ಶಾಲೆಯ ಕಟ್ಟಡದಲ್ಲೇ ಅಂಗನವಾಡಿ ಕೇಂದ್ರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಕಟ್ಟಡವು ಶಿಥಿಲಗೊಂಡ ಹಿನ್ನೆಲೆಯಲ್ಲಿ ಮಕ್ಕಳನ್ನು ಇನ್ನೊಂದು ಕೋಣೆಗೆ ಸ್ಥಳಾಂತರಿಸಲಾಗಿತ್ತು.

ಕೇಂದ್ರದಲ್ಲಿ ಸುಮಾರು 40ರಷ್ಟು ಮಕ್ಕಳಿದ್ದು, ಒಂದು ಸಣ್ಣ ಕೋಣೆಯಲ್ಲೇ ಮಕ್ಕಳ ಆಟ-ಪಾಠ ಹಾಗೂ ಅಡುಗೆ ಕಾರ್ಯ ನಡೆಸಲಾಗುತ್ತಿತ್ತು. ಕೇಂದ್ರದ ಈ ದುಃಸ್ಥಿತಿಯನ್ನು ಕಂಡ ಉದ್ಯಮಿ ಕಿರಣ್‌ ಬಿ.ಎನ್‌., ಸಿಎಫ್‌ಎಎಲ್‌ನ ವಿಜಯ ಮೊರಾಸ್‌ ಹಾಗೂ ಅವರ ಇನ್ನೊಬ್ಬ ಸ್ನೇಹಿತ ಸೇರಿಕೊಂಡು ಲಕ್ಷಾಂತರ ರೂ. ಖರ್ಚು ಮಾಡಿ ಕೇಂದ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಏನೇನು ಅಭಿವೃದ್ಧಿ ?
ಕಟ್ಟಡದ ಮೇಲ್ಛಾವಣಿ, ಗೋಡೆ, ನೆಲದ ದುರಸ್ತಿ, ಪೈಂಟಿಂಗ್‌, ಪಾಲ್‌ ಸೀಲಿಂಗ್‌, ಮಿರರ್‌, ರ್ಯಾಕ್‌ಗಳ ಅಳವಡಿಕೆ, ಪುಟಾಣಿಗಳಿಗೆ ಆಟದ ಸಾಮಗ್ರಿ, ಪ್ಲೇ ಏರಿಯಾ, ಗಾರ್ಡನ್‌, ಆವರಣಗೋಡೆಯ ಕಾಮಗಾರಿ ನಡೆಸಲಾಗಿದೆ. ಅಂಗನವಾಡಿ ಕೇಂದ್ರ ಹೊರಗಿನ ಭಾಗದಲ್ಲಿದ್ದ ಸುಮಾರು 6 ಲೋಡ್‌ ಟಿಪ್ಪರ್‌ ಮಣ್ಣು ತೆಗೆದು ಗಾರ್ಡನ್‌ ನಿರ್ಮಿಸಿದ್ದು, ಜತೆಗೆ ಸುಮಾರು 15 ಸಾವಿರ ರೂ. ವೆಚ್ಚದ ಆಟದ ಸಾಮಗ್ರಿಗಳನ್ನೂ ಖರೀದಿಸಲಾಗಿವೆ.

ಅರ್ಲಿ ಲರ್ನಿಂಗ್‌ ಸೆಂಟರ್‌
ಈಗ ಸಂಪೂರ್ಣ ಆಧುನೀಕರಣಗೊಂಡಿರುವ ಅಂಗನವಾಡಿಯನ್ನು ದಾನಿಗಳನ್ನು ಅರ್ಲಿ ಲರ್ನಿಂಗ್‌ ಸೆಂಟರ್‌ ಆಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿ ದ್ದಾರೆ. ಸಿಎಫ್‌ಎಎಲ್‌ನ ಇಎಲ್‌ಸಿ ಶಿಕ್ಷಕಿಯೊಬ್ಬರು ಇಲ್ಲಿನ ಪುಟಾಣಿಗಳಿಗೆ ಬೋಧಿಸಲಿದ್ದಾರೆ. ಮಕ್ಕಳ ಮೇಲಿನ ಇವರ ಕಾಳಜಿ ಹಾಗೂ ಉತ್ತಮ ಶಿಕ್ಷಣ ನೀಡ ಬೇಕು ಎಂಬ ತುಡಿತ ಕಂಡು ಸಂತೋಷ ವಾಗುತ್ತಿದೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ.

ಶೌಚಾಲಯ ಅಭಿವೃದ್ಧಿ
ಅಂಗನವಾಡಿ ಕೇಂದ್ರ ಪಕ್ಕದಲ್ಲೇ ಶಿಥಿಲಾವಸ್ಥೆಯ ಶೌಚಾ ಲಯವೊಂದಿದೆ. ಎ. 10ರ ಬಳಿಕ ಶಾಲೆಯ ರಾಜಾ ಅವಧಿಯಲ್ಲಿ ಅದನ್ನು ದುರಸ್ತಿ ಪಡಿಸಲಾಗುವುದು. ಜತೆಗೆ ಅಲ್ಲೇ ಪಕ್ಕದಲ್ಲಿ ಇನ್ನೊಂದು ಶಿಥಿಲಾವಸ್ಥೆಯ ಕಟ್ಟಡವಿದ್ದು, ಅದನ್ನು ಸಂಪೂರ್ಣ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡ ಲಾಗುತ್ತದೆ. ಇಎಲ್‌ಸಿಯಲ್ಲಿ ಉಚಿತ ಶಿಕ್ಷಣ ಸಿಗುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದಾಗ ಹೊಸ ಕಟ್ಟಡವನ್ನು ಉಪಯೋಗಿಸಲಾಗುವುದು ಕಿರಣ್‌ ವಿವರಿಸುತ್ತಾರೆ. 

ಇಂತಹ ಕಾರ್ಯದಿಂದ ತೃಪ್ತಿ
ಇಂತಹ ಕಾರ್ಯಗಳು ಹೆಚ್ಚು ತೃಪ್ತಿ ನೀಡುತ್ತವೆ. ನಾವು ಕ್ರೀಡಾಕ್ಷೇತ್ರಕ್ಕೂ ಸಹಕಾರ ನೀಡಿ, ಯುವಕರನ್ನು ಆಸ್ತಿಯನ್ನಾಗಿಸುವ ಕಾರ್ಯ ಮಾಡುತ್ತಿದ್ದೇವೆ. ಅಂಗನವಾಡಿಯ ದುರಸ್ತಿಯ ಸಂದರ್ಭದಲ್ಲಿ ಹಣದ ಕುರಿತು ಯೋಚಿಸಿಲ್ಲ. ಸ್ಥಳೀಯ ವಿದ್ಯಾರ್ಥಿಗಳು ಇಲ್ಲಿ ಕಲಿಯಬೇಕು ಎನ್ನುವುದು ನಮ್ಮ ಆಸೆ.
ಕಿರಣ್‌ ಬಿ.ಎನ್‌.
   ದಾನಿ

ಜ. 22: ಉದ್ಘಾಟನೆ
ಅಂಗನವಾಡಿ ಕೇಂದ್ರದ ದುರಸ್ತಿ ಕಾರ್ಯ ಪ್ರಸ್ತುತ ಪೂರ್ಣಗೊಂಡಿದ್ದು, ಜ. 22ರಂದು ಬೆಳಗ್ಗೆ 9.30ಕ್ಕೆ ಉದ್ಘಾಟನೆ ನೆರವೇರಲಿದೆ. ಜತೆಗೆ ಹೊಸ ಕೇಂದ್ರವನ್ನು ‘ಸಂತ ಪೀಟರ್ ಕಿಂಡರ್‌ಗಾರ್ಡನ್‌ ಅಂಗನವಾಡಿ’ ಎಂದು ನಾಮಕರಣಗೊಳಿಸಲು ನಿರ್ಧರಿಸಿದ್ದಾರೆ.

ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

5

Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್‌!

4

Kinnigoli: ಘನ ವಾಹನ ನಿರ್ಬಂಧ; ಜನ ಪರದಾಟ

3

Mangaluru: ಕೊಕ್ಕಡದ ʼಸಾಂತಾ ಕ್ಲಾಸ್‌ʼ ವಿನ್ಸೆಂಟ್‌ ಕ್ರಿಸ್ಮಸ್‌ ತಿರುಗಾಟಕ್ಕೆ 25 ವರ್ಷ!

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.